ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಪಿಎಸ್ ಗೆ ವಿವಿಧ ರಾಜ್ಯಗಳಿಂದ ಐದು ರೇಕ್ ಕಲ್ಲಿದ್ದಲು ಪೂರೈಕೆ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಯಚೂರು: ಇಲ್ಲಿನ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ(ಆರ್‌ಟಿಪಿಎಸ್)  ಒಟ್ಟು 8 ಘಟಕಗಳಲ್ಲಿ 5 ಘಟಕಗಳು ವಿದ್ಯುತ್ ಉತ್ಪಾದಿಸುತ್ತಿದ್ದು, ಇದರಿಂದ 800 ಮೆಗಾವಾಟ್ ವಿದ್ಯುತ್ ರಾಜ್ಯಕ್ಕೆ ಲಭಿಸುತ್ತಿದೆ.

1, 3 ಹಾಗೂ 8ನೇ ಘಟಕಗಳು ವಿದ್ಯುತ್ ಉತ್ಪಾದಿಸುತ್ತಿಲ್ಲ. 2, 4, 5, 6 ಮತ್ತು 7ನೇ ಘಟಕಗಳು ವಿದ್ಯುತ್ ಉತ್ಪಾದಿಸುತ್ತಿವೆ.

3 ಮತ್ತು 8ನೇ ಘಟಕಗಳು ಈ ಮೊದಲೇ ತಾಂತ್ರಿಕ ಕಾರಣದಿಂದ ಬಂದ್ ಆಗಿದ್ದವು. 1ನೇ ಘಟಕವು ಸೋಮವಾರ ಬೆಳಿಗ್ಗೆ ತಾಂತ್ರಿಕ ಸಮಸ್ಯೆಗೀಡಾಗಿದ್ದರಿಂದ ಆ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ ಎಂದು ಆರ್‌ಟಿಪಿಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಭಾಸ್ಕರ್ `ಪ್ರಜಾವಾಣಿ~ಗೆ ತಿಳಿಸಿದರು.

ಕಲ್ಲಿದ್ದಲು ಪೂರೈಕೆ: ಆರ್‌ಟಿಪಿಎಸ್ ಕಲ್ಲಿದ್ದಲು ಸಂಗ್ರಹಾಗಾರದಲ್ಲಿ ಸದ್ಯ 1.9 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹ ಇದೆ. ಮಂಗಳವಾರ ಮಹಾರಾಷ್ಟ್ರದ ನಾಗಪುರದ ವೆಸ್ಟ್ ಕೋಲ್ ಮೈನ್‌ನಿಂದ 2 ರೇಕ್ (ಒಂದು ರೇಕ್‌ನಲ್ಲಿ 3,500 ಟನ್), ಒರಿಸ್ಸಾದ ತಾಲ್ಚೇರಿಯಿಂದ 2 ರೇಕ್ ಹಾಗೂ ವಿದೇಶದಿಂದ ಆಮದು ಮಾಡಿಕೊಳ್ಳಲಾದ ಕಲ್ಲಿದ್ದಲಿನಲ್ಲಿ ಚೆನ್ನೈನಿಂದ 1 ರೇಕ್ ಪೂರೈಕೆ ಆಗಿದೆ. ಮಂಗಳವಾರವೇ ಒಟ್ಟು ಐದು ರೇಕ್ ಪೂರೈಕೆ ಆಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT