ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಪಾವತಿ: ಗ್ರಾಹಕರಿಗೆ ಭೀತಿ

Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆ (ಇ-ಪಾವತಿ) ಉತ್ತೇಜಿಸಲು ಸಾಕಷ್ಟು ಶ್ರಮ ವಹಿಸುತ್ತಿದೆ. ಚೆಕ್ ಬದಲಿಗೆ ಕ್ರೆಡಿಟ್, ಡೆಬಿಟ್, ಪ್ರಿಪೇಯ್ಡ ಕಾರ್ಡ್‌ಗಳ ರೂಪದಲ್ಲಿ `ಪ್ಲಾಸ್ಟಿಕ್ ಮನಿ' ಬಳಸುವಂತೆಯೂ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಆದರೆ, ಕೇವಲ ಶೇ 3.6ರಷ್ಟು ಜನರು ಮಾತ್ರ ನಗದು ರಹಿತ ವಹಿವಾಟಿನಲ್ಲಿ ನಂಬಿಕೆ ಹೊಂದಿದ್ದಾರೆ ಎನ್ನುತ್ತದೆ ಇತ್ತೀಚಿನ ಸಮೀಕ್ಷೆ.

ಕಾಗದ ರಹಿತ ಹಣಕಾಸು ವ್ಯವಸ್ಥೆ ಕುರಿತು ಗ್ರಾಹಕರಲ್ಲಿ ಮಾಹಿತಿ ಕೊರತೆ ಇರುವುದರಿಂದ ಮತ್ತು ಅನಕ್ಷರಸ್ಥರಲ್ಲಿ ನಗದು ರಹಿತ ವಹಿವಾಟಿನ ಬಗ್ಗೆ ಭಯ ಇರುವುದರಿಂದ `ಆರ್‌ಬಿಐ'ನ ಕ್ರಮಗಳು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿಲ್ಲ. ಭಾರತೀಯಲ್ಲಿ ಶೇ 3.6ರಷ್ಟು ಜನರು ಮಾತ್ರ ಇ-ಪಾವತಿ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದಾರೆ ಎಂದು `ಇಂಡಿಯಾ ಡೆವಲಪ್‌ಮೆಂಟ್ ಫಂಡ್' ಮತ್ತು `ಇಂಟರ್‌ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ' ನಡೆಸಿದ ಸಮೀಕ್ಷೆ ತಿಳಿಸಿದೆ. 

ನಗರ ಪ್ರದೇಶಗಳಲ್ಲಿ ಶೇ 11ರಷ್ಟು ಗ್ರಾಹಕರು ನಗದು ರಹಿತ ವಹಿವಾಟಿನಲ್ಲಿ ನಂಬಿಕೆ ಹೊಂದಿದ್ದಾರೆ ಮತ್ತು ಇದನ್ನು ಬಳಸುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ಕೇವಲ ಶೇ 0.43ರಷ್ಟಿದೆ ಎಂದೂ ಈ ಅಧ್ಯಯನ ಹೇಳಿದೆ. ಒಟ್ಟು 3,066 ಕುಟುಂಬಗಳನ್ನು ಸಮೀಕ್ಷಾ ತಂಡ ಸಂದರ್ಶಿಸಿದೆ.

ಸುಮಾರು ರೂ.1 ಲಕ್ಷ ಕೋಟಿಯಷ್ಟು ನಗದು ಸದ್ಯ ಚಲಾವಣೆಯಲ್ಲಿದೆ ಎಂದಿಟ್ಟುಕೊಳ್ಳಿ. ಇದರಲ್ಲಿ ಶೇ 1ರಷ್ಟು ಪ್ರಮಾಣ ನಗದು ರಹಿತ ವಹಿವಾಟಿಗೆ ವರ್ಗಾವಣೆ ಆದರೂ, ಒಟ್ಟಾರೆ ನಗದು ಪ್ರಸಾರ ರೂ.100 ಕೋಟಿಯಷ್ಟು ಕಡಿಮೆ ಆಗುತ್ತದೆ ಎಂದು ಈ ಅಧ್ಯಯನ ವಿವರಿಸಿದೆ.

ಸದ್ಯ ದೇಶದಲ್ಲಿ ಶೇ 96ರಷ್ಟು ವಹಿವಾಟು ನಗದು ಮೂಲಕವೇ ನಡೆಯುತ್ತಿದೆ. `ಆರ್‌ಬಿಐ' ಕರೆನ್ಸಿ ನೋಟುಗಳ ಮುದ್ರಣಕ್ಕಾಗಿಯೇ ವಾರ್ಷಿಕ (2009-10ರ ಅಂಕಿ-ಅಂಶದಂತೆ) ರೂ.2,800 ಕೋಟಿ ವ್ಯಯಿಸುತ್ತಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT