ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಬೆಳವಣಿಗೆ: ಸಮಗ್ರ ನೀತಿ ಅಗತ್ಯ

Last Updated 29 ಜನವರಿ 2013, 20:03 IST
ಅಕ್ಷರ ಗಾತ್ರ

ಬೆಂಗಳೂರು: `ಇಲಾಖಾವಾರು ಪ್ರತ್ಯೇಕ ನೀತಿ ನಿಯಮಗಳು ದೇಶದ ಅಭಿವೃದ್ಧಿಗೆ ಪೂರಕವಾಗಿಲ್ಲ. ದೇಶದ ಆರ್ಥಿಕ ಬೆಳವಣಿಗೆಗೆ ವೇಗೋತ್ಕರ್ಷ ನೀಡಲು ಸಮಗ್ರ ನೀತಿಗಳನ್ನು ರೂಪಿಸಿ ಜಾರಿಗೊಳಿಸಬೇಕಾಗಿದೆ' ಎಂದು ಬಯೋಕಾನ್ ಕಂಪೆನಿಯ ಮುಖ್ಯಸ್ಥೆ ಡಾ.ಕಿರಣ್ ಮಜುಂದಾರ್ ಷಾ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹತ್ತಾರು ನಿರ್ಬಂಧಗಳಿಂದಾಗಿ ಕೃಷಿ ಮತ್ತು ಔಷಧ ಕ್ಷೇತ್ರಗಳಲ್ಲಿನ ಸಂಶೋಧನಾ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ' ಎಂದರು.

`ವಂಶವಾಹಿ ತಿರುಚಿದ (ಜಿಎಂ) ಬೆಳೆಗಳ ಕ್ಷೇತ್ರ ಪ್ರಯೋಗದ ಮೇಲೆ ನಿಷೇಧ ವಿಧಿಸಲಾಗಿದೆ. ಕ್ಲಿನಿಕಲ್ ಟ್ರಯಲ್ ನಡೆಸುವುದರ ಮೇಲೂ ನಿಬರ್ಂಧ ಹೇರಲಾಗಿದೆ' ಎಂದು ಅವರು ವಿಷಾದಿಸಿದರು.

`ಒಂದೊಂದು ಇಲಾಖೆ ಒಂದೊಂದು ಕಾನೂನು ಮಾಡುವ ಬದಲು ಸಂಬಂಧಪಟ್ಟ ಇಲಾಖೆಗಳ ಸಚಿವರು ಒಂದೆಡೆ ಸೇರಿ ಚರ್ಚಿಸಿ ಸಮಗ್ರವಾದ ನೀತಿಗಳನ್ನು ನಿರೂಪಿಸಬೇಕು' ಎಂದು ಹೇಳಿದರು.

`ಜೈವಿಕ ತಂತ್ರಜ್ಞಾನದಿಂದ (ಬಿಟಿ) ಮಾತ್ರವೇ ಆಹಾರ ಭದ್ರತೆ ಸಾಧ್ಯ. ಹೀಗಾಗಿ ಬಿಟಿಯಿಂದ ಮತ್ತೊಂದು ಹಸಿರು ಕ್ರಾಂತಿ ಉಂಟಾಗಲಿದೆ. ಪರೀಕ್ಷೆಯಿಂದ ಫಲಿತಾಂಶ ಪ್ರಕಟಣೆವರೆಗೆ ಸಂಶೋಧನೆಯ ಎಲ್ಲ ಚಟುವಟಿಕೆಗಳು ಪಾರದರ್ಶಕವಾಗಿರಬೇಕು. ವಂಚನೆ ಮಾಡುವ ಕಂಪೆನಿಗಳನ್ನು ಕಟ್ಟುನಿಟ್ಟಾಗಿ ಶಿಕ್ಷಿಸಬೇಕು' ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT