ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಬಲತೆಗೆ ಸಲಹೆ

Last Updated 27 ಜನವರಿ 2012, 9:35 IST
ಅಕ್ಷರ ಗಾತ್ರ

ಮಾಲೂರು: ರೈತರು ಹಾಲು ಉತ್ಪಾದಿಸುವಲ್ಲಿ  ಖರ್ಚು  ಕಡಿಮೆ ಮಾಡುವ ಕೌಶಲ ಅಳವಡಿಸಿಕೊಳ್ಳುವುದರಿಂದ ಆರ್ಥಿಕವಾಗಿ ಸಬಲರಾಗಲು ಅನುಕೂಲ ವಾಗುತ್ತದೆ ಎಂದು ಕೋಮುಲ್ ಅಧ್ಯಕ್ಷ ಡಾ.ಎ.ವಿ.ಪ್ರಸನ್ನ ತಿಳಿಸಿದರು.
 
ಪಟ್ಟಣದಲ್ಲಿ ಬುಧವಾರ ನಡೆದ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕಿನ ಎಲ್ಲ 140 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿನ ರೈತರಿಗೆ ಕೋಮುಲ್ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
 
ರೈತರು ಬಿಎಂಸಿ (ಬಲ್ಕ ಮಿಲ್ಕ್ ಕೂಲರ್) ಕೇಂದ್ರಗಳ ಮೂಲಕ  ಗುಣಮಟ್ಟದ ಹಾಲನ್ನು ಸರಬರಾಜು ಮಾಡಲು ಸಹಕಾರಿಯಾಗುತ್ತದೆ. ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪಾರದರ್ಶಕತೆಯಿಂದ ರೈತರಿಗೆ ಒಕ್ಕೂಟದಿಂದ ಬರುವ ಸೌಲಭ್ಯಗಳನ್ನು ವಿತರಿಸಬೇಕೆಂದು ಹೇಳಿದರು.

ಕೋಮುಲ್ ಒಕ್ಕೂಟದ ವ್ಯವಸ್ಥಾಪಕ ಕೆ.ವಿ.ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಟ್ಟಕೋಡಿ ಕೃಷ್ಣಾರೆಡ್ಡಿ, ಉಪವ್ಯವಸ್ಥಾಪಕರಾದ ಡಾ.ವೆಂಕಟಾಚಲಪತಿ, ಡಾ.ವಿಶ್ವನಾಥ್, ನಾಗರಾಜು, ಶ್ರೀಧರ್, ಶಿವಶಂಕರ್, ವೇಣು, ಕೆಂಚೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT