ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಖಾತೆಗೂ ಕನ್ನ!

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ವೆಬ್ ಸೈಟ್‌ಗೂ ಹ್ಯಾಕರ್ಸ್ ದಾಳಿ ನಡೆಸಲು ಯತ್ನಿಸಿರುವುದು ಕಳೆದ ವಾರ ಬೆಳಕಿಗೆ ಬಂದಿದೆ. ಆಗ ಒಂದಿಡೀ ದಿನ ವೆಬ್ ಪುಟ ಸ್ಥಗತಿಗೊಂಡಿತ್ತು. ಏಕೈಕ ಐ.ಪಿ ವಿಳಾಸದ ಮೂಲಕ (ಸಿಂಗಲ್ ಇಂಟರ್‌ನೆಟ್ ಪ್ರೊಟೊಕಾಲ್) ಆ ಹ್ಯಾಕರ್‌ಹಲವು ಬಾರಿ ಡೊಮೈನ್ ನೇಮ್ ಸಿಸ್ಟಂ ಮೇಲೆ (ಡಿಎನ್‌ಎಸ್) ದಾಳಿ ನಡೆಸಿದ್ದಾನೆ.

ಈಗ ಈ ಐ.ಪಿ ವಿಳಾಸದ ಮೇಲೆ ನಿಷೇಧ ಹೇರಲಾಗಿದೆ. ಈ ದಾಳಿಯಲ್ಲಿ ಯಾವುದೇ ಮಹತ್ವದ ಮಾಹಿತಿ-ದತ್ತಾಂಶ ಕಳುವಾಗಿಲ್ಲ ಎಂದು `ಆರ್‌ಬಿಐ~ ವಕ್ತಾರ ಸ್ಪಷ್ಟಪಡಿಸಿದ್ದಾರೆ.
ಹ್ಯಾಕರ್ ದಾಳಿ ಮಾಡಿರುವ ಐ.ಪಿ ವಿಳಾಸ ತಿಳಿದುಬಂದಿದ್ದರೂ, ಈ ದಾಳಿ ಯಾವ ಭೌಗೋಳಿಕ ಪ್ರದೇಶದಿಂದ ನಡೆದಿದೆ ಎನ್ನುವುದನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.  ಈ ಕುರಿತು `ಆರ್‌ಬಿಐ~ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಮುಂಬೈ ಸೈಬರ್ ಕ್ರೈಂ ವಿಭಾಗದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT