ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಮೇಲ್ ಸಂಗ, ಉತ್ಪಾದಕತೆಗೆ ಭಂಗ!

Last Updated 1 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಉದ್ಯೋಗಿಗಳು ಪ್ರತಿದಿನ ತಮ್ಮ ಕೆಲಸದ ಅವಧಿಯಲ್ಲಿ  ಸರಾಸರಿ ಎರಡೂವರೆ ಗಂಟೆಗಳ ಕಾಲವನ್ನು ಇ-ಮೇಲ್ ಬರೆಯುವುದಕ್ಕಾಗಿಯೇ ಅನಗತ್ಯವಾಗಿ ವ್ಯಯಿಸುತ್ತಿರುವ ಸಂಗತಿ ಸಮೀಕ್ಷೆಯೊಂದರಿಂದ ಗೊತ್ತಾಗಿದೆ.

ಮೆಕೆನ್ಸಿ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಜನಮತ ಸಂಗ್ರಹದಿಂದ ಇದನ್ನು ಲೆಕ್ಕ ಹಾಕಿದ್ದು, ಉದ್ಯೋಗಿಗಳ ಕಂಪ್ಯೂಟರ್ ಬಳಕೆ ರೀತಿಯಲ್ಲಿ ಕೆಲವು ಬದಲಾವಣೆಗಳನ್ನು ಸಲಹೆ ಮಾಡಿದೆ. ಇದನ್ನು ಅಳವಡಿಸಿಕೊಂಡಿದ್ದೇ ಆದರೆ ಸಿಬ್ಬಂದಿಯ ಉತ್ಪಾದಕತೆ ಶೇ 25ರಷ್ಟು ಅಧಿಕವಾಗುತ್ತದೆಂದು ಅದು ಅಭಿಪ್ರಾಯಪಟ್ಟಿದೆ.

ಒಟ್ಟು 46 ಗಂಟೆಗಳ ಒಂದು ವಾರದ ಕೆಲಸದ ಅವಧಿಯಲ್ಲಿ ಬಹುಪಾಲು ಉದ್ಯೋಗಿಗಳ ಶೇ 25ಕ್ಕೂ ಹೆಚ್ಚು ಸಮಯ ಕೆಲಸದ ಬದಲಿಗೆ, ಅನಗತ್ಯವಾಗಿ ಇ-ಮೇಲ್‌ಗಳನ್ನು ಕಳುಹಿಸುವುದು, ಇ-ಮೇಲ್‌ಗಳನ್ನು ನೋಡುವುದು, ಇ-ಮೇಲ್‌ಗಳನ್ನು ಕ್ರೋಡೀಕರಿಸುವುದು ಇತ್ಯಾದಿಗಳಿಗಾಗಿಯೇ ಬಳಕೆಯಾಗುತ್ತಿದೆ. ಅಂದರೆ, ಕಚೇರಿಯ ನೌಕರರು ವರ್ಷವೊಂದರಲ್ಲಿ ಸರಾಸರಿ  81 ಕೆಲಸದ ದಿನಗಳನ್ನು ಇ ಮೇಲ್‌ಗಾಗಿಯೇ ವ್ಯಯಿಸುತ್ತಾರೆ ಎಂದು ಅದು ವಿವರಿಸಿದೆ.

`ತಮ್ಮ ಕಚೇರಿಯಲ್ಲೇ ಇರುವ ಸಹೋದ್ಯೋಗಿಗಳಿಗೆ ಇ-ಮೇಲ್ ಮಾಡುವ ಬದಲಿಗೆ, ಅವರೊಡನೆ ಖುದ್ದು ಮಾತನಾಡುವುದು ಸೂಕ್ತ. ಇದರಿಂದ ಸಮಯ ಉಳಿಯುತ್ತದೆ. ಮುಖಾಮುಖಿ ಮಾತನಾಡುವಾಗ, ಧ್ವನಿ- ಮುಖ ಚಹರೆ- ಆಂಗಿಕ ಚಲನೆ- ಇವೆಲ್ಲವೂ ಮನಸ್ಸಿಗೆ ನಾಟುತ್ತವೆ. ಕಂಪ್ಯೂಟರನ್ನೇ ಸಂವಹನ ಮಾಧ್ಯಮವನ್ನಾಗಿ ಮಾಡಿಕೊಂಡರೆ ಸಂವಹನದ ಈ ಸೂಕ್ಷ್ಮಗಳನ್ನೆಲ್ಲಾ ನಾವು ಕಳೆದುಕೊಂಡಂತೆಯೇ ಸರಿ~ ಎಂದು ಅದು ಹೇಳಿದೆ.

ಕೆಲವೊಮ್ಮೆ ಇ-ಮೇಲ್ ವಿನಾಕಾರಣ ಸಂಘರ್ಷವನ್ನೂ ಹುಟ್ಟು ಹಾಕಬಲ್ಲದು. ಮುಖಾಮುಖಿ ಮಾತನಾಡಿದರೆ ಚುಟುಕಾಗಿ, ಸುಲಭವಾಗಿ ಹೇಳಬಹುದಾದ ಸಂಗತಿಗಳನ್ನು ಇ-ಮೇಲ್‌ನಲ್ಲಿ ಸುದೀರ್ಘವಾಗಿ ವಿವರಿಸಬೇಕಾಗುತ್ತದೆ ಎಂದೂ ಸಮೀಕ್ಷೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT