ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್ ಪ್ರವೇಶಕ್ಕೆ ‘ರಾಯಣ್ಣ, ಲೂಸಿಯಾ’

Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಇದೇ ಮೊದಲ ಬಾರಿಗೆ ಕನ್ನಡದ ಎರಡು ಚಲನಚಿತ್ರಗಳು ಪ್ರತಿ­ಷ್ಠಿತ ಆಸ್ಕರ್ ಪ್ರಶಸ್ತಿಯ ವಿದೇಶ ವಿಭಾ­ಗದ ಪ್ರವೇಶಕ್ಕೆ ಸ್ಪರ್ಧೆ ನಡೆಸಲು ಆಯ್ಕೆ­ಯಾಗಿವೆ. ಬಾಕ್ಸ್‌ ಆಫೀಸ್ ಕೊಳ್ಳೆ ಹೊಡೆದ, ದರ್ಶನ್ ನಾಯಕ ನಟ­ರಾದ ‘ಸಂಗೊಳ್ಳಿ ರಾಯಣ್ಣ’ ಮತ್ತು ನೀನಾಸಂ ಸತೀಶ್ ಅಭಿನಯದ ‘ಲೂಸಿಯಾ’ ಈ ಹೆಮ್ಮೆ ಹೊಂದಿದ ಚಿತ್ರಗಳು.

2013ನೇ ಸಾಲಿನ ಆಸ್ಕರ್ ಪ್ರಶ­ಸ್ತಿಯ ವಿದೇಶ ವಿಭಾಗದಲ್ಲಿ ಸ್ಪರ್ಧೆಗೆ ಭಾರತ­ದಿಂದ ಒಂದು ಅತ್ಯು­ತ್ತಮ ಚಲನ­ಚಿತ್ರ ಆಯ್ಕೆ ಮಾಡಿ ಕಳುಹಿಸ­ಬೇಕಿದೆ. ಅದಕ್ಕಾಗಿ ಹಿಂದಿ, ತಮಿಳು, ತೆಲುಗು, ಇಂಗ್ಲಿಷ್, ಬಂಗಾಳಿ, ಮಲ­ಯಾಳಂ ಮುಂತಾದ ಭಾಷೆ­ಗಳಿಂದ ಒಟ್ಟು 20 ಸಿನಿಮಾಗಳು ಅಂತಿಮ ಸುತ್ತಿನ­ಲ್ಲಿವೆ. ಈ ಪಟ್ಟಿಯಲ್ಲಿ ಕನ್ನಡದ ‘ಸಂಗೊಳ್ಳಿ ರಾಯಣ್ಣ’ ಮತ್ತು ‘ಲೂಸಿಯಾ’ ಚಿತ್ರಗಳು ಸ್ಥಾನ ಪಡೆದಿವೆ.

ಈ 20 ಸಿನಿಮಾಗಳನ್ನು ಹೈದರಾ­ಬಾದ್‌ನಲ್ಲಿ ಇದೇ 17ರಿಂದ ಆಯ್ಕೆ ಸಮಿತಿಯ ಸದಸ್ಯರು ವೀಕ್ಷಿಸಿ ಅಂತಿಮ ತೀರ್ಮಾನ ಕೈಗೊಳ್ಳುವರು. ಈ ಆಯ್ಕೆ ಸಮಿತಿಯ ಸದಸ್ಯರಾಗಿ ಕನ್ನಡದ ಖ್ಯಾತ ನಿರ್ದೇಶಕ ಪಿ.ರಾಮದಾಸ ನಾಯ್ಡು ಮತ್ತು ಕವಿತಾ ಲಂಕೇಶ್ ಅವರೂ ಇದ್ದಾರೆ. ಇದು ಕನ್ನಡಿಗರ ಮಟ್ಟಿಗೆ ಹೆಮ್ಮೆಯ ಸಂಗತಿ.

ಅಂತಿಮ ಸುತ್ತಿನ ಆಯ್ಕೆಗೆ ಬಂದಿ­ರುವ 20 ಭಾರತೀಯ ಸಿನಿಮಾಗಳಲ್ಲಿ ಹಿಂದಿ­ಯಲ್ಲಿ ಶ್ರೀದೇವಿ ಅಭಿನಯದ ‘ಇಂಗ್ಲಿಷ್ ವಿಂಗ್ಲಿಷ್’, ಫರಾನ್‌ ಅಖ್ತರ್ ಅಭಿನ­ಯದ ‘ಭಾಗ್ ಮಿಲ್ಖಾ ಭಾಗ್’, ‘ಕಾಯ್ ಪೋ ಚೆ’, ‘ಲುಟೇರಾ’, ‘ಮದ್ರಾಸ್ ಕೆಫೆ’, ತಮಿಳಿನ ಕಮಲ­ಹಾಸನ್ ಅಭಿನಯದ ‘ವಿಶ್ವ­ರೂಪಂ’, ‘ನೀರು ಪೂರಮೈ’, ತೆಲುಗಿನ ‘ಚದುವು ಕೋವಾಲಿ’, ‘ಮಿಥುನಂ’, ‘ಅಮ್ಮಾ ನೀ ಕುವರನಂ’, ಮಲ­ಯಾಳಂನ ‘ಮುಂಬೈ ಪೊಲೀಸ್’ ಮತ್ತು ‘ಸೆಲ್ಯುಲಾಯ್ಡ’ ಸಿನಿಮಾಗಳು ಇವೆ. ಅಲ್ಲದೆ ಬಂಗಾಳಿಯ ಎರಡು, ಗುಜರಾತಿನ ಮತ್ತು ಮರಾಠಿ ತಲಾ ಒಂದು ಸಿನಿಮಾಗಳು ಸೇರಿವೆ.

ಭಾರತದಿಂದ ಆಸ್ಕರ್ ಪ್ರಶಸ್ತಿಯ ವಿದೇಶಿ ವಿಭಾಗದ ಸ್ಪರ್ಧೆಗೆ ಒಂದೇ ಚಲನಚಿತ್ರ ಆಯ್ಕೆ ಆಗುವುದಾದರೂ, ಛಾಯಾ­ಗ್ರಹಣ, ವಸ್ತ್ರವಿನ್ಯಾಸ, ಶಬ್ದ­ಗ್ರಹಣ ಮುಂತಾಗಿ ವಿವಿಧ ತಾಂತ್ರಿಕ ವಿಭಾಗ­ಗಳಲ್ಲಿ ಸ್ಪರ್ಧೆಗೆ ಎಷ್ಟು ಸಿನಿಮಾ­ಗಳನ್ನು ಬೇಕಿದ್ದರೂ ಆಯ್ಕೆ ಮಾಡಿ ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT