ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೀಸ್ ಆಟಗಾರರ ವಿರುದ್ಧ ಸಾಕ್ಷಿ ಇಲ್ಲ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಬುಕ್ಕಿ ಮಜರ್ ಮಾಜಿದ್ ಹೇಳಿಕೊಂಡಿರುವಂತೆ ಆಸ್ಟ್ರೇಲಿಯಾದ ಆಟಗಾರರು `ಫಿಕ್ಸಿಂಗ್~ನಲ್ಲಿ ಭಾಗಿಯಾದ ಬಗ್ಗೆ ಯಾವುದೇ ಸಾಕ್ಷಿ ಇಲ್ಲವೆಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಭ್ರಷ್ಟಾಚಾರ ತಡೆ ಘಟಕ ಸ್ಪಷ್ಟಪಡಿಸಿದೆ.

ರಿಕಿ ಪಾಂಟಿಂಗ್ ಹಾಗೂ ನೇಥನ್ ಬ್ರೇಕನ್ ಅವರೊಂದಿಗೆ ಸಂಪರ್ಕವಿದೆ ಎಂದು ಬುಕ್ಕಿ ತಿಳಿಸಿದ್ದಾನೆ. ಆದರೆ ಇದನ್ನು ಖಚಿತಪಡಿಸುವ ಯಾವುದೇ ಸಾಕ್ಷಿ ತಮ್ಮ ಮುಂದಿಲ್ಲವೆಂದು ಐಸಿಸಿ ಮೂಲಗಳನ್ನು ಉಲ್ಲೇಖಿಸಿ ಇಲ್ಲಿನ ಪತ್ರಿಕೆಗಳು ವರದಿ ಮಾಡಿವೆ.

ಸುಳ್ಳು ಪತ್ತೆ ಪರೀಕ್ಷೆ!: ಕಾಂಗರೂಗಳ ನಾಡಿನ ಕ್ರಿಕೆಟ್ ಪಡೆಯ ಮಾಜಿ ನಾಯಕ ಸ್ಟೀವ್ ವಾ ಅವರು ಬುಕ್ಕಿ ಹೆಸರಿಸಿರುವ ಆಸೀಸ್ ಆಟಗಾರರು `ಸುಳ್ಳು ಪತ್ತೆ ಪರೀಕ್ಷೆ~ಗೆ ಒಳಗಾಗಬೇಕು ಎಂದು ಹೇಳಿದ್ದಾರೆ.
ತಮ್ಮ ವಿರುದ್ಧ ಆರೋಪ ಮಾಡಿರುವ ಬುಕ್ಕಿ ಸುಳ್ಳು ಹೇಳುತ್ತಿದ್ದಾನೆಂದು ಸಾಬೀತು ಪಡಿಸುವ ನಿಟ್ಟಿನಲ್ಲಿ ಸುಳ್ಳು ಪತ್ತೆ ಪರೀಕ್ಷೆಗೆ ಒಪ್ಪಿಕೊಳ್ಳಬೇಕೆಂದು ವಾ ಹೇಳಿದ್ದಾರೆ.

ಕೊಳೆ ತೊಳೆದುಕೊಳ್ಳಲಿ: `ಬುಕ್ಕಿ ಹೇಳಿದ್ದು ಸುಳ್ಳೋ ಅಥವಾ ಸತ್ಯವೋ ಎನ್ನುವ ಚರ್ಚೆ ಈಗ ನಡೆದಿದೆ. ಆದ್ದರಿಂದ ನಮ್ಮ ದೇಶದ ಕ್ರಿಕೆಟಿಗರಾದ ರಿಕಿ ಪಾಂಟಿಂಗ್ ಮತ್ತು ನೇಥನ್ ಬ್ರೇಕನ್ ಅವರು ತಾವು ತಪ್ಪು ಮಾಡಿಲ್ಲ ಎನ್ನುವುದನ್ನು ಖಚಿತಪಡಿಸಬೇಕು~ ಎಂದು ಆಸ್ಟ್ರೇಲಿಯಾದ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಆಟಗಾರರು ಕೊಳೆಯನ್ನು ತೊಳೆದುಕೊಳ್ಳಲಿ ಎನ್ನುವ ಸಲಹೆ ನೀಡಿರುವ ಅವರು `ಆರೋಪ ಸುಳ್ಳು ಎನ್ನುವುದನ್ನು ಸಾಬೀತುಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು~ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT