ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಒ ಚೆಕ್‌ಪೋಸ್ಟ್ ಮತ್ತೆ ಝಳಕಿಗೆ

Last Updated 8 ಜನವರಿ 2014, 6:42 IST
ಅಕ್ಷರ ಗಾತ್ರ

ಚಡಚಣ: ಚಡಚಣದ ಹೊರ ವಲಯದಲ್ಲಿರುವ ದೇವರ ನಿಂಬರಗಿ ಕ್ರಾಸ್‌ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ–13 ಧೂಳಖೇಡ ಗ್ರಾಮದ ಹತ್ತಿರ ಎಂಟು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿದ್ದ  ಆರ್‌ಟಿಒ ಕಚೇರಿಗಳನ್ನು ಸ್ಥಗಿತಗೊಳಿಸಿ  ಪುನ:  ಝಳಕಿ ಗ್ರಾಮಕ್ಕೆ ಮಂಗಳವಾರ ಸ್ಥಳಾಂತರಿಸಲಾಗಿದೆ.

30 ವರ್ಷಗಳಿಂದ ಝಳಕಿ  ಕ್ರಾಸ್‌ ನಲ್ಲಿ ಕಾರ್ಯ  ನಿರ್ವಹಿಸುತ್ತಿದ್ದ  ಆರ್‌ಟಿಒ ಕಚೇರಿಯನ್ನು ಕಳೆದ ಮೇ 18 ರಂದು ಸ್ಥಗಿತಗೊಳಿಸಿ, ಚಡಚಣ ಹಾಗೂ ಧೂಳಖೆೇಡ  ಗ್ರಾಮಗಳಿಗೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭ ದಲ್ಲಿ  ಸ್ಥಳಾಂತರಕ್ಕೆ ಭಾಗದ ಪ್ರತಿನಿಧಿ ಗಳು ಹಾಗೂ ಸಾರ್ವಜನಿಕರು, ವರ್ತಕರ  ತೀವ್ರ ವಿರೋಧ ವ್ಯಕ್ತಪಡಿಸಿ ದ್ದರೂ ಸ್ಥಳಾಂತರ ಮಾಡಲಾಗಿತ್ತು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಳಾಂತರಕ್ಕೆ  ಸಂಬಂಧಿ ಸಿದಂತೆ ಇಂಡಿ ಶಾಸಕ ಸಾರ್ವಭೌಮ ಬಗಲಿ ಹಾಗೂ ಆಗಿನ ಸಾರಿಗೆ ಸಚಿವ ಆರ್‌.ಅಶೋಕ ಅವರ  ಮಧ್ಯೆ ವಾದ ವಿವಾದ ನಡೆದು  ಸ್ಥಳಾಂತರ ನೆನಗು ದಿಗೆ ಬಿದ್ದಿತ್ತು. ಇದು ರಾಜ್ಯವ್ಯಾಪಿ ಸುದ್ದಿಯಾಗಿತ್ತು. ವಿಧಾನಸಭೆ  ಚುಣಾ ವಣೆ ಮುಗಿಯುತ್ತಿದ್ದಂತೆ  ಝಳಕಿ  ಕ್ರಾಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ  ಚೆಕ್‌ಪೋಸ್ಟ್‌ನ್ನು  ಸ್ಥಳಾಂತರಿಸಲಾಗಿತ್ತು.

ಝಳಕಿ ಗ್ರಾಮಸ್ಥರು  ಹಾಗೂ ವರ್ತಕರು ಸರ್ಕಾರದ ಮೇಲೆ  ಒತ್ತಡ ಹೇರಿ ಸಾರಿಗೆ ಸಚಿವ ರಾಮಲಿಂಗಾರಡ್ಡಿ ಅವರನ್ನು ಝಳಕಿ ಗ್ರಾಮಕ್ಕೆ  ಕರೆಸಿ  ಮನವಿ ಸಲ್ಲಿಸಿದ್ದರು. ಆಗ  ಸ್ಥಳಾಂತರ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದ ಸಚಿವರು, ಜ.2 ರಂದು ಸ್ಥಳಾಂತರಕ್ಕೆ ಆದೇಶ ಮಾಡಿದ್ದಾರೆ.

ಝಳಕಿ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರ್‌ಟಿಒ ಕಚೇರಿ ಮೇ 18 ರಂದು ಸ್ಥಳಾಂತರಗೊಳ್ಳುತ್ತಿ ದ್ದಂತೆಯೆ ಅಲ್ಲಿನ ಕಚೇರಿಯನ್ನೂ ಧ್ವಂಸ ಗೊಳಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಕಚೇರಿ ಕಾರ್ಯಾರಂಭ ಮಾಡುತ್ತಿ ದ್ದಂತೆ  ಪಾಳುಬಿದ್ದ ಕಚೇರಿಯ ದುರಸ್ತಿ ಕಾರ್ಯ  ಭರದಿಂದ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT