ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆರ್ಥಿಕ ಸ್ಥಿತಿಗತಿ ಚಿಂತನೆ ಅಗತ್ಯ'

ಅರ್ಥಮಂಥನ, ಅರ್ಥಶಾಸ್ತ್ರ ಯುವ ಪ್ರತಿಭಾ ಘೋಷಣೆ-2013
Last Updated 2 ಸೆಪ್ಟೆಂಬರ್ 2013, 6:33 IST
ಅಕ್ಷರ ಗಾತ್ರ

ಹಾವೇರಿ: `ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಯ ಹಾದಿ ಹಿಡಿಯುತ್ತಿದೆ. ಭವಿಷ್ಯದ ಪ್ರಜೆಗಳೆಂದು ಕರೆಸಿಕೊಳ್ಳುವ ವಿದ್ಯಾರ್ಥಿಗಳು ಈ ಬಗ್ಗೆ ಚಿಂತನೆ ನಡೆಸಬೇಕು. ಅಲ್ಲದೇ, ಅರ್ಥಶಾಸ್ತ್ರದ ಅಧ್ಯಯನದ ಕಡೆಗೆ ಹೆಚ್ಚಿನ ಒಲವು ತೋರಬೇಕು' ಎಂದು ಹಂಸಭಾವಿ ಎಂ.ಎ.ಎಸ್.ಇ. ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎಚ್.ಸಣ್ಣಗೌಡರ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪರಿಷತ್, ಧಾರವಾಡ ಯೋಜನಾ ವೇದಿಕೆ, ಜಿ.ಎಚ್. ಕಾಲೇಜಿನ ಅರ್ಥಶಾಸ್ತ್ರ ಅಧ್ಯಯನ ವಿಭಾಗ ಜಂಟಿಯಾಗಿ ನಗರದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಅರ್ಥಮಂಥನ- 2013' ಹಾಗೂ ಜಿಲ್ಲಾ ಮಟ್ಟದ `ಅರ್ಥಶಾಸ್ತ್ರ ಯುವಪ್ರತಿಭಾ ಘೋಷಣೆ-2013' ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ವಿದ್ಯಾರ್ಥಿಗಳಲ್ಲಿ ಅರ್ಥಶಾಸ್ತ್ರದ ವಿಷಯದಲ್ಲಿ ಜಿಜ್ಞಾಸೆ ಮೂಡುತ್ತಿರುವುದಕ್ಕೆ ಕಾರಣ ಕಂಡು ಹಿಡಿಯುವ ಕೆಲಸ ನಡೆಯಬೇಕು.
ಅರ್ಥಶಾಸ್ತ್ರದಲ್ಲಿ ಯುವ ಪ್ರತಿಭೆಯನ್ನು ಗುರುತಿಸುವ ಅರ್ಥ ಸಂವಾದ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಜಿ.ಎಚ್.ಕಾಲೇಜಿನ ಪ್ರಾಚಾರ್ಯ ಡಾ.ಬಿ.ಸಿ.ಬನ್ನೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರ್ಥಶಾಸ್ತ್ರ ಕೇವಲ ಅಧ್ಯಯನ ವಿಷಯವಲ್ಲ. ಅದು ನಮ್ಮ ಜೀವನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುವ ವಿಷಯ. ವಿದ್ಯಾರ್ಥಿಗಳು ಕೂಡ ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ಮಾಡಿದರು.

ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ `ಅರ್ಥ ಜಿಜ್ಙಾಸೆ ಮತ್ತು ಅರ್ಥ ್ಲಶೇಷ್ಲಣೆ' ಜಿಲ್ಲಾ ಮಟ್ಟದ ಸಂವಾದದಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿ, ಹಂಸಭಾವಿ, ಶಿಗ್ಗಾವಿ, ಮೋಟೆಬೆನ್ನೂರು, ಸವಣೂರ, ಹಾಗೂ ಸುತ್ತಲಿನ ಸರ್ಕಾರಿ ಮತ್ತು ಖಾಸಗಿ ಅನುದಾನಿತ ವಿವಿಧ ಮಹಾವಿದ್ಯಾಲಯದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಗುಡಗೇರಿ ಕಾಲೇಜಿನ ಪ್ರಾಚಾರ್ಯ, ಕರ್ನಾಟಕ ವಿವಿ ಅರ್ಥಶಾಸ್ತ್ರ ಪರಿಷತ್ ಕಾರ್ಯದರ್ಶಿ ಎಚ್.ಬಿ. ಪಂಚಾಕ್ಷರಯ್ಯ,  ಪ್ರೊ.ಡಿ.ವಿ.ಹಿರೇಮಠ, ಪ್ರೊ.ಎಸ್.ಕೆ.ಪಾಟೀಲ, ಪ್ರೊ. ದೇವಸೂರ, ಪ್ರೊ.ನಾಯಕ, ಪ್ರೊ. ರತ್ನಮಾಲಾ ಕಡಪಟ್ಟಿ, ಬಸವರಾಜ ಕಲಕಟ್ಟಿ ಭಾಗವಹಿಸಿದ್ದರು.

ಪ್ರೊ. ಎನ್.ವಿ.ಕಂಬಾಳಿಮಠ ನಿರೂಪಿಸಿದರು. ಪ್ರೊ.ಎಸ್.ವಿ.ಉಜ್ಜೈನಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT