ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳುವ ಪಕ್ಷದವರಿಗೆ ಶಿಕ್ಷೆ ಇಲ್ಲವೇ?

Last Updated 16 ಜನವರಿ 2011, 15:55 IST
ಅಕ್ಷರ ಗಾತ್ರ

ವಿಧಾನ ಮಂಡಲದ ಕಲಾಪಗಳು ನಡೆದ ದಾಟಿ ನೋಡಿದರೆ, ನಮಗೆ ಇಂತಹ ಪ್ರಜಾಪ್ರಭುತ್ವದ ಅವಶ್ಯಕತೆಯಿತ್ತೇ ಎಂಬ ಗಂಭೀರ ಪ್ರಶ್ನೆ ಮತದಾರರನ್ನು ಕಾಡುತ್ತಿದೆ. ವಿಶ್ವಾಸ ಮತಯಯಾಚನೆ ಸಂದರ್ಭದಲ್ಲಿ ಸದನದೊಳಗೆ ನಡೆದ ಗಲಾಟೆ ಈ ರಾಜ್ಯವು ಕಾಪಾಡಿಕೊಂಡಿದ್ದ ಉತ್ತಮ ಸಂಸದೀಯ ಸಂಸ್ಕೃತಿಗೆ ಮಸಿ ಬಳಿದಂತಿದೆ. ಸದನದೊಳಗೆ ಅದರ ಘನತೆ ಎತ್ತಿಯಿಡಿಯುವುದು ಆಡಳಿತ ಮತ್ತು ಪ್ರತಿಪಕ್ಷಗಳೆರಡರ ಆದ್ಯ ಕರ್ತವ್ಯ.

ಅಪ್ಪಚ್ಚುರಂಜನ್ ನೇತೃತ್ವದ ಸದನ ಸಮಿತಿ ಸದನದ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಂಡ 15 ಶಾಸಕರಿಗೆ ಮಾತ್ರ ದಂಡನೆ ವಿಧಿಸಲು ಶಿಫಾರಸ್ಸು ಮಾಡಿದೆ ಅದು ಸ್ವಾಗತಾರ್ಹ. ಆದರೆ, ಸದನದೊಳಗೆ ಕೇವಲ ಪ್ರತಿಪಕ್ಷಗಳಿಂದಲೆ ದಾಂಧಲೆಯಾಗಿದೆ ಎಂದರೆ ತಪ್ಪಾಗುತ್ತದೆ. ಅಂದಿನ ಕಾಲಪಗಳನ್ನು ದೃಶ್ಯ ಮಾಧ್ಯಮಗಳ ಮೂಲಕ ವೀಕ್ಷಿಸಿರುವ ವತದಾರರಿಗೆ ಸದನ ಸಮಿತಿಯ ಏಕಪಕ್ಷೀಯ ತಿರ್ಮಾನ ಮನವರಿಕೆಯಾಗುವುದಂತು ಸೂರ್ಯಸತ್ಯದಂತಿದೆ. ಸದನ ಆರಂಭವಾಗುವುದಕ್ಕೆ ಮುನ್ನವೆ ಆಡಳಿತ ಪಕ್ಷದ ಕೆಲವು ಸದಸ್ಯರು ಪ್ರವೇಶ ದ್ವಾರದಲ್ಲಿ ನಿಂತು ವಿರೋಧ ಪಕ್ಷದವರನ್ನು ಅಡ್ಡಗಟ್ಟಿದ್ದನ್ನು ಜನತೆ ಕಂಡಿದೆ. ಅವರ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲದಿರುವುದು ಸಂಶಯಕ್ಕೆ ಆಸ್ಪದನೀಡಿದೆ.

ಕೊನೆಯ ಪಕ್ಷ ಕಾನೂನು ಮಂತ್ರಿ ಸುರೇಶ ಕುಮಾರ್ ಅಪಸ್ವರವೆತ್ತಿರುವುದು ಸುದ್ದಿಯಾಗಿರುವುದರಿಂದ ಜನತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಉಳ್ಳವರು ಸರ್ಕಾರದಲ್ಲಿ ಕೆಲವರಾದರೂ ಇದ್ದಾರೆಂಬುದು ನೆಮ್ಮದಿ.

 ಬಿಜೆಪಿ ಸ್ವಲ್ಪ ಮಟ್ಟಿಗಾದರೂ ರಾಜ್ಯವು ಕಾಪಾಡಿಕೊಂಡಿದ್ದ ಉತ್ತಮ ಸಂಸದೀಯ ಸಂಸ್ಕೃತಿ ಉಳಿಸಲು ಮುಂದಾಗಲಿ. ಇದು ಪದೇ ಪದೇ ಇಂದಿನ ಅಧಿಕಾರಕ್ಕಾಗಿ ಮಾಡುವ ರಾಜಕೀಯ ಮೇಲಾಟಗಳಿಗೆ ಅವಕಾಶ    ಬಂದಾಗ ಜನರು ತೀರ್ಪು ನೀಡದೆಬಿಡರು.              
      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT