ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೀಸ್‌ಗೆ ರೋಚಕ ಗೆಲುವು

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪರ್ತ್: ಏಂಜೆಲೊ ಮ್ಯಾಥ್ಯೂಸ್ ನಡೆಸಿದ ಹೋರಾಟವನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾದ ಆಸ್ಟ್ರೇಲಿಯಾ ತಂಡ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಐದು ರನ್‌ಗಳ ರೋಚಕ ಗೆಲುವು ಪಡೆಯಿತು.

ಡಬ್ಲ್ಯುಎಸಿಎ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 49.1 ಓವರ್‌ಗಳಲ್ಲಿ 231 ರನ್ ಕಲೆಹಾಕಿತು. ನಾಯಕ ಮೈಕಲ್ ಕ್ಲಾರ್ಕ್ (57, 88 ಎಸೆತ, 4 ಬೌಂ) ಅರ್ಧಶತಕದ ಮೂಲಕ ತಂಡದ ನೆರವಿಗೆ ನಿಂತರು.

ಸಾಧಾರಣ ಗುರಿ ಬೆನ್ನಟ್ಟಿದ ಮಾಹೇಲ ಜಯವರ್ಧನೆ ಬಳಗ 49.5 ಓವರ್‌ಗಳಲ್ಲಿ 226 ರನ್‌ಗಳಿಗೆ ಆಲೌಟಾಯಿತು. 45 ಓವರ್‌ಗಳು ಕೊನೆಗೊಂಡಾಗ ಲಂಕಾ 9 ವಿಕೆಟ್‌ಗೆ 180 ರನ್ ಗಳಿಸಿತ್ತು. ಆದರೆ ಮ್ಯಾಥ್ಯೂಸ್ ಕೊನೆಯವರೆಗೂ (64, 76 ಎಸೆತ, 4 ಬೌಂ, 1 ಸಿಕ್ಸರ್) ಹೋರಾಟ ನಡೆಸಿದ ಕಾರಣ ಪಂದ್ಯ ರೋಚಕ ಅಂತ್ಯಕಂಡಿತು. ಕ್ಲಾರ್ಕ್ ಬಳಗಕ್ಕೆ ಲಭಿಸಿದ ಸತತ ಎರಡನೇ ಗೆಲುವು ಇದು.

ಲಂಕಾ ಒಂದು ಹಂತದಲ್ಲಿ 3 ವಿಕೆಟ್‌ಗೆ 110 ರನ್ ಗಳಿಸಿ ಗೆಲುವಿನ ನಿರೀಕ್ಷೆ ಮೂಡಿಸಿತ್ತು. ಆ ಬಳಿಕ ಆಸೀಸ್ ಬೌಲರ್‌ಗಳು ಸೊಗಸಾದ ರೀತಿಯಲ್ಲಿ ಮರುಹೋರಾಟ ನಡೆಸಿದರು. ತಿಲಕರತ್ನೆ ದಿಲ್ಶಾನ್ (40) ಮತ್ತು ದಿನೇಶ್ ಚಂಡಿಮಾಲ (37) ಕ್ರೀಸ್‌ನಲ್ಲಿದ್ದಾಗ ಆಸೀಸ್ ಒತ್ತಡಕ್ಕೆ ಒಳಗಾಗಿತ್ತು. ಆದರೆ ಮುಂದಿನ 33 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳು ಬಿದ್ದವು.

ಇದರಿಂದ ಜಯವರ್ಧನೆ ಬಳಗ ಸೋಲಿನ ಹಾದಿ ಹಿಡಿಯಿತು. ಮ್ಯಾಥ್ಯೂಸ್ ಮಾತ್ರ ಸುಲಭದಲ್ಲಿ ತಲೆಬಾಗಲು ಸಿದ್ಧರಿರಲಿಲ್ಲ. ದಮಿಕಾ ಪ್ರಸಾದ್ (ಅಜೇಯ 15) ಜೊತೆ ಸೇರಿಕೊಂಡು ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಪ್ರಯತ್ನ ನಡೆಸಿದರು. ಕೊನೆಯ ವಿಕೆಟ್‌ಗೆ 46 ರನ್‌ಗಳು ಬಂದವು.

ಅಂತಿಮ ಓವರ್‌ನಲ್ಲಿ ಲಂಕಾ ಗೆಲುವಿಗೆ 18 ರನ್‌ಗಳು ಬೇಕಾಗಿದ್ದವು. ಮಿಷೆಲ್ ಸ್ಟಾರ್ಕ್ ಎಸೆದ ಓವರ್‌ನ ಮೊದಲ ಎಸೆತವನ್ನು ಮ್ಯಾಥ್ಯೂಸ್ ಬೌಂಡರಿಗಟ್ಟಿದರೆ, ಎರಡನೇ ಎಸೆತವನ್ನು ಸಿಕ್ಸರ್‌ಗೆ ಕಳುಹಿಸಿದರು. ಮುಂದಿನ ಎರಡು ಎಸೆತಗಳಲ್ಲಿ ಎರಡು ರನ್‌ಗಳು ಬಂದವು. ಆದರೆ ಐದನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಮ್ಯಾಥ್ಯೂಸ್ ಅವರು ಡೇನಿಯಲ್ ಕ್ರಿಸ್ಟಿಯನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಅದರೊಂದಿಗೆ ಲಂಕಾ ಹೋರಾಟಕ್ಕೆ ತೆರೆಬಿತ್ತು. ಆಸೀಸ್ ನಿಟ್ಟುಸಿರುಬಿಟ್ಟಿತು.

ಹತ್ತು ಓವರ್‌ಗಳಲ್ಲಿ ಕೇವಲ 24 ರನ್ ನೀಡಿ ಎರಡು ವಿಕೆಟ್ ಪಡೆದ ಕ್ಸೇವಿಯರ್ ಡೊಹರ್ಟಿ ಆಸೀಸ್ ಪರ ಪ್ರಭಾವಿ ಎನಿಸಿದರು. ಮಿಷೆಲ್ ಸ್ಟಾರ್ಕ್ ಮತ್ತು ಡೇನಿಯಲ್ ಕ್ರಿಸ್ಟಿಯನ್ ಕೂಡಾ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಲಂಕಾ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿತ್ತು. ಆಸೀಸ್ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಟ ನಡೆಸಿದರು. `ಪಂದ್ಯಶ್ರೇಷ್ಠ~ ಕ್ಲಾರ್ಕ್ ಅಲ್ಲದೆ ಡೇವಿಡ್ ವಾರ್ನರ್ (34) ಡೇನಿಯಲ್ ಕ್ರಿಸ್ಟಿಯನ್ (33) ತಂಡದ ಮೊತ್ತ ಹಿಗ್ಗಿಸಲು ನೆರವಾದರು.

ಸ್ಕೋರ್ ವಿವರ

ಆಸ್ಟ್ರೇಲಿಯಾ: 49.1 ಓವರ್‌ಗಳಲ್ಲಿ 231
ಡೇವಿಡ್ ವಾರ್ನರ್ ಬಿ ಏಂಜೆಲೊ ಮ್ಯಾಥ್ಯೂಸ್  34
ಮ್ಯಾಥ್ಯೂ ವೇಡ್ ಸಿ ಸಂಗಕ್ಕಾರ ಬಿ ಕುಲಶೇಖರ  01
ರಿಕಿ ಪಾಂಟಿಂಗ್ ಎಲ್‌ಬಿಡಬ್ಲ್ಯು ಬಿ ಲಸಿತ್ ಮಾಲಿಂಗ  01
ಮೈಕಲ್ ಕ್ಲಾರ್ಕ್ ಸಿ ಜಯವರ್ಧನೆ ಬಿ ಮ್ಯಾಥ್ಯೂಸ್  57
ಮೈಕ್ ಹಸ್ಸಿ ಸಿ ಮತ್ತು ಬಿ ನುವಾನ್ ಕುಲಶೇಖರ  23
ಡೇವಿಡ್ ಹಸ್ಸಿ ಸಿ ತಿರಿಮನ್ನೆ ಬಿ ಲಸಿತ್ ಮಾಲಿಂಗ  27
ಕ್ರಿಸ್ಟಿಯನ್ ಸ್ಟಂಪ್ ಸಂಗಕ್ಕಾರ ಬಿ ಸಚಿತ್ರ ಸೇನನಾಯಕೆ  33
ರ‌್ಯಾನ್ ಹ್ಯಾರಿಸ್ ಸಿ ಕುಲಶೇಖರ ಬಿ ಸಚಿತ್ರ ಸೇನನಾಯಕೆ 03
ಕ್ಲಿಂಟ್ ಮೆಕೇ ಸಿ ತಿರಿಮನ್ನೆ ಬಿ ಧಮಿಕಾ ಪ್ರಸಾದ್  25
ಮಿಷೆಲ್ ಸ್ಟಾರ್ಕ್ ಸಿ ತರಂಗ ಬಿ ಧಮಿಕಾ ಪ್ರಸಾದ್  14
ಕ್ಸೇವಿಯರ್ ಡೊಹರ್ಟಿ ಔಟಾಗದೆ  02
ಇತರೆ: (ಲೆಗ್‌ಬೈ-6, ವೈಡ್-5)  11
ವಿಕೆಟ್ ಪತನ: 1-22 (ವೇಡ್; 3.1), 2-26 (ಪಾಂಟಿಂಗ್; 4.3), 3-50 (ವಾರ್ನರ್; 8.5), 4-81 (ಮೈಕ್ ಹಸ್ಸಿ; 17.6), 5-130 (ಡೇವಿಡ್ ಹಸ್ಸಿ; 27.4), 6-186 (ಕ್ರಿಸ್ಟಿಯನ್; 39.4), 7-190 (ಕ್ಲಾರ್ಕ್; 40.4), 8-192 (ಹ್ಯಾರಿಸ್; 41.5), 9-224     (ಸ್ಟಾರ್ಕ್; 47.6), 10-231 (ಮೆಕೇ; 49.1)
ಬೌಲಿಂಗ್: ಲಸಿತ್ ಮಾಲಿಂಗ 10-0-48-2, ನುವಾನ್ ಕುಲಶೇಖರ 10-0-39-2, ಏಂಜೆಲೊ ಮ್ಯಾಥ್ಯೂಸ್ 9-0-37-2, ದಮಿಕಾ ಪ್ರಸಾದ್ 9.1-0-55-2, ಸಚಿತ್ರ ಸೇನನಾಯಕೆ 10-0-45-2, ತಿಲಕರತ್ನೆ ದಿಲ್ಶಾನ್ 1-0-1-0

ಶ್ರೀಲಂಕಾ: 49.5 ಓವರ್‌ಗಳಲ್ಲಿ 226
ಉಪುಲ್ ತರಂಗ ಸಿ ಕ್ಲಾರ್ಕ್ ಬಿ ಮಿಷೆಲ್ ಸ್ಟಾರ್ಕ್  05
ತಿಲಕರತ್ನೆ ದಿಲ್ಶಾನ್ ಸಿ ವೇಡ್ ಬಿ ರ‌್ಯಾನ್ ಹ್ಯಾರಿಸ್  40
ಕುಮಾರ ಸಂಗಕ್ಕಾರ ರನೌಟ್  22
ಚಂಡಿಮಾಲ ಎಲ್‌ಬಿಡಬ್ಲ್ಯು ಬಿ ಮೈಕಲ್ ಕ್ಲಾರ್ಕ್  37
ಮಾಹೇಲ ಜಯವರ್ಧನೆ ಸಿ ವೇಡ್ ಬಿ ಕ್ರಿಸ್ಟಿಯನ್  13
ಲಾಹಿರು ತಿರಿಮನ್ನೆ ಬಿ ಕ್ಸೇವಿಯರ್ ಡೊಹರ್ಟಿ  03
ಮ್ಯಾಥ್ಯೂಸ್ ಸಿ ಕ್ರಿಸ್ಟಿಯನ್ ಬಿ ಮಿಷೆಲ್ ಸ್ಟಾರ್ಕ್  64
ನುವಾನ್ ಕುಲಶೇಖರ ಸಿ ವೇಡ್ ಬಿ ಕ್ರಿಸ್ಟಿಯನ್  08
ಸಚಿತ್ರ ಸೇನನಾಯಕೆ ಸ್ಟಂಪ್ ವೇಡ್ ಬಿ ಡೊಹರ್ಟಿ  09
ಲಸಿತ್ ಮಾಲಿಂಗ ಸಿ ವೇಡ್ ಬಿ ಕ್ಲಿಂಟ್ ಮೆಕೇ  01
ದಮಿಕಾ ಪ್ರಸಾದ್ ಔಟಾಗದೆ  15
ಇತರೆ: (ಲೆಗ್‌ಬೈ-3, ವೈಡ್-6)  09
ವಿಕೆಟ್ ಪತನ: 1-11 (ತರಂಗ; 3.3), 2-61 (ಸಂಗಕ್ಕಾರ; 14.3), 3-88 (ದಿಲ್ಶಾನ್; 20.5), 4-110 (ಜಯವರ್ಧನೆ; 26.1), 5-119 (ತಿರಿಮನ್ನೆ; 27.4), 6-129 (ಚಂಡಿಮಾಲ; 30.1), 7-143 (ಕುಲಶೇಖರ; 34.1), 8-175 (ಸೇನನಾಯಕೆ; 41.6), 9-180 (ಮಾಲಿಂಗ; 44.2), 10-226 (ಮ್ಯಾಥ್ಯೂಸ್; 49.5)
ಬೌಲಿಂಗ್: ರ‌್ಯಾನ್ ಹ್ಯಾರಿಸ್ 10-0-43-1, ಮಿಷೆಲ್ ಸ್ಟಾರ್ಕ್ 9.5-0-50-2, ಕ್ಲಿಂಟ್ ಮೆಕೇ 10-0-50-1, ಡೇನಿಯಲ್ ಕ್ರಿಸ್ಟಿಯನ್ 8-1-47-2, ಕ್ಸೇವಿಯರ್ ಡೊಹರ್ಟಿ 10-0-24-2, ಮೈಕಲ್ ಕ್ಲಾರ್ಕ್ 2-0-9-1
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 5 ರನ್ ಗೆಲುವು ಹಾಗೂ ನಾಲ್ಕು ಪಾಯಿಂಟ್
ಪಂದ್ಯಶ್ರೇಷ್ಠ: ಮೈಕಲ್ ಕ್ಲಾರ್ಕ್
ಮುಂದಿನ ಪಂದ್ಯ:
ಭಾರತ- ಆಸ್ಟ್ರೇಲಿಯಾ (ಫೆ.12; ಅಡಿಲೇಡ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT