ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯನ್ನರ `ಜೀನ್'ಗಳು ಭಾರತೀಯ ಮೂಲದ್ದು

Last Updated 15 ಜನವರಿ 2013, 9:48 IST
ಅಕ್ಷರ ಗಾತ್ರ

ಬರ್ಲಿನ್ (ಪಿಟಿಐ):  ಆಸ್ಟ್ರೇಲಿಯ ಮೂಲ ನಿವಾಸಿಗಳ ವಂಶವಾಹಿಯಲ್ಲಿ ಭಾರತೀಯರ `ಜೀನ್' ಗಳಿರುವುದು ಪತ್ತೆಯಾಗಿದೆ ಎಂದು ಬರ್ಲಿನ್ ಸಂಶೋಧಕರು ತಿಳಿಸಿದ್ದಾರೆ.

ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಮೂಲನಿವಾಸಿಗಳು ಮತ್ತು ಭಾರತೀಯರ ನಡುವೆ ಸಂಪರ್ಕ ಇತ್ತು. ಆಗಿನ್ನೂ ಆಸ್ಟ್ರೇಲಿಯನ್ನರು ಯೂರೋಪ್ ಸಂಪರ್ಕ ಹೊಂದಿರಲಿಲ್ಲ  ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಭಾರತೀಯ ಮತ್ತು ಆಸ್ಟ್ರೇಲಿಯನ್ ಪ್ರಜೆಗಳ ವಂಶವಾಹಿಯನ್ನು ಈ ಸಂಶೋಧನೆಗೆ ಬಳಸಲಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.
ನ್ಯೂಗಿನಿ ಸೇರಿದಂತೆ ದಕ್ಷಿಣ ಆಸ್ಟ್ರೇಲಿಯನ್ನರ ವಂಶವಾಹಿ ಮತ್ತು ದಕ್ಷಿಣ ಏಷ್ಯಾ ಹಾಗೂ ಭಾರತೀಯರ ವಂಶವಾಹಿ ನಡುವೆ  ಸಾಮ್ಯತೆಗಳಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಆದರೆ ಆಸ್ಟ್ರೇಲಿಯಾದ ಜೀವವಿಜ್ಞಾನಿಗಳು ಇದೊಂದು ಭಾವನಾತ್ಮಕ ಸಂಶೋಧನೆ ಎಂದು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT