ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಪಿಎಸ್: ಮತ್ತೆ 1ನೇ ಘಟಕ ಬಂದ್

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಯಚೂರು: ಇಲ್ಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) 8 ಘಟಕಗಳಲ್ಲಿ ಮೂರು ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ ಆರು ಘಟಕಗಳಲ್ಲಿ ಒಂದು ಘಟಕ ಮತ್ತೆ ಸ್ಥಗಿತಗೊಂಡಿದೆ. ಹೀಗಾಗಿ 1,000 ಮೆಗಾವಾಟ್ ವಿದ್ಯುತ್ ಉತ್ಪಾದನೆ 800 ಮೆಗಾವಾಟ್‌ಗೆ ತಗ್ಗಿದೆ.

ಮೊದಲು 3 ಮತ್ತು 8ನೇ ಘಟಕ ಮಾತ್ರ ದುರಸ್ತಿಯಲ್ಲಿದ್ದವು. ಸೋಮವಾರ 1ನೇ ಘಟಕದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ತೋಯ್ದ ಮತ್ತು ಕಳಪೆ ಕಲ್ಲಿದ್ದಲು ಬಳಕೆ ಇದಕ್ಕೆ ಕಾರಣವಾಗಿದೆ.

ಈ ಘಟಕ ದುರಸ್ತಿಯಾಗಲು ಕನಿಷ್ಠ 15 ದಿನ ಆಗಲಿದೆ ಎಂದು ಆರ್‌ಟಿಪಿಎಸ್ ಮೂಲಗಳು ತಿಳಿಸಿವೆ. ಇದರಿಂದ 160ರಿಂದ 180 ಮೆಗಾವಾಟ್ ವಿದ್ಯುತ್ ಲಭಿಸದಂತಾಗಿದೆ. ಕಳಪೆ ಕಲ್ಲಿದ್ದಲು ಬಳಸುತ್ತಿರುವುದು, ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡಿರುವುದು, ತಾಂತ್ರಿಕ ಕಾರಣದಿಂದ ಈ ಬಿಕ್ಕಟ್ಟು ಎದುರಾಗಿದೆ.

ಎರಡು ದಿನಗಳಿಂದ ಆರ್‌ಟಿಪಿಎಸ್‌ಗೆ ಪ್ರತಿನಿತ್ಯ ತಾಲ್ಚೇರಿ, ವೆಸ್ಟ್ ಕೋಲ್ ಮೈನ್‌ನಿಂದ ಎರಡು ರೇಕ್( ಒಂದು ರೇಕ್‌ನಲ್ಲಿ 3500 ಟನ್) ಪೂರೈಕೆ ಆಗುತ್ತಿದೆ. ಕಳಪೆ ಮತ್ತು ತೋಯ್ದ ಕಲ್ಲಿದ್ದಲು ಬಳಕೆಯಿಂದ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆ ಹೆಚ್ಚಾಗಿದೆ.

ಈ ರೀತಿ ಕಳಪೆ ಕಲ್ಲಿದ್ದಲು ಬಳಕೆ ಮತ್ತು ನಿರಂತರ ಒತ್ತಡದಿಂದ ಸೋಮವಾರ 1ನೇ ಘಟಕ ಸ್ಥಗಿತಗೊಂಡಿದ್ದಾಗಿ ಆರ್‌ಟಿಪಿಎಸ್ ಅಧಿಕಾರಿಗಳು ಹೇಳುತ್ತಾರೆ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT