ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ, ನೀರಿನ ಕಂದಾಯ ವಸೂಲಿ ಆರಂಭ

Last Updated 7 ಡಿಸೆಂಬರ್ 2012, 6:02 IST
ಅಕ್ಷರ ಗಾತ್ರ

ಮಳವಳ್ಳಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆ ಹಾಗೂ ನೀರಿನ ಕಂದಾಯ ವಸೂಲಿ ಕಾರ್ಯಕ್ಕೆ ಗುರುವಾರ 1ನೇ ವಾರ್ಡಿನ ಗಂಗಾಧರೇಶ್ವರಸ್ವಾಮಿ ದೇಗುಲ ಬಳಿ ಗುರವಾರ ಚಾಲನೆ ನೀಡಲಾಯಿತು.

ಮುಖ್ಯಾಧಿಕಾರಿ ಎಸ್.ಡಿ. ಮಂಜುನಾಥ ಮಾತನಾಡಿ, ಆಸ್ತಿ ತೆರಿಗೆ ಹಾಗೂ ನೀರಿನ ಕಂದಾಯ ಅಪಾರ ಪ್ರಮಾಣದಲ್ಲಿ ಬಾಕಿ ಉಳಿದಿದೆ. ಸರ್ಕಾರ ವಸೂಲಿ ಮಾಡದ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ತಡೆ ಹಿಡಿಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಆಸ್ತಿ ತೆರಿಗೆ, ನೀರಿನ ಕಂದಾಯ ಪಾವತಿಸಬೇಕು. ಡಿ.31ರ ಗಡುವಿನ ಒಳಗೆ ಹಣ ಪಾವತಿ ಸೂಕ್ತ ಎಂದು ಹೇಳಿದರು.

ಡಿ.10ರಂದು ವಾರ್ಡ್ ಸಂಖ್ಯೆ 3, 4, 5ರ ಕಂದಾಯವನ್ನು ಶೆಟ್ಟಹಳ್ಳಿ ರಸ್ತೆಯ ಕೇಂದ್ರದಲ್ಲಿ, ಡಿ.12ರಂದು 6, 7 ವಾರ್ಡ್‌ನ ಕರವನ್ನು ಮೈಸೂರು ರಸ್ತೆ ಕಾರ್ಖಾನೆ ಶಾಲೆ ಬಳಿ, ಡಿ.15ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರವಾಸಿ ಮಂದಿರದ ಮುಂಭಾಗ) ಬಳಿ 9,10,11 ವಾರ್ಡ್, ಡಿ.19ರಂದು ಕಾಳಮ್ಮನಗುಡಿ ಬೀದಿಯ ಸರ್ಕಾರಿ ಉರ್ದು ಶಾಲೆಯಲ್ಲಿ 12, 13, 14,15ನೇ ವಾರ್ಡ್, ಡಿ.22ರಂದು ಪೇಟೆ ಒಕ್ಕಲಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 16,17,18 ವಾರ್ಡ್, ಡಿ.27ರಂದು ಗಂಗಾಮತ ಬಡಾವಣೆಯ ಗಂಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ ಬಳಿ 19,20,21,22,23 ವಾರ್ಡ್ ನಾಗರಿಕರು ಕರ ಪಾವತಿ ಮಾಡಬಹುದು ಎಂದರು.

ಪುರಸಭೆ ನೌಕರರು ಬೆಳಿಗ್ಗೆ 8.30ರಿಂದ ಸಂಜೆ 4.30ರ ವರಗೆ ಹಾಜರಿರಲಿದ್ದರೆ ಎಂದರು.
ಶ್ರೀನಿವಾಸ್, ಪುಷ್ಪಾವತಿ. ರಮೇಶ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT