ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಿವ್ ಎಲೆಗಳ ಕಿರೀಟವೂ ಚಿನ್ನದ ಪದಕಗಳೂ..

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಒಲಿಂಪಿಕ್ ಪದಕ ಪಡೆಯುವುದು ಬಹಳಷ್ಟು ಎಲ್ಲ ಕ್ರೀಡಾಪಟುಗಳ ಕನಸು. ಆದರೆ ಅದು ನನಸಾಗುವುದು ಬಹಳ ಕಡಿಮೆ ಮಂದಿಗೆ. ಪ್ರಾಚೀನ ಒಲಿಂಪಿಕ್ಸ್‌ನಲ್ಲಿ ವಿಜೇತರಿಗೆ ಪದಕಗಳೇನು ಸಿಗುತ್ತಿರಲಿಲ್ಲ.

ಪವಿತ್ರ ಜ್ಯೂಸ್ ದೇವಾಲಯದ ಆಸುಪಾಸಿನಲ್ಲಿ ಬೆಳೆಯುತ್ತಿದ್ದ ಆಲಿವ್ ಮರದ ಎಲೆಗಳಿಂದ ಹೆಣೆದ `ಕಿರೀಟ~ವನ್ನೇ ಗೆದ್ದವರ ತಲೆಯ ಮೇಲೆ ಇಡಲಾಗುತ್ತಿತ್ತು. ಪ್ರಾಚೀನ ಒಲಿಂಪಿಕ್ಸ್ ನಲ್ಲಿ ವಿಜೇತರಿಗೆ ರಾಜಾಶ್ರಯವಂತೂ ಸಿಗುತ್ತಿತ್ತು. ಜೊತೆಗೆ ಅಭಿಮಾನಿಗಳ ಉಡುಗೊರೆಗಳೂ ಬರುತ್ತಿದ್ದವು.

ಹಿಂದೆಲ್ಲಾ  ಕ್ರೀಡಾ ಸ್ಪರ್ಧೆ ಗೆಲ್ಲುವುದು ಶ್ರೇಷ್ಟತೆಯ ಸಂಕೇತವಾಗಿತ್ತು. ಒಲಿಂಪಿಕ್ ವೀರರ ಪ್ರತಿಮೆಗಳು ಅನಾವರಣಗೊಂಡಿದ್ದಕ್ಕೆ ಅನೇಕ ನಿದರ್ಶನಗಳಿವೆ. ಈಗ ಒಲಿಂಪಿಕ್ ವಿಜೇತರಿಗೆ ನೌಕರಿ, ನಗದು ಬಹುಮಾನ, ವಾಹನಗಳ ಉಡುಗೊರೆಗಳ ಜತೆಗೆ ಅಪಾರ ಹಣದ ಪ್ರಾಯೋಜಕತ್ವವೂ ಲಭಿಸುತ್ತಿದೆ.

ಆಧುನಿಕ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಕೊಡಲಾರಂಭಿಸಿದ್ದು, ಆಗಿಂದಾಗ್ಗೆ ಆ ಪದಕಗಳ ಸ್ವರೂಪದಲ್ಲಿ ಬದಲಾವಣೆಗಳಾಗಿವೆ.ಅಥೆನ್ಸ್‌ನಲ್ಲಿ 1896ರಲ್ಲಿ ಜರುಗಿದ ಮೊದಲ ಆಧುನಿಕ ಒಲಿಂಪಿಕ್ಸ್‌ನಲ್ಲಿ ಮೊದಲ ಸ್ಥಾನ ಗೆದ್ದವರಿಗೆ ಚಿನ್ನದ ಪದಕಗಳನ್ನು ನೀಡಿರಲಿಲ್ಲ. ಆಗ ಅಗ್ರಸ್ಥಾನ ಗಳಿಸಿದ ಕ್ರೀಡಾಪಟುಗಳಿಗೆ ಲಭಿಸಿದ್ದು ಬೆಳ್ಳಿಯ ಪದಕ ಹಾಗೂ ಆಲೀವ್ ಎಲೆಗಳ ಒಂದು ಗುಚ್ಚ.

ದ್ವಿತೀಯ ಸ್ಥಾನ ಪಡೆದವರಿಗೆ ದಕ್ಕಿದ್ದು ಕಂಚಿನ ಪದಕ ಹಾಗೂ ಆಲೀವ್ ಎಲೆಗಳ ಗುಚ್ಛ ಮಾತ್ರ. 1900ರಲ್ಲಿ ಫ್ರಾನ್ಸ್‌ನಲ್ಲಿ ಪದಕಗಳಿಗೆ ಬದಲಾಗಿ ಚಿತ್ರ ಕಲಾಕೃತಿಗಳನ್ನು ವಿಜೇತರಿಗೆ ನೀಡಲಾಗುತಿತ್ತು. ಆ ಕಾಲಕ್ಕೆ ಪ್ರಸಿದ್ದ ಚಿತ್ರ ಕಲಾವಿದರು ರಚಿಸುತ್ತಿದ್ದ ಚಿತ್ರ ಕಲಾಕೃತಿಗಳು ಪದಕಗಳಿಗಿಂತ ಹೆಚ್ಚು ಬೆಲೆ ಬಾಳುತ್ತಿದ್ದ ಕಾರಣಕ್ಕಾಗಿ ಕ್ರೀಡಾಪಟುಗಳಿಗೆ ನೀಡಲಾಯಿತು.

3ನೇ ಒಲಿಂಪಿಕ್ (1904) ನಂತರ ನಡೆದ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಶುದ್ಧ ಚಿನ್ನದ ಪದಕವನ್ನು ನೀಡಲಾಗುತ್ತಿತ್ತು. 1912ರಲ್ಲಿ  ಪ್ರಥಮ ಸ್ಥಾನ ಪಡೆದವರಿಗೆ ಪರಿಶುದ್ಧ ಚಿನ್ನದಿಂದ ತಯಾರಿಸಲಾದ ಪದಕವನ್ನು ನೀಡಲಾಯಿತು. ಆದರೆ ಮುಂದಿನ ಕ್ರೀಡಾಕೂಟಗಳಲ್ಲಿ ಸಂಪೂರ್ಣವಾಗಿ ಚಿನ್ನದಲ್ಲೇ ತಯಾರಿಸಲಾದ ಪದಕಗಳನ್ನು ನೀಡುವುದನ್ನು ನಿಲ್ಲಿಸಲಾಯಿತು.

ಪ್ರಸ್ತುತ ಒಲಿಂಪಿಕ್ ವಿಜೇತರಿಗೆ ನೀಡಲಾಗುವ ಪದಕಗಳಿಗೆ ಕನಿಷ್ಠ 6 ಗ್ರಾಂ ಚಿನ್ನದ ಲೇಪನ ಇರಬೇಕೆಂಬ ನಿಯಮ ಜಾರಿಗೆ ಬಂದಿದೆ. ಬೆಳ್ಳಿ ಪದಕಗಳಲ್ಲಿ ಶೇಕಡ 92.5 ರಷ್ಟು ಪರಿಶುದ್ದ ಬೆಳ್ಳಿ ಇರಬೇಕೆಂದು ನಿರ್ದೇಶನ ನೀಡಲಾಗಿದೆ. 1978ರಿಂದ ಈಚೆಗೆ ಪದಕಗಳ ತಯಾರಿಕೆಯಲ್ಲಿ ಸೂಕ್ತವಾದ ನೀತಿ ನಿಯಮಗಳನ್ನು ಹೊಂದಿರಬೇಕೆಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿರ್ಧಾರ ಮಾಡಿದೆ.
      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT