ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಎಫ್ ಷೇರು ವಿಕ್ರಯಕ್ಕೆ ಒಪ್ಪಿಗೆ

ರೂ 360ಕೋಟಿ ಸಂಗ್ರಹ ನಿರೀಕ್ಷೆ
Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): `ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್(ಆರ್‌ಸಿಎಫ್) ಲಿ.'ನಲ್ಲಿನ ತನ್ನ ಪಾಲಿನಲ್ಲಿ ಶೇ 12.5ರಷ್ಟು ಷೇರುಗಳನ್ನು ವಿಕ್ರಯಿಸಿ ಅಂದಾಜುರೂ360 ಕೋಟಿ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

`ಸರ್ಕಾರ ಆರ್‌ಸಿಎಫ್‌ನಲ್ಲಿ ಶೇ 92.5ರಷ್ಟು ಷೇರುಗಳನ್ನು ಹೊಂದಿದೆ.  ಈಗ ಶೇ 12.5ರಷ್ಟು ಷೇರುಗಳನ್ನು ಮಾರಾಟ ಮಾಡಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ) ಒಪ್ಪಿಗೆ ಸೂಚಿಸಿದೆ' ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಬುಧವಾರ ಇಲ್ಲಿ ಹೇಳಿದರು.

ಸದ್ಯ ಷೇರುಪೇಟೆಯಲ್ಲಿ `ಆರ್‌ಸಿಎಫ್' ಒಂದು ಷೇರಿನ ಬೆಲೆರೂ57.80 ಇದ್ದು, ಬುಧವಾರ ಮಧ್ಯಾಹ್ನದ ವಹಿವಾಟಿನಲ್ಲಿ ಶೇ 3.77ರಷ್ಟು ಮೌಲ್ಯ ಹೆಚ್ಚಿಸಿಕೊಂಡಿದೆ.

ಕೇಂದ್ರ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ `ಎನ್‌ಟಿಪಿಸಿ', ಆಯಿಲ್ ಇಂಡಿಯ, `ಎಂಎಂಟಿಸಿ', ಎಸ್‌ಎಐಎಲ್, `ಬಿಎಚ್‌ಇಎಲ್' ಸೇರಿದಂತೆ ತನ್ನ ಒಡೆತನದ ಹಲವು ಕಂಪೆನಿಗಳಲ್ಲಿನ ಕೆಲವು ಷೇರುಗಳನ್ನು ವಿಕ್ರಯಿಸುವ ಮೂಲಕ ಒಟ್ಟುರೂ30,000 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ಆರ್‌ಸಿಎಫ್ ಷೇರು ವಿಕ್ರಯ ನಿರ್ಧಾರವೂ ಅದರ ಭಾಗವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT