ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮೇಲ: ಡೋಹರ ಕಕ್ಕಯ್ಯ ಜಯಂತ್ಯುತ್ಸವ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಆಲಮೇಲ (ವಿಜಾಪುರ ಜಿಲ್ಲೆ): ರಾಜಕೀಯವಾಗಿ ಸಬಲರಾದಾಗ ಮಾತ್ರ ಸಮಾಜದ ಸುಧಾರಣೆ ಸಾಧ್ಯ. ಈ ನಿಟ್ಟಿನಲ್ಲಿ ರಾಜಕೀಯ ಬಲವರ್ಧನೆಗೆ ಡೋಹರ ಸಮಾಜ ಮುಂದಾಗಬೇಕಿದೆ ಎಂದು ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.

ಇಲ್ಲಿನ ಡೋಹರ ಕಕ್ಕಯ್ಯ ಯುವಕ ಸೇವಾ ಸಮಿತಿ ಸಂಘಟಿಸಿದ್ದ  ಶರಣ ಮಹಾಪ್ರಸಾದಿ ಡೋಹರ ಕಕ್ಕಯ್ಯನವರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

`ಸಂಘಟನೆ ಕಟ್ಟುವಲ್ಲಿ ಇಂದು ಸಮಾಜ ಬಹಳ ಹಿಂದೆ ಬಿದ್ದಿದೆ. ಇದಕ್ಕೆ ಶಿಕ್ಷಣದ ಕೊರತೆಯೇ ಕಾರಣ. ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸಮಾಜ ಬಾಂಧವರು ಮುಂದಾಗಬೇಕು~ ಎಂದರು.

ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಮಹಾ ದಾಸೋಹಿ ಡೋಹರ ಕಕ್ಕಯ್ಯನವರ ಹೆಸರಡುವಂತೆ ಸರಕಾರಕ್ಕೆ ಆಗ್ರಹಿಸುವುದಾಗಿ ಕಟಕಧೋಂಡ ಹೇಳಿದರು.ಯಶೋದಾ ನಾರಾಯಣಕರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ  ಮಾಜಿ ಸಚಿವ ಎಂ.ಸಿ. ಮನಗೂಳಿ, ಬಸವರಾಜ ಧನಶ್ರೀ, ಜಿ.ಪಂ. ಸದಸ್ಯ ಮಲ್ಲಪ್ಪ ತೋಡಕರ , ಶಿವಕುಮಾರ  ಗುಂದಗಿ, ಪ್ರಭು ವಾಲೀಕಾರ, ರಮೇಶ ಭಂಟನೂರ ಭಾಗವಹಿಸಿದ್ದರು.

ಗುರುಲಿಂಗ ಶಿವಾಚಾರ್ಯ, ಚಂದ್ರಶೇಖರ ಶಿವಾಚಾರ್ಯ, ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಶರಣಬಸವ ಶರಣರು ಸಾನ್ನಿಧ್ಯ ವಹಿಸಿದ್ದರು.ದೇವಾನಂದ ಖಂಧಾರೆ ಸ್ವಾಗತಿಸಿದರು. ಶಿವು ಗುಂದಗಿ ನಿರೂಪಿಸಿದರು. ಶ್ರೀಶೈಲ ಮಠಪತಿ ವಂದಿಸಿದರು.

ಭವ್ಯ ಮೆರವಣಿಗೆ: ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶರಣ ಕಕ್ಕಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ 101 ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಸಮಾಜದ ಧುರೀಣರಾದ ಈಶ್ವರ ನಾರಾಯಣಕರ, ಶಿವಾಜಿ ಕಟಕಧೋಂಡ, ಯಶೋದಾ ನಾರಾಯಣಕರ, ಯುವಕ ಸಂಘದ ಅಧ್ಯಕ್ಷ ಸುಭಾಸ ನಾರಾಯಣಕರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT