ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಬಲತೆ ಸಂಸ್ಥೆಯ ಉದ್ದೇಶ

Last Updated 17 ಅಕ್ಟೋಬರ್ 2011, 9:30 IST
ಅಕ್ಷರ ಗಾತ್ರ

ಬೈಲಹೊಂಗಲ: `ಜನರು ಸ್ವಾವಲಂಬನೆ ಜೀವನ ನಡೆಸಿ, ಆರ್ಥಿಕವಾಗಿ ಸಬಲರಾಗಲು ಅವಕಾಶ ನೀಡುವುದೇ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶ~ ಎಂದು ಜಿಲ್ಲಾ ನಿರ್ದೇಶಕ ಆನಂದ ಸುವರ್ಣ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ ಆಶ್ರಯದಲ್ಲಿ ಶಿವಬಸವ ಕಲ್ಯಾಣ ಮಂಟಪದಲ್ಲಿ ಆಪ್ತ ಸಮಾಲೋಚನಾ ಸಭೆ, ಪ್ರಗತಿಬಂಧು ಸಂಘಗಳಿಗೆ ಕೃಷಿ ಸಲಕರಣೆಗಳ ಹಾಗೂ ಆಯ್ದ ಪ್ರಾಥಮಿಕ ಶಾಲೆಗಳಿಗೆ ಬೋಧ ನೋಪಕರಣಗಳ ವಿತರಣಾ ಸಮಾರಂ ಭದಲ್ಲಿ ಮಾತನಾಡಿದ ಅವರು,  ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪುರಸಭೆಯ ಅಧ್ಯಕ್ಷೆ ಸರಸ್ವತಿ ಕಟ್ಟಿಮನಿ ಅಧ್ಯಕ್ಷತೆ ವಹಿಸಿ ಸ್ವಸಹಾಯ ಸಂಘಗಳಿಗೆ ದಾಖಲಾತಿ ಪತ್ರಗಳನ್ನು ವಿತರಿಸಿದರು.

ಬಿಇಒ ವಿನೋದ ನಾಯಕ ಪ್ರಾಥಮಿಕ ಶಾಲೆಗಳಿಗೆ ಬೋಧನೋಪ ಕರಣಗಳನ್ನು ವಿತರಿಸಿ ಶೈಕ್ಷಣಿಕ ಅಭಿವೃದ್ಧಿಗೆ ಧರ್ಮಸ್ಥಳ ಕ್ಷೇತ್ರದ ಕೊಡುಗೆ ಸ್ಮರಣೀಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ವಕೀಲ ಶ್ರೀಶೈಲ ಬೋಳಣ್ಣವರ, ಪುರಸಭೆ ಸದಸ್ಯೆ ಮಮ್ತಾಜ್ ಅಂಕಲೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಹದಿನೇಳು ಪ್ರಾಥಮಿಕ ಶಾಲೆಗಳಿಗೆ ರೂ. 18ಸಾವಿರ ಮೌಲ್ಯದ ಬೋಧನೋಪ ಕರಣಗಳನ್ನು, 200 ಪ್ರಗತಿ ಬಂಧು ಸಂಘಗಳಿಗೆ ರೂ. 2ಲಕ್ಷ ಮೌಲ್ಯದ ಕೃಷಿ ಸಲಕರಣೆಗಳನ್ನು ವಿತರಿಸಲಾಯಿತು. ಹೈನುಗಾರಿಕೆ ಅಧಿಕಾರಿ ಶಿವಾನಂದ ತೋಟದ ನಿರೂಪಿಸಿದರು. ದಿನರಾಜ ಶೆಟ್ಟಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಅನಿತಾ ವಂದಿಸಿದರು.

ಕರವೇ ಶಾಖೆ ಉದ್ಘಾಟನೆ
ಗೋಕಾಕ:
ಸಂಘಟನೆಗಳು ಕನ್ನಡ ನಾಡು ನುಡಿ ರಕ್ಷಣೆಯಲ್ಲಿ ಕಾರ್ಯೋ ನ್ಮುಖವಾಗಬೇಕೆಂದು ವಕೀಲ ವಿಠ್ಠಲ ಚಂದರಗಿ ಕರೆ ನೀಡಿದರು. ತಾಲ್ಲೂಕಿನ ಬಸಳಿಗುಂದಿ (ಬಾಳಿ ತೋಟ) ಗ್ರಾಮದಲ್ಲಿ ಇತ್ತೀಚೆಗೆ ಪ್ರವೀಣ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರವೇ ತಾಲೂಕಾಧ್ಯಕ್ಷ ಕಿರಣ ಡಮಾಮಗರ, ಬಾಳಪ್ಪ ಕುಳ್ಳೂರ, ಸಿದ್ದಪ್ಪ ಕಬಾಡಗಿ, ಗಣಪತಿ ಗೌಡರ, ಕಲ್ಲಯ್ಯ ಮಠಪತಿ, ಗಣಪತಿ ಜೋಗತಿ, ಮುತ್ತೆಪ್ಪ ಕಬಾಡಗಿ, ಸಿಂಧೂರ ಕುರಬನ್ನವರ, ಭಗವಂತ ಕಣಬರ್ಗಿ, ಕೃಷ್ಣಾ ಮುತ್ನಾಳ, ಕರೆಪ್ಪ ಮಡ್ಡೆಪ್ಪನವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT