ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್: ಫೈನಲ್‌ಗೆ ಪೇಸ್- ವೆಸ್ನಿನಾ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಲಿಯಾಂಡರ್ ಪೇಸ್ ಮತ್ತು ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿತು. ಶುಕ್ರವಾರ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ ಪೇಸ್- ವೆಸ್ನಿನಾ 5-7, 6-2, 10-7 ರಲ್ಲಿ ಇಟಲಿಯ ರಾಬರ್ಟಾ ವಿನ್ಸಿ ಮತ್ತು ಡೇನಿಯಲ್ ಬ್ರಾಸಿಯಲಿ ಎದುರು ಜಯ ಪಡೆದರು.

ಭಾರತ- ರಷ್ಯಾ ಜೋಡಿ ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿತು. ಆದರೆ ಎರಡನೇ ಸೆಟ್‌ನಲ್ಲಿ ಸುಲಭ ಜಯ ಪಡೆದು ಸಮಬಲ ಸಾಧಿಸಿತು. ಆ ಬಳಿಕ ಸೂಪರ್ ಟೈಬ್ರೇಕರ್‌ನಲ್ಲಿ ಗೆಲುವು ಪಡೆದು ಫೈನಲ್‌ನಲ್ಲಿ ಸ್ಥಾನ ಪಡೆಯಿತು.

ಇದೀಗ ಭಾರತದ ಹಿರಿಯ ಆಟಗಾರ ಪೇಸ್‌ಗೆ ಇಲ್ಲಿ ಎರಡು ಪ್ರಶಸ್ತಿಗಳನ್ನು ಗೆಲ್ಲುವ ಅವಕಾಶ ಲಭಿಸಿದೆ.  ಅವರು ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜೊತೆ ಈಗಾಗಲೇ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.

ಭೂಪತಿ- ಸಾನಿಯಾಗೆ ಸೋಲು: ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿ ಹೊರಬಿದ್ದರು. ಆರನೇ ಶ್ರೇಯಾಂಕ ಹೊಂದಿದ್ದ ಭಾರತದ ಜೋಡಿ 3-6, 3-6 ರಲ್ಲಿ ಅಮೆರಿಕದ ಬೆಥನಿ ಮಟೆಕ್ ಹಾಗೂ ರೊಮೇನಿಯದ ಹೊರಿಯಾ ಟೆಕಾವ್ ಕೈಯಲ್ಲಿ ಪರಾಭವಗೊಂಡರು.

68 ನಿಮಿಷಗಳ ಕಾಲ ನಡೆದ ಹೋರಾಟದ ವೇಳೆ ಭೂಪತಿ ಮತ್ತು ಸಾನಿಯಾ ಹೊಂದಾಣಿಕೆಯ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಎರಡನೇ ಸೆಟ್ ಒಂದು ಹಂತದಲ್ಲಿ 3-3 ರಲ್ಲಿ ಸಮಬಲದಲ್ಲಿತ್ತು. ಈ ಹಂತದಲ್ಲಿ ಬೆಥನಿ ಮತ್ತು ಟೆಕಾವ್ ಎದುರಾಳಿಗಳ ಸರ್ವ್ ಮುರಿದು 4-3ರ ಮೇಲುಗೈ ಪಡೆದರು.

ಆ ಬಳಿಕ ತಮ್ಮ ಸರ್ವ್ ಉಳಿಸಿಕೊಂಡು ಮುನ್ನಡೆಯನ್ನು 5-3ಕ್ಕೆ ಹೆಚ್ಚಿಸಿಕೊಂಡರು. ಭಾರತದ ಜೋಡಿ ಮತ್ತೊಮ್ಮೆ ತಮ್ಮ ಸರ್ವ್ ಉಳಿಸಿಕೊಳ್ಳಲು ವಿಫಲರಾಗಿ ಸೋಲು ಒಪ್ಪಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT