ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ- ಆಡಳಿತದಿಂದ ದಕ್ಷ, ಪಾರದರ್ಶಕ ಸೇವೆ

Last Updated 18 ಡಿಸೆಂಬರ್ 2012, 19:44 IST
ಅಕ್ಷರ ಗಾತ್ರ

ಬೆಂಗಳೂರು:  `ಸಾರ್ವಜನಿಕರಿಗೆ ಇ-ಆಡಳಿತದಿಂದ ದಕ್ಷ, ಪಾರದರ್ಶಕ, ಭರವಸೆಯ ಆಡಳಿತ ಸೇವೆ ಲಭ್ಯವಾಗಲಿದೆ' ಎಂದು ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಎನ್. ರಂಗಸ್ವಾಮಿ ಹೇಳಿದರು.

ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ `ಇ-ಆಡಳಿತದ ಸವಾಲುಗಳು ಮತ್ತು ಅವಕಾಶಗಳು' ವಿಷಯದ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

`ಇ-ಆಡಳಿತ ಸೇವೆಯಿಂದಾಗಿ ಮನೆ ಕಂದಾಯ ಪಾವತಿಸಲು ಇಲಾಖೆಯವರೆಗೂ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಪಾವತಿ ಮಾಡಬಹುದು. ಪಾಸ್‌ಪೋರ್ಟ್ ಪಡೆಯುವುದು ಕೂಡ ಸುಲಭವಾಗಿದೆ' ಎಂದರು.

`ಸರ್ಕಾರದ ಸೇವೆಗಳು ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡಬೇಕಾದರೆ ಇ - ಆಡಳಿತದ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು. ಶೀಘ್ರ ಕೆಲಸ, ಗುಣಮಟ್ಟದ ಸೇವೆ, ಕಡಿಮೆ ವೆಚ್ಚದಲ್ಲಿ ಮಾಹಿತಿ  ಇ-ಅಡಳಿತದಿಂದ ಸಾಧ್ಯ' ಎಂದು ಹೇಳಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿವೃತ್ತ ಪ್ರಾಧ್ಯಾಪಕ ಎಸ್.ಜಗದೀಶ್ ಮಾತನಾಡಿ, `ಅನಕ್ಷರಸ್ಥ ಗ್ರಾಹಕರಿಗೆ ಪ್ರಾಯೋಗಿಕವಾಗಿ ಇ-ಆಡಳಿತದ ಬಗ್ಗೆ ತರಬೇತಿ ನೀಡಬೇಕಾದ ಅಗತ್ಯವಿದೆ. ಸಾರ್ವಜನಿಕರನ್ನು ಹೆಚ್ಚು ಹೆಚ್ಚು ಇ-ಆಡಳಿತದಲ್ಲಿ ಭಾಗವಹಿಸುಂತೆ ಮಾಡುವುದು ಇದರ ಸವಾಲಾಗಿದೆ' ಎಂದರು.

ರೈಲ್ವೆ ಇಲಾಖೆಯು ಮೊದಲ ಬಾರಿಗೆ ಪರಿಣಾಮಕಾರಿಯಾಗಿ ಇ-ಆಡಳಿತ ಸೇವೆಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ' ಎಂದರು.

ರಾಷ್ಟ್ರೀಯ ಇ-ಆಡಳಿತ ವಿಭಾಗದ ನಿರ್ದೇಶಕಿ ದೀಪಾ ಸೆಂಗಾರ, ಕುಲಸಚಿವ ಪ್ರೊ. ಟಿ.ಡಿ.ಕೆಂಪರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT