ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ, ಆಸರೆ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

Last Updated 18 ಡಿಸೆಂಬರ್ 2012, 10:57 IST
ಅಕ್ಷರ ಗಾತ್ರ

ಇಳಕಲ್: ಇಳಕಲ್‌ನಲ್ಲಿ ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಂಚಿಕೆ, ನೆರೆ ಸಂತ್ರಸ್ತರಿಗೆ ಆಸರೆ ಮನೆಗಳ ವಿತರಣೆ ಹಾಗೂ ವಿವಿಧ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕು ಪತ್ರ ಹಂಚಿಕೆ ಮಾಡದೇ ಶಾಸಕ ದೊಡ್ಡನಗೌಡ ಪಾಟೀಲ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ನಾಗರಾಜ ಹೊಂಗಲ್ ಆರೋಪಿಸಿದರು.

ವಿವಿಧ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಆಗ್ರಹಿಸಿ ಜನ ಜಾಗೃತಿ ವೇದಿಕೆ, ತಾಲ್ಲೂಕು ಹೋರಾಟ ಸಮಿತಿ ಮತ್ತು ಅಖಿಲ ಭಾರತ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ವತಿಯಿಂದ ನಗರದ ಬಸ್ ನಿಲ್ದಾಣದ ಎದುರಿಗೆ ಸೋಮವಾರ ಆರಂಭಿಸಲಾದ ಧರಣಿ ಸತ್ಯಾಗ್ರಹ ಸಂದರ್ಭದಲ್ಲಿ ಅವರು ಮಾತನಾಡಿದರು.

2005ರಿಂದ ನಗರಸಭೆಗೆ ಸಾಕಷ್ಟು ಅನುದಾನ ಬಂದಿದ್ದು, ಬಳಕೆಯಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಈ ಕುರಿತು ತನಖೆ ನಡೆಯಬೇಕು ಎಂದು ಒತ್ತಾಯಿಸಿದರು.ಇದಕ್ಕೂ ಮೊದಲು ನಗರದ ವಿಜಯ ಮಹಾಂತೇಶ್ವರ ಮಠದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಪ್ರಮುಖ ಬೀದಿಗಳಲ್ಲಿ ಹಾಯ್ದು ಧರಣಿ ಸ್ಥಳಕ್ಕೆ ಆಗಮಿಸಿದರು.

ಕೂಡಲೇ ಅರ್ಹ ಬಡವರಿಗೆ ನಿವೇಶನಗಳನ್ನು, ಸಂತ್ರಸ್ತರಿಗೆ ಆಸರೆ ಮನೆಗಳನ್ನು, ಕೊಳಚೆ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ಹಂಚಿಕೆ ಮಾಡ ಬೇಕು. ನಗರಸಭೆಯಲ್ಲಿ 2005 ರಿಂದ ಆಗಿರಬಹುದಾದ ಅವ್ಯವಹಾರದ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ನಗರದ ಬಡವರಿಗೆ ಮನೆಗಳು ಹಂಚಿಕೆಯೇ ಆಗಿಲ್ಲ. ಇದನ್ನು ಜಿಲ್ಲಾಧಿಕಾರಿಗಳ ಕಾರ್ಯಾ ಲಯದ ಗಮನಕ್ಕೆ ತಂದರೂ ಪ್ರಯೋ ಜನವಾಗಿಲ್ಲ ಎಂದು ಪ್ರತಿಭಟನಾ ಕಾರರು ದೂರಿದರು.     
 
ಇಳಕಲ್‌ನ ಸ. ನಂ. 22/1, 23/1ರ ಒಟ್ಟು 10.22 ಎಕರೆ ಜಮೀನಿನಲ್ಲಿ 289 ನಿವೇಶನ ಹಾಗೂ ಗುರುಲಿಂಗಪ್ಪ ಸಜ್ಜನ ಕಾಲೊನಿಯಲ್ಲಿ (ಸ.ನಂ. 105/1, 6 ಎಕರೆ) ಒಟ್ಟು 167 ನಿವೇಶಗಳನ್ನು ಆಶ್ರಯ ಯೋಜನೆಗಾಗಿಯೇ  2006ರಲ್ಲಿ ರಚಿಸಲಾಗಿದೆ.

ಹೀಗೆ ಒಟ್ಟು 456 ನಿವೇಶನ ರಚಿಸಿ, 7 ವರ್ಷ ಕಳೆದರೂ `ಆಶ್ರಯ  ಸಮಿತಿ ಇಂದಿನವರೆಗೂ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ದರ್ಗಾದ ಹತ್ತಿರ ಪ್ರವಾಹ ಸಂತ್ರಸ್ತರಿ ಗಾಗಿ ನಿರ್ಮಿಸಲಾದ 598 ಆಸರೆ ಮನೆಗಳನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಲೋಕಾರ್ಪಣೆ ಮಾಡಿದ್ದರೂ ಅವುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿಲ್ಲ ಎಂದು ಆರೋಪಿಸಿದರು.

ಅಣ್ಣಾಜಿ ಕೊರೆನವರ, ಪ್ರದೀಪ ಭಂಡಾರಿ ಮಾತನಾಡಿ  ಕಳೆದ ಹಲವಾರು ವರ್ಷಗಳಿಂದ ನಗರದ ವಿವಿಧ ಬಡಾವಣೆಗಳ ಕೊಳಚೆ ಪ್ರದೇಶಗಳಲ್ಲಿ ನೂರಾರು ಜನ ಮನೆ, ಶೆಡ್‌ಗಳಲ್ಲಿ ವಾಸಿಸುತ್ತಿದ್ದು, ಅಂತಹವರಿಗೆ ಹಕ್ಕು ಪತ್ರ ಕೊಟ್ಟಿಲ್ಲ. ನಗರಸಭೆಯ ಅನುದಾನ ಬಳಕೆಯಲ್ಲಿ ಅವ್ಯವಹಾರವಾಗಿದೆ. ಮನೆಗಳ ಹಂಚಿಕೆಯಾಗುವವರೆಗೆ ಹಾಗೂ ತನಿಖೆಗೆ ಆದೇಶವಾಗುವವರೆಗೆ ಈ ಹೋರಾಟ ನಿಲ್ಲದು ಎಂದು ಹೇಳಿದರು.

ಅಖಿಲ ಭಾರತ ಭ್ರಷ್ಟಾ ಚಾರ ನಿರ್ಮೂ ಲನಾ ಸಮಿತಿ ಬಾಗಲ ಕೋಟೆ ಜಿಲ್ಲಾ ಘಟಕದ ಉಪಾಧ್ಯಕ್ಷ ಅಣ್ಣಾಜಿ ರಾವ್ ಕೋರೆನವರ, ಪ್ರದೀಪ ಭಂಡಾರಿ, ಬಿ.ಕೆ. ಸರಾಫ್, ಮಹಾಂತೇಶ ಗೊರಜನಾಳ, ನಗರ ಸಭೆ ಸದಸ್ಯ ಸಿದ್ದಣ್ಣ ತುಡುಬಿನಾಳ, ಯಲ್ಲಪ್ಪ ಪೂಜಾರ, ಯಲ್ಲಪ್ಪ ರಾಜಾ ಪುರ, ಮಾಯವ್ವ ಗಾಜಿ, ಸಿದ್ದಣ್ಣ ಬಾವೂರ, ಪಿ.ಜಿ. ಪಾಟೀಲ, ಹುಸೇನ್ ಕಂದಗಲ್, ಪ್ರಹ್ಲಾದ ವೀರಾಪುರ, ಮಹಾಂತೇಶ ಮಡಿ ವಾಳರ, ರಾಜು ಇಲಾಳ, ಕೊಳಚೆ ಪ್ರದೇಶದ ನಿವಾಸಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT