ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್: ಸೆರೆನಾಗೆ ಸೋಲುಣಿಸಿದ ಮಕರೋವಾ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ರಾಯಿಟರ್ಸ್): ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಅಮೆರಿಕದ ಸೆರೆನಾ ವಿಲಿಯಮ್ಸ ಅವರ ಕನಸು ಭಗ್ನಗೊಂಡಿದೆ. ರಷ್ಯಾದ ಏಕ್ತರೀನಾ ಮಕರೋವಾ ಎದುರು ಸೋಲು ಅನುಭವಿಸಿದ ಸೆರೆನಾ ನಾಲ್ಕನೇ ಸುತ್ತಿನಲ್ಲೇ ಹೊರಬಿದ್ದರು. ನೊವಾಕ್ ಜೊಕೊವಿಚ್ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.

ಮೆಲ್ಬರ್ನ್ ಪಾರ್ಕ್‌ನ ರಾಡ್ ಲೇವರ್ ಅರೆನಾದಲ್ಲಿ ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಮಕರೋವಾ 6-2, 6-3 ರಲ್ಲಿ ಗೆಲುವು ಪಡೆದರು.

ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ 6-2, 7-6 ರಲ್ಲಿ ಸರ್ಬಿಯಾದ ಅನಾ ಇವನೋವಿಕ್ ಮೇಲೆ ಗೆಲುವು ಪಡೆದು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡರು.

ಜೊಕೊವಿಚ್‌ಗೆ ಜಯ: ಅಗ್ರಶ್ರೇಯಾಂಕದ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅವರು 6-1, 6-3, 4-6, 6-3 ರಲ್ಲಿ ಆಸ್ಟ್ರೇಲಿಯದ ಲೇಟನ್ ಹೆವಿಟ್ ಅವರನ್ನು ಸೋಲಿಸಿದರು.

ಆತಿಥೇಯ ದೇಶದ ಭರವಸೆ ಎನಿಸಿದ್ದ ಹೆವಿಟ್ ಮೂರನೇ ಸೆಟ್ ಗೆದ್ದು ಮರುಹೋರಾಟದ ಸೂಚನೆ ನೀಡಿದ್ದರು. ಆದರೆ ಜೊಕೊವಿಚ್ ನಾಲ್ಕನೇ ಸೆಟ್‌ನಲ್ಲಿ ಜಯ ಸಾಧಿಸಿ ಂದಿನ ಹಂತಕ್ಕೆ ಲಗ್ಗೆಯಿಟ್ಟರು.

ಜಪಾನ್‌ನ ಕೀ ನಿಶಿಕೊರಿ 2-6, 6-2, 6-1, 3-6, 6-3 ರಲ್ಲಿ     ಫ್ರಾನ್ಸ್‌ನ ಜೋ ವಿಲ್ಫ್ರೆಡ್ ಸೋಂಗಾ ವಿರುದ್ಧ ಅಚ್ಚರಿಯ ಗೆಲುವು ಪಡೆದರು. ಮಾತ್ರವಲ್ಲ 80 ವರ್ಷಗಳ ಬಿಡುವಿನ ಬಳಿಕ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಜಪಾನ್‌ನ ಮೊದಲ ಆಟಗಾರ ಎನಿಸಿಕೊಂಡರು. 1932 ರಲ್ಲಿ ಜಪಾನ್‌ನ ರೊಸುಕಿ ನುನೊಯ್ ಮತ್ತು ಜಿರೊ ಸತೋ ಇಲ್ಲಿ ಎಂಟರಘಟ್ಟ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT