ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟಿನ್‌ಟೌನ್‌ಹೆರಿಗೆ ಆಸ್ಪತ್ರೆ ಆವರಣದಲ್ಲಿ ತ್ಯಾಜ್ಯದ ರಾಶಿ

Last Updated 3 ಜೂನ್ 2013, 20:14 IST
ಅಕ್ಷರ ಗಾತ್ರ

ಬೆಂಗಳೂರು:  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಆಸ್ಟಿನ್‌ಟೌನ್‌ನ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ತ್ಯಾಜ್ಯದ ರಾಶಿ ನಿರ್ಮಾಣವಾಗಿದೆ.

`ಹೊರಗಿನಿಂದ ನೋಡಿದರೆ ಆಸ್ಪತ್ರೆಯು ಕಸದ ತೊಟ್ಟಿಯಂತೆ ಕಾಣುತ್ತದೆ. ಸಾರ್ವಜನಿಕರು ಇಲ್ಲಿ ಬಂದು ಕಸವನ್ನು ಸುರಿದು ಹೋಗುತ್ತಾರೆ. ಆಸ್ಪತ್ರೆ ಎಂದು ತಿಳಿದಿದ್ದರೂ ಆಸ್ಪತ್ರೆಯ ಆವರಣದಲ್ಲಿಯೇ ತ್ಯಾಜ್ಯವನ್ನು ಸುರಿಯುವುದು ಹೆಚ್ಚಾಗಿದೆ' ಎಂದು ಆಸ್ಪತ್ರೆಯ ನರ್ಸ್ ನಿರ್ಮಲಾ ಹೇಳಿದರು.

`ಆಸ್ಪತ್ರೆಯ ಸುತ್ತಲೂ ಕೊಳಚೆ ನೀರು ನಿಂತಿದೆ. ಇದರಿಂದ ಡೆಂಗೆ ಬರುವ ಭೀತಿ ಕಾಡುತ್ತಿದೆ. ನನ್ನ ಎರಡು ತಿಂಗಳ ಹಿಂದೆ ಮಗುವಿಗೆ ಸೋಂಕು ತಗುಲಿ ಈಗ ಚೇತರಿಸಿಕೊಳ್ಳುತ್ತಿದೆ' ಎಂದು ಸ್ಥಳೀಯ ನಿವಾಸಿ ಲಕ್ಷ್ಮಮ್ಮ ದೂರಿದರು.

ಆಸ್ಪತ್ರೆಯ ಸುತ್ತಲೂ ಇರುವ ಕಸ , ನಿಂತಿರುವ ಕೊಳಚೆ ನೀರು ಸುತ್ತಮುತ್ತಲಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಅನಾರೋಗ್ಯದ ಭೀತಿ ತಂದಿದೆ.

`ಕಸವನ್ನು ನಿಯಮಿತವಾಗಿ ತೆಗೆಸಲಾಗುತ್ತಿದೆ. ಆದರೆ, ಸಾರ್ವಜನಿಕರೇ ಕಸ ಹಾಕುವುದು ಹೆಚ್ಚಾಗಿದೆ. ಹೀಗಾಗಿ ಮನೆ ಮನೆಯಿಂದ ಕಸ ಸಂಗ್ರಹ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಇಲ್ಲಿನ ತ್ಯಾಜ್ಯದ ಸಮಸ್ಯೆಗೆ ಪರಿಹಾರ ನೀಡಲಾಗುವುದು' ಎಂದು ಬಿಬಿಎಂಪಿ ಸದಸ್ಯೆ ಸರಳಾ ಮೋಹನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT