ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸಾರಾಂಗೆ ಮೋದಿ ಹೋಲಿಸಿದ ಜೈರಾಂ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಾ­ಯು­ಕ್ತದ ಬಗ್ಗೆ ಬಿಜೆಪಿ ಪ್ರಧಾನ­-ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಮಾತನಾ­ಡುವುದು ಆಸಾರಾಂ ಬಾಪು ತಮ್ಮ ಬ್ರಹ್ಮ­ಚರ್ಯದ ಬಗ್ಗೆ ಮಾತನಾಡಿದಂತೆ ಎಂದು ಕೇಂದ್ರ ಸಚಿವ ಜೈರಾಂ ರಮೇಶ್‌ ವ್ಯಂಗ್ಯವಾ­ಡಿದ್ದಾರೆ.

ಲೋಕಪಾಲ ಮಸೂದೆ ಬಗ್ಗೆ ಉತ್ತರಾ­­ಖಂಡದಲ್ಲಿ ನಡೆದ ರ್‍ಯಾಲಿ­ಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಅವ ರನ್ನು ಮೋದಿ ಟೀಕಿ ಸಿದ್ದರ ಬಗ್ಗೆ ಪ್ರತಿಕ್ರಿ ಯಿಸಿದ ಜೈರಾಂ, ಲೈಂಗಿಕ ದೌರ್ಜನ್ಯ ಆರೋಪ ದಲ್ಲಿ ಜೈಲು ಶಿಕ್ಷೆ ಅನು­ಭವಿಸುತ್ತಿರುವ ಆಸಾರಾಂ ಬಾಪು ಅವರನ್ನು ಮೋದಿ ಅವರಿಗೆ ಹೋಲಿಕೆ ಮಾಡಿದರು. ಮೋದಿ 10 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ­ದ್ದರೂ  ಲೋಕಾ­­­ಯುಕ್ತರನ್ನು ನೇಮಿ­ಸದ ಅವ­ರಿಗೆ ಭ್ರಷ್ಟಾಚಾರ ವಿರೋಧಿ ಶಾಸನದ ಬಗ್ಗೆ ಮಾತನಾಡಲು ಹಕ್ಕಿಲ್ಲ ಎಂದು ಅವರು ಹೇಳಿದರು.

ಉತ್ತರಾಖಂಡ ಸರ್ಕಾರದ ಲೋಕಾಯುಕ್ತ ಕಾಯಿದೆ ‘ಜೋಕ್’ ಎಂದು ಟೀಕಿಸಿದ ರಮೇಶ್‌, ಇದರಲ್ಲಿ ತೊಡಕುಗಳಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT