ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸರೆ ಮನೆ ಹಸ್ತಾಂತರ: ಯಾರೀ ದಾನಿ ಮಹಿಳೆ?

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಜೇವರ್ಗಿ (ಗುಲ್ಬರ್ಗ): ಪ್ರವಾಹ ಸಂತ್ರಸ್ತರಿಗಾಗಿ ಪೇಜಾವರ ಮಠದ ವತಿಯಿಂದ ನಿರ್ಮಿಸಿದ `ಆಸರೆ ಮನೆ~ಗಳನ್ನು ಸೋಮವಾರ ಕೂಡಿ-ಕೋಬಾಳ ಗ್ರಾಮದ ಹೊರವಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
 
ಆದರೆ, ದಾನಿಗಳ ಪೈಕಿ ಮಹಿಳೆಯೊಬ್ಬರ ವಿವರ ಬಹಿರಂಗಪಡಿಸದೆ ಇರಲು ಸಂಘಟಕರು ಮನವಿ ಮಾಡಿದ ಘಟನೆಯೂ ನಡೆಯಿತು.

ಮನೆ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು ಸನ್ಮಾನಿಸಲಾಗಿದೆ. `ಸನ್ಮಾನಿತರ ವಿವರ ಬಹಿರಂಗಪಡಿಸುವುದು ಬೇಡ~ ಎಂದು  ಸಂಘಟಕರು ಪತ್ರಕರ್ತರಿಗೆ ಮನವಿ ಮಾಡಿದರು.

ಈ ಕುರಿತು ಪೊಲೀಸರನ್ನು ಪ್ರಶ್ನಿಸಿದಾಗ `ದೆಹಲಿ ಮೂಲದ ಉದ್ಯಮಿಯೊಬ್ಬರನ್ನು ಸನ್ಮಾನಿಸಲಾಗಿದೆ~ ಎಂದು ಸಂಘಟಕರು ತಿಳಿಸಿದ್ದಾಗಿ ಹೇಳಿದ್ದಾರೆ. ಕೂಡಿ, ಕೋಬಾಳ ಹಾಗೂ ಕೋನಹಿಪ್ಪರಗಾ ಗ್ರಾಮಗಳ ಸಂತ್ರಸ್ತರಿಗೆ ನಿರ್ಮಿಸಲಾದ ಸುಮಾರು 125 ಮನೆಗಳನ್ನು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸಾಂಕೇತಿಕವಾಗಿ ಹಕ್ಕುಪತ್ರ ನೀಡಿ ಹಸ್ತಾಂತರಿಸಿದರು.

ನೊಂದವರಿಗೆ ನೆರವು ನೀಡುವ ಉದ್ದೇಶದಿಂದ ತಾವು ಸ್ಥಾಪಿಸಿದ `ಜನತಾ ಕಲ್ಯಾಣ ನಿಧಿ~ಯ ವತಿಯಿಂದ ಈ ಮನೆಗಳನ್ನು ನಿರ್ಮಿಸಲಾಗಿದೆ. ಸಂಪೂರ್ಣ ಸಿದ್ಧಗೊಂಡ ಮನೆಯಲ್ಲಿ ಫಲಾನುಭವಿಗಳು ನೆಮ್ಮದಿಯ ಬದುಕು ಸಾಗಿಸುವಂತೆ ಪೇಜಾವರ ಶ್ರೀಗಳು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT