ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಹಣದುಬ್ಬರ ಹೆಚ್ಚಳ

Last Updated 6 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜುಲೈ ತಿಂಗಳ ಮಧ್ಯಭಾಗದಲ್ಲಿ 20 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದ್ದ ಆಹಾರ ಹಣದುಬ್ಬರವು, ಜುಲೈ 23ಕ್ಕೆ ಕೊನೆಗೊಂಡ ವಾರದಲ್ಲಿ ಮತ್ತೆ ಏರಿಕೆ ಕಂಡಿದೆ.

ಈರುಳ್ಳಿ, ಹಣ್ಣು ಮತ್ತು ಹಾಲು ತುಟ್ಟಿಯಾಗಿದ್ದರಿಂದ ಆಹಾರ ಬೆಲೆ ಏರಿಕೆಯು ಶೇ 8.04ಕ್ಕೆ ಹೆಚ್ಚಳಗೊಂಡಿದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿ ಅಳೆಯಲಾಗುವ ಆಹಾರ ಬೆಲೆ ಏರಿಕೆಯು ಹಿಂದಿನ ವಾರ ಶೇ 7.33ರಷ್ಟಿತ್ತು. ಇದು 2009ರ ನವೆಂಬರ್ ತಿಂಗಳ ನಂತರದ ಅತಿ ಕಡಿಮೆ ಮಟ್ಟವಾಗಿತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ದರವು ಶೇ 16.27ರಷ್ಟಿತ್ತು.

ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಈರುಳ್ಳಿ ಬೆಲೆ ವರ್ಷದಿಂದ ವರ್ಷಕ್ಕೆ ಶೇ 26, ಹಣ್ಣು ಶೇ 16, ತರಕಾರಿ ಮತ್ತು ಹಾಲು ಶೇ 10ರಷ್ಟು ತುಟ್ಟಿಯಾಗಿವೆ.

ಇದಲ್ಲದೇ, ದವಸ ಧಾನ್ಯಗಳು ಶೇ 5, ಆಲೂಗಡ್ಡೆ ಶೇ 8, ಮೊಟ್ಟೆ, ಮಾಂಸ ಮತ್ತು ಮೀನು ಶೇ 7ರಷ್ಟು ದುಬಾರಿಯಾಗಿವೆ. ಬೇಳೆಕಾಳು ಮಾತ್ರ ಶೇ 7ರಷ್ಟು ಅಗ್ಗವಾಗಿವೆ.

ಬೆಲೆ ಹೆಚ್ಚಳ ದರವು ಶೇ 8ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇದ್ದ ಪ್ರವೃತ್ತಿಯು ಎರಡು ವಾರಗಳ ಕಾಲ ಮುಂದುವರೆದಿದ್ದರೂ ಅದು ಅಲ್ಪಾವಧಿಯದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT