ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಭಾರಿ ಮೊತ್ತ

ಆ್ಯಷಸ್ ಕ್ರಿಕೆಟ್: ಮೈಕರ್ಲ್ ಕ್ಲಾರ್ಕ್ 187 ರನ್
Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್ (ಎಎಫ್‌ಪಿ): ಮೈಕಲ್ ಕ್ಲಾರ್ಕ್ ಗಳಿಸಿದ 187 ರನ್ ಹಾಗೂ ಬ್ರಾಡ್ ಹಡಿನ್ ಮತ್ತು ಮಿಷೆಲ್ ಸ್ಟಾರ್ಕ್ ಅವರ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಕ್ರಿಕೆಟ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರಿ ಮೊತ್ತ ಕಲೆಹಾಕಿದೆ.

ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ ಮೈಕಲ್ ಕ್ಲಾರ್ಕ್ ಬಳಗ 146 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 527 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಇಂಗ್ಲೆಂಡ್ ತಂಡ 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿತ್ತು.

ಆಸೀಸ್ ತಂಡ ಮೂರು ವಿಕೆಟ್‌ಗೆ 303 ರನ್‌ಗಳಿಂದ ಆಟ ಮುಂದುವರಿಸಿತ್ತು. ಮೈಕಲ್ ಕ್ಲಾರ್ಕ್ ಮತ್ತು ಸ್ಟೀವನ್ ಸ್ಮಿತ್ ಕ್ರಮವಾಗಿ 125 ಹಾಗೂ 70 ರನ್‌ಗಳಿಂದ ಬೆಳಿಗ್ಗೆ ಆಟ ಆರಂಭಿಸಿದ್ದರು.

ಸ್ಮಿತ್ (89) ಹಾಗೂ ಬಳಿಕ ಬಂದ ಡೇವಿಡ್ ವಾರ್ನರ್ (5) ಅಲ್ಪ ಅಂತರದಲ್ಲಿ ಔಟಾದರು. ಇಬ್ಬರೂ ಇಂಗ್ಲೆಂಡ್ ಪರ ಯಶಸ್ವಿ ಬೌಲರ್ ಎನಿಸಿದ ಗ್ರೇಮ್ ಸ್ವಾನ್‌ಗೆ (159ಕ್ಕೆ 5) ವಿಕೆಟ್ ಒಪ್ಪಿಸಿದರು. ಆದರೆ ಬ್ರಾಡ್ ಹಡಿನ್ ನಾಯಕನಿಗೆ ತಕ್ಕ ಸಾಥ್ ನೀಡಿದರು. ಆರನೇ ವಿಕೆಟ್‌ಗೆ 62 ರನ್‌ಗಳು ಬಂದವು.

ದ್ವಿಶತಕದೆಡೆಗೆ ದಾಪುಗಾಲಿಟ್ಟಿದ್ದ ಕ್ಲಾರ್ಕ್ ಕೇವಲ 13 ರನ್‌ಗಳ ಅಂತರದಲ್ಲಿ ಆ ಅವಕಾಶ ಕಳೆದುಕೊಂಡರು. ಆಸೀಸ್ ತಂಡದ ನಾಯಕ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. 314 ಎಸೆತಗಳನ್ನು ಎದುರಿಸಿದ ಕ್ಲಾರ್ಕ್ 23 ಬೌಂಡರಿ ಸಿಡಿಸಿದರು. ಇಂಗ್ಲೆಂಡ್ ವಿರುದ್ಧ ಅವರು ಗಳಿಸಿದ ಗರಿಷ್ಠ ಮೊತ್ತ ಇದು.

ಕ್ಲಾರ್ಕ್ ಔಟಾದ ಬಳಿಕವೂ ಇಂಗ್ಲೆಂಡ್ ಬೌಲರ್‌ಗಳಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆಗಲಿಲ್ಲ. ಹಡಿನ್ (ಅಜೇಯ 65) ಮತ್ತು ಮಿಷೆಲ್ ಸ್ಟಾರ್ಕ್ (ಅಜೇಯ 66)  ಮುರಿಯದ ಎಂಟನೇ ವಿಕೆಟ್‌ಗೆ 97 ರನ್ ಕಲೆಹಾಕಿದರು. ಚಹಾ ವಿರಾಮದ ಬಳಿಕ ಆಸೀಸ್ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 146 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 527 ಡಿಕ್ಲೇರ್ಡ್ (ಮೈಕಲ್ ಕ್ಲಾರ್ಕ್ 187, ಸ್ಟೀವನ್ ಸ್ಮಿತ್ 89, ಬ್ರಾಡ್ ಹಡಿನ್ ಔಟಾಗದೆ 65, ಮಿಷೆಲ್ ಸ್ಟಾರ್ಕ್ 66, ಗ್ರೇಮ್ ಸ್ವಾನ್ 159ಕ್ಕೆ 5) ಇಂಗ್ಲೆಂಡ್: ಮೊದಲ ಇನಿಂಗ್ಸ್ 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 24.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT