ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಹಿಂಜರಿತ: ಜ. 6ರಂದು ವಿಚಾರ ಸಂಕಿರಣ

Last Updated 3 ಜನವರಿ 2012, 8:15 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಆರ್ಥಿಕ ಹಿಂಜರಿತ ದಿಂದ ದೇಶದ ಸಣ್ಣ ಕೈಗಾರಿಕೆಗಳ ಮೇಲೆ ಉಂಟಾಗುವ ಪರಿಣಾಮದ ಕುರಿತ ವಿಚಾರ ಸಂಕಿರಣ ಕಾವೇರಿ ಕಾಲೇಜಿನಲ್ಲಿ ಜ.6ರಂದು ನಡೆಯಲಿದೆ.

ಯುಜಿಸಿ ಪ್ರಾಯೋಜಕತ್ವದಲ್ಲಿ ನಡೆಯಲಿರುವ ವಿಚಾರ ಸಂಕಿರಣವನ್ನು ಮೈಸೂರಿನ  ಕಂಪನಿ ಸೆಕ್ರೇಟಿರಿಯಸ್ ಸಂಸ್ಥೆಯ ಸಹಯೋಗದಲ್ಲಿ ಕಾವೇರಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ  ಮತ್ತು ನಿರ್ವಹಣೆ ಹಾಗೂ ಅರ್ಥಶಾಸ್ತ್ರ ವಿಭಾಗ ಆಯೋಜಿಸಿದೆ ಎಂದು ಪ್ರಾಂಶುಪಾಲ ಪ್ರೊ.ಬಿದ್ದಪ್ಪ ತಿಳಿಸಿದ್ದಾರೆ.

ಬೆಳಿಗ್ಗೆ 9.45ಕ್ಕೆ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಎನ್. ಉತ್ತಪ್ಪ ಉದ್ಘಾಟಿಸಿಲಿದ್ದಾರೆ.
ಮುಖ್ಯ ಅತಿಥಿಯಾಗಿ ಮೈಸೂರಿನ ನ್ಯಾಷನಲ್ ಟೆಸ್ಟ್ ಹೌಸಿನ ನಿವೃತ್ತ ನಿರ್ದೇಶಕ ಕೋಳೆರ ಎ.ಗೋಕುಲ್, ಸೆಕ್ರೇಟಿರಿಯಸ್ ಮುಖ್ಯಸ್ಥೆ ಟಿ.ಜಿ. ಶ್ರೀಲತಾ ಆಗಮಿಸಲಿದ್ದಾರೆ. ಕಾವೇರಿ ಕಾಲೇಜಿನ ಅಧ್ಯಕ್ಷ ಕೆ.ಎ.ಚಿಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಉತ್ತರಪ್ರದೇಶದ ನಿವೃತ್ತ ಮೇಜರ್ ಜನರಲ್ ಡಾ.ಒ.ಪಿ. ಸೋನಿ, ಮಂಗಳೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಪ್ರೊ.ಪಿ. ಯಡಪಡಿತ್ತಾಯ, ಹೈದರಾ ಬಾದ್‌ನ ಆಹ್ಲಾದರಾವ್, ಹಿಂದು  ಪತ್ರಿಕೆಯ ಜನರಲ್ ಮ್ಯಾನೇಜರ್ ಜಿ.ಆರ್. ವೆಂಕಟೇಶ್ ವಿವಿಧ ವಿಷಯ ಗಳ ಬಗ್ಗೆ ಪ್ರಬಂಧ ಮಂಡಿಸಲಿದ್ದಾರೆ.
ಸಂಜೆ 4ಗಂಟೆಗೆ  ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಾವೇರಿ ಕಾಲೇಜಿನ ಉಪಾಧ್ಯಕ್ಷ ಎ.ಟಿ.ಭೀಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಚಿನ್ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಪ್ರಾನ್ಸಿಸ್ ಚೆರುನಿಲಮ್ ಮುಖ್ಯ ಅತಿಥಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಸುರಕ್ಷತಾ ಸಪ್ತಾಹ ಇಂದಿನಿಂದ

ಮೈಸೂರು: 23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಜ.3 ರಿಂದ 7 ರವರೆಗೆ ನಗರ ಪೊಲೀಸ್ ಆಚರಿಸಲಿದೆ.
ಸಪ್ತಾಹದ ಅಂಗವಾಗಿ ಜ.3 ರಂದು ಬೆಳಿಗ್ಗೆ 11.30ಕ್ಕೆ ಕೊಲಂಬಿಯ ಏಷಿಯ ಆಸ್ಪತ್ರೆ ಆವರಣದಲ್ಲಿ ಪೊಲೀಸರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಕಮಿಷನರ್ ಸುನಿಲ್ ಅಗರವಾಲ್ ಚಾಲನೆ ನೀಡಲಿದ್ದಾರೆ.
ಸಾರ್ವಜನಿಕರಿಗೆ ಕರಪತ್ರ ಹಂಚುವುದು, ಜಾಹಿರಾತು ಫಲಕಗಳ ಪ್ರದರ್ಶನ, ರಸ್ತೆ ಸುರಕ್ಷತೆ ಸಪ್ತಾಹದ ಬ್ಯಾನರ್‌ಗಳ ಪ್ರದರ್ಶನ, ಪಾದಚಾರಿಗಳ ಸುರಕ್ಷತೆ ಬಗ್ಗೆ ಫುಟ್‌ಪಾತ್ ತೆರವುಗೊಳಿಸಿ ಅರಿವು ಮೂಡಿಸುವುದು, ವೃತ್ತಿಪರ ಚಾಲಕರುಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಕಾರ್ಯಾಗಾರ, ವಿವಿಧ ಶಾಲೆಗಳಿಗೆ ಭೇಟಿ ನೀಡಿ ಉಪನ್ಯಾಸ ನೀಡುವುದು, ಸಾರ್ವಜನಿಕರೊಂದಿಗೆ ರಸ್ತೆ ಸುರಕ್ಷತೆ ಬಗ್ಗೆ ಸಂವಾದ, ಶಾಲಾ ಮಕ್ಕಳಿಗೆ ಸೈಕಲ್ ಜಾಥಾ ಇತರೆ ಕಾರ್ಯಕ್ರಮಗಳನ್ನು ಸಪ್ತಾಹದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT