ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವಾಸ್‌ ತಂಡಗಳಿಗೆ ಪ್ರಶಸ್ತಿ

ರಾಜ್ಯ ಬಾಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಟೀಲು: ಮೂಡುಬಿದಿರೆಯ ಆಳ್ವಾಸ್ ತಂಡ ರಾಜ್ಯ ಬಾಲ್ ಬ್ಯಾಡ್ಮಿಂಟನ್‌ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಬಾಲ್‌ಬ್ಯಾಡ್ಮಿಂಟನ್‌ ಸಂಸ್ಥೆ ವತಿಯಿಂದ ನಡೆದ ರಾಜ್ಯ ಬಾಲ್‌ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆಯಿತು.

ಇಲ್ಲಿನ ದುರ್ಗಾ ಪರಮೇಶ್ವರಿ ಹೈಸ್ಕೂಲು ಆಶ್ರಯದಲ್ಲಿ ಭಾನುವಾರ ಕೊನೆಗೊಂಡ ಬಾಲಕರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್ ತಂಡ 29–24, 24–29, 29–16ರಲ್ಲಿ ಎಸ್‌ಬಿಬಿಸಿ (ಎ) ತಂಡವನ್ನು ಮಣಿಸಿತು. ಈ ವಿಭಾಗದ ಮೂರನೇ ಸ್ಥಾನ ಪಾಂಡವಪುರದ ಪಾಲಾಯಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ ಹೋರಾಟದಲ್ಲಿ ಆಳ್ವಾಸ್‌ 29–8, 29–5ರಲ್ಲಿ ಪಾಂಡವಪುರ ಬಿ ತಂಡದ ಮೇಲೂ, ಎಸ್‌ಬಿಬಿಸಿ ‘ಎ’ 29–12, 29–20ರಲ್ಲಿ ಪಾಂಡವಪುರ ಎ ವಿರುದ್ಧವೂ ಗೆಲುವು ಸಾಧಿಸಿ ಪ್ರಶಸ್ತಿ ಘಟ್ಟ ತಲುಪಿದ್ದವು. ಈ ವಿಭಾಗದ ಅತ್ಯುತ್ತಮ ಆಟಗಾರ ಪ್ರಶಸ್ತಿ ಆಳ್ವಾಸ್‌ನ ನಿಶಾಂತ್‌ ಪಾಲಾಯಿತು.

ಬಾಲಕಿಯರ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿದ ಆಳ್ವಾಸ್‌ ಫೈನಲ್‌ ಹಣಾಹಣಿಯಲ್ಲಿ  29–16, 29–6ರಲ್ಲಿ ಜಯಾ ಸ್ಪೋರ್ಟ್ಸ್‌ ಕ್ಲಬ್‌ ‘ಎ’ ತಂಡದ ಎದುರು ಗೆಲುವು ಸಾಧಿಸಿ ಚಾಂಪಿಯನ್‌ ಆಯಿತು. ಹೊನ್ನುಡಿಕೆಯ ಸ್ವರ್ಣಾಂಭ ಶಾಲೆ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.

ಈ ವಿಭಾಗದ ನಾಲ್ಕರ ಘಟ್ಟದ ಹೋರಾಟದಲ್ಲಿ ಜಯಾ ಕ್ಲಬ್ 29–14, 29–15ರಲ್ಲಿ ಸ್ವರ್ಣಾಂಭ ಶಾಲೆಯ ಮೇಲೂ,   ಆಳ್ವಾಸ್‌ 29–7, 29–11ರಲ್ಲಿ ಮೂಡು ಗಿಳಿಯೂರು ವಿರುದ್ಧವೂ ಗೆಲುವು ಪಡೆದು ಫೈನಲ್‌ ತಲುಪಿದ್ದವು.

ಆಳ್ವಾಸ್‌ ತಂಡದ  ಲಾವಣ್ಯ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT