ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಉಳಿಸಿ

Last Updated 18 ಅಕ್ಟೋಬರ್ 2011, 18:45 IST
ಅಕ್ಷರ ಗಾತ್ರ

ಬೆಂಗಳೂರು: ಒಂದೆಡೆ ಬಡವರು ಆಹಾರಕ್ಕೆ ಪರದಾಡುತ್ತಿದ್ದರೆ ಮತ್ತೊಂ ದೆಡೆ ಅಪಾರ ಪ್ರಮಾಣದ ಆಹಾರ ವನ್ನು ವ್ಯರ್ಥವಾಗಿ ಎಸೆಯಲಾಗುತ್ತಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣ ಗೌಡ ವಿಷಾದಿಸಿದರು.

ವಿಶ್ವ ಆಹಾರ ದಿನಾಚರಣೆ ಅಂಗ ವಾಗಿ ಕೃಷಿ ವಿ.ವಿ.ಯ ಬೇಕರಿ ತರಬೇತಿ ಕೇಂದ್ರ ಮತ್ತು ರಾಷ್ಟ್ರೀಯ ಮೊಟ್ಟೆ ಸಂಯೋಜನಾ ಸಮಿತಿಯು (ಎನ್‌ಇಸಿಸಿ) ನಗರದಲ್ಲಿ ಮಂಗಳವಾರ ಏರ್ಪ ಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, `ಬೆಂಗಳೂರು ನಗರ ವೊಂದರಲ್ಲೇ ವಾರ್ಷಿಕ 250 ಕೋಟಿ ರೂಪಾಯಿ ಮೊತ್ತದ ಆಹಾರವನ್ನು ವ್ಯರ್ಥವಾಗಿ ಚೆಲ್ಲಲಾಗುತ್ತಿದೆ. ಆಹಾರ ವನ್ನು ವ್ಯರ್ಥಗೊಳಿಸುತ್ತಿರುವುದು ಸರಿ ಯಲ್ಲ~ ಎಂದು ನುಡಿದರು.

ಭಾರತದಲ್ಲಿ ಆಹಾರ ಉತ್ಪಾದನೆ ಪ್ರಮಾಣ ವಾರ್ಷಿಕ 241 ದಶಲಕ್ಷ ಟನ್. ಈ ಪ್ರಮಾಣ ಸ್ವಾತಂತ್ರ್ಯ ಸಂದ ರ್ಭದಲ್ಲಿ ವಾರ್ಷಿಕ 50 ದಶಲಕ್ಷ ಟನ್ ಇತ್ತು. ಉತ್ಪಾದನೆ ಆದ ಮಾತ್ರಕ್ಕೆ ಆಹಾರ ಎಲ್ಲರಿಗೂ ದೊರೆಯುತ್ತದೆ ಎಂದೇನೂ ಅರ್ಥವಲ್ಲ. ಆಹಾರ ಧಾನ್ಯ  ಅಗತ್ಯವಿದ್ದಷ್ಟು ಖರೀದಿಸಿದರೆ ಬೆಲೆ ನಿಯಂತ್ರಣದಲ್ಲಿರುತ್ತದೆ~ ಎಂದರು.

`ಉತ್ತಮ ಕೃಷಿ ವ್ಯವಸ್ಥೆ ಅಳವಡಿ ಸಿಕೊಳ್ಳುವುದರ ಜೊತೆಗೆ ಆಹಾರ ಧಾನ್ಯಗಳ ಬಳಕೆಯೊಂದಿಗೆ ಮೌಲ್ಯವ ರ್ಧನೆಯನ್ನೂ ಮಾಡಬೇಕು. ಕೃಷಿ ಕ್ಷೇತ್ರ ಉತ್ತಮ ಪರಿಸ್ಥಿತಿಯಲ್ಲಿ ಇಲ್ಲದ ಈ ಸಂದರ್ಭದಲ್ಲಿ ಆಹಾರವನ್ನು ಕಾಯ್ದುಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ~ ಎಂದರು.

ಕೃಷಿ ವಿ.ವಿ. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ವಿ.ವೀರಭದ್ರಯ್ಯ ಮಾತನಾಡಿ, `ಭಾರತ ಆಹಾರ ಉತ್ಪಾ ದನೆಯಲ್ಲಿ ಸ್ವಾವಲಂಬನೆ ಪಡೆದಿದೆ ಎಂದು ಹೇಳಲಾಗುತ್ತಿದ್ದರೂ ಶೇ 30 ರಷ್ಟು ಮಕ್ಕಳು ಪೌಷ್ಟಿಕಾಂಶದ ಕೊರ ತೆಯಿಂದ ಬಳಲುತ್ತಿದ್ದಾರೆ. ಸರ್ಕಾರ ಗೋದಾಮುಗಳಲ್ಲಿ ಸಂಗ್ರಹಿಸಿಡು ವುದೇ ಇದಕ್ಕೆ ಕಾರಣ~ ಎಂದರು.
ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಡಿ. ಗೋಪಿನಾಥ್ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT