ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ವಿಜ್ಞಾನಿಗಳಲ್ಲಿ ಬದ್ಧತೆ ಹೆಚ್ಚಲಿ: ಅಳಗಸುಂದರಂ

Last Updated 7 ಡಿಸೆಂಬರ್ 2012, 6:56 IST
ಅಕ್ಷರ ಗಾತ್ರ

ಮೈಸೂರು: ಆಹಾರ ಭದ್ರತೆ ಮತ್ತು ಸುರಕ್ಷತೆಗಾಗಿ ವಿಜ್ಞಾನಿಗಳಲ್ಲಿ ಬದ್ಧತೆ ಮತ್ತು ಸಮರ್ಪಣಾ ಭಾವ ಹೆಚ್ಚಬೇಕಿದೆ. ಆಹಾರ ವಿಜ್ಞಾನಿಗಳ ಮೇಲೆ ಇಡೀ ದೇಶದ ಜನರಿಗೆ ಬಹಳಷ್ಟು ನಿರೀಕ್ಷೆಗಳಿವೆ. ಅವುಗಳನ್ನು ಹುಸಿಗೊಳಿಸಬಾರದು ಎಂದು ತಂಜಾವೂರಿನ ಭಾರತೀಯ ಬೆಳೆ ಸಂಸ್ಕರಣೆ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಕೆ. ಅಳಗಸುಂದರಂ ಹೇಳಿದರು.

ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಗುರುವಾರ ಆರಂಭವಾದ 22ನೇ ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಮ್ಮೇಳನ ವನ್ನು ಉದ್ಘಾಟಿಸಿದ ಅವರು, ಮಾತನಾಡಿದರು.

`ನಮ್ಮ ದೇಶದಲ್ಲಿ ಬದ್ಧತೆ ಮತ್ತು ಸಮರ್ಪಣಾ ಭಾವಗಳ ಕೊರತೆಯನ್ನು ಎಲ್ಲ ಕ್ಷೇತ್ರಗಳಲ್ಲಿ ಕಾಣುತ್ತಿದ್ದೇವೆ. ಎಷ್ಟೆಲ್ಲ ಕಾನೂನುಗಳಿದ್ದರೂ ಆಹಾರ ಸಂರಕ್ಷಣೆಗಾಗಿ ಹಲವಾರು ರೀತಿಯ ರಾಸಾಯನಿಕ ಗಳನ್ನು ಬಳಸಲಾಗುತ್ತಿದೆ. ಅದು ನಮ್ಮ ದೇಹ ಸೇರುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಂತಹ ಪದ್ಧತಿಗಳನ್ನು ಬದಲಿಸಿ, ಬೇರೆ ರೀತಿಯ ಅಪಾಯಕಾರಿಯಲ್ಲದ ಪದ್ಧತಿಗಳನ್ನು ರೂಢಿ ಸಲು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಸಂಶೋ ಧನೆಗಳು ನಡೆಯಬೇಕು' ಎಂದು ಸಲಹೆ ನೀಡಿದರು.

`ಬಡವರಿಗೆ ಆಹಾರ ಭದ್ರತೆಯನ್ನು ನೀಡುವ ಸವಾಲು ನಮ್ಮ ಮುಂದಿದೆ. ಅದರೊಂದಿಗೆ ಅತಿ ಮುಖ್ಯವಾದ ಉತ್ತಮ ಗುಣಮಟ್ಟದ ಆಹಾರದ ಸುರಕ್ಷತೆ ನೀಡುವುದೂ ನಮ್ಮ ಜವಾಬ್ದಾರಿ. ಮನೆಯಲ್ಲಿ ತಾಯಿ ಮಾಡಿ ಬಡಿಸಿದ ಆಹಾರದಷ್ಟೇ ಉತ್ತಮ ಗುಣಮಟ್ಟದ ಮತ್ತು ಆರೋಗ್ಯಯುತ ವಾದ ರುಚಿಕರ ಆಹಾರ ನಮಗೆ ಹೊರಗೆ ಸಿಗುವುದಿಲ್ಲ. ಅಂತಹ ಒಂದು ಆಹಾರ ಸುರಕ್ಷತೆಯ ನೀತಿ ರೂಪಿಸುವುದು ಇಂದಿನ ಬಹುಮುಖ್ಯ ಅವಶ್ಯಕತೆ ಯಾಗಿದೆ' ಎಂದು ತಿಳಿಸಿದರು.

ಅವಶ್ಯಕತೆಗನುಗುಣವಾದ ಸಂಶೋಧನೆ: ಕಾರ್ಯಕ್ರಮದ ಮುಖ್ಯ ಅತಿಥಿ, ಸುರಕ್ಷತಾ ಬಲದ ಆಹಾರ ಸಂಶೋಧನೆ ಸಂಸ್ಥೆ (ಡಿಎಫ್‌ಆರ್‌ಎಲ್) ನಿರ್ದೇಶಕ ಡಾ. ಹರ್ಷವರ್ಧನ್ ಭತ್ರಾ, `ದೇಶದಲ್ಲಿ ಇವತ್ತು ತುರ್ತು ಅಗತ್ಯವಿರುವ ಸಾಧನಗಳ ಬಗ್ಗೆ ಸಂಶೋಧನೆಗಳು ಅಗತ್ಯ. ಸುರಕ್ಷಿತ ಅವಿಷ್ಕಾರಗಳು ಮತ್ತು ಸಂಶೋಧನೆಗಾಗಿ ಜೈವಿಕ ತಂತ್ರಜ್ಞಾನದ ಬಳಕೆ ಹೆಚ್ಚಬೇಕು' ಎಂದರು.

`ನಮ್ಮ ದೇಶದಲ್ಲಿ ವೈಯಕ್ತಿಕವಾಗಿ ನಡೆಸುವ ಸಂಶೋಧನೆಗಳಲ್ಲಿ ವಿಜ್ಞಾನಿಗಳು ಉತ್ತಮ ಸಾಧನೆ ತೋರುತ್ತಾರೆ. ಆದರೆ ತಂಡವಾಗಿ ಮತ್ತು ಸಂಘಟಿತ ರಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲರಾಗುತ್ತಾರೆ. ಇವತ್ತಿನ ಸಂದರ್ಭದಲ್ಲಿ ತಂಡವಾಗಿ ಕೆಲಸ ಮಾಡುವ ಅಗತ್ಯವಿದೆ. ಆಹಾರ ಸಂಶೋಧನೆಯ ವಿಭಿನ್ನ ಗುಂಪುಗಳಲ್ಲಿರುವ ವಿಜ್ಞಾನಿಗಳು ಒಂದಾಗಿ ಹೊಸ ತರಹದ ಯೋಚನೆಗಳೊಂದಿಗೆ ಕೆಲಸ ಮಾಡಬೇಕು. ಭಾರತೀಯ ವಿಜ್ಞಾನಿಗಳು ಬೇರೆಲ್ಲ ದೇಶದ ವಿಜ್ಞಾನಿಗಳಿಗಿಂತಲೂ ಹೆಚ್ಚು ಬುದ್ಧಿವಂತರು ಮತ್ತು ಗುಣಮಟ್ಟದ ಸಂಶೋಧನೆಗಳನ್ನು ನೀಡಬಲ್ಲರು. ಆದರೆ ತಂಡವಾಗಿ ಕಾರ್ಯನಿರ್ವ ಹಿಸಬೇಕು' ಎಂದು ಸಲಹೆ ನೀಡಿದರು.

ಜೆಎಫ್‌ಎಸ್‌ಟಿ ಸುವರ್ಣ ಮಹೋತ್ಸವ ಸ್ಮರಣಿಕೆ ಯನ್ನು ಕೇಂದ್ರ ಆಹಾರ ಸಂಶೋಧನೆ ಮತ್ತು ತಂತ್ರಜ್ಞಾನ ಸಂಸ್ಥೆಯ (ಸಿಎಫ್‌ಟಿಆರ್‌ಐ) ನಿರ್ದೇಶಕ ಪ್ರೊ. ರಾಮರಾಜಶೇಖರನ್ ಬಿಡುಗಡೆ ಮಾಡಿದರು. ಎಎಫ್‌ಎಸ್‌ಟಿ ಅಧ್ಯಕ್ಷ  ಡಾ. ಕೆ.ಡಿ. ಯಾದವ್, ಸಂಘಟನಾ ಕಾರ್ಯದರ್ಶಿ ಡಾ. ಟಿ. ಜಯರಾಣಿ, ಎಎಫ್‌ಎಸ್ಟಿ ಅಧ್ಯಕ್ಷೆ ಡಾ. ಜಿ. ವಿಜಯಲಕ್ಷ್ಮೀ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT