ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಸ್ಟ್ಯಾಂಪ್ ಕಾಗದ ಕೊರತೆ, ಜನರ ಪರದಾಟ

Last Updated 22 ಸೆಪ್ಟೆಂಬರ್ 2011, 7:30 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದಲ್ಲಿ ಇ-ಸ್ಟ್ಯಾಂಪ್‌ಕಾಗದಗಳ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಬ್ಯಾಂಕ್‌ಗಳ ಮುಂದೆ ಇಡೀ ದಿನ ಸಾಲಿನಲ್ಲಿ ನಿಂತು ಪಡೆಯುವ ಪರಿಸ್ಥಿತಿ ಉಂಟಾಗಿದೆ. ಪ್ರತಿನಿತ್ಯ ಸಮಸ್ಯೆ ಬಿಗಡಾಯಿಸುತ್ತಿದ್ದರೂ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ.

ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಪ್ರಮಾಣಪತ್ರದ ದಾಖಲೆ ಅಗತ್ಯವಾಗಿದ್ದು, ಇದಕ್ಕಾಗಿ ಇ-ಸ್ಟ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಸಕಾಲಕ್ಕೆ, ಸಮರ್ಪಕವಾಗಿ ವಿತರಿಸುವ ವ್ಯವಸ್ಥೆಯಾಗಿಲ್ಲ.

ಪ್ರಸ್ತುತ ನಗರದಲ್ಲಿ ಮರ್ಚೆಂಟ್ ಸೌಹಾರ್ದ ಬ್ಯಾಂಕ್ ಮತ್ತು ಕನ್ನಿಕಾ ಸಹಕಾರ ಬ್ಯಾಂಕ್ ಹಾಗೂ ಮುಖ್ಯ ಅಂಚೆ ಕಚೇರಿಯಲ್ಲಿ ಇ-ಸ್ಟ್ಯಾಂಪ್ ವಿತರಿಸಲಾಗುತ್ತಿದೆ. ಆದರೆ, ಸಾರ್ವಜನಿಕರ ಬೇಡಿಕೆ ತಕ್ಕಂತೆ ಅರ್ಜಿಗಳನ್ನು ಇಲ್ಲಿ ವಿತರಿಸುತ್ತಿಲ್ಲ.

ಈ ಬ್ಯಾಂಕ್‌ಗಳು ಪ್ರತಿದಿನ ಕೇವಲ 100ರಿಂದ 150 ಅರ್ಜಿಗಳನ್ನು ಮಾತ್ರ ವಿತರಿಸುತ್ತಿವೆ. ಆದರೆ, ಚಿತ್ರದುರ್ಗ ತಾಲ್ಲೂಕಿನಲ್ಲೇ ಕನಿಷ್ಠ ಎರಡು ಸಾವಿರ ಇ-ಸ್ಟ್ಯಾಂಪಿಂಗ್ ಅರ್ಜಿಗಳು ಬೇಕು. ಕೇವಲ ನೂರು ಅರ್ಜಿಗಳನ್ನು ವಿತರಿಸಿದರೆ ಉಳಿದವರು ಎಲ್ಲಿಗೆ ಹೋಗಬೇಕು ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಪ್ರಶ್ನಿಸಿದ್ದಾರೆ.

ಈ ಮೊದಲು ್ಙ 500 ತನಕ ಛಾಪಾ ಕಾಗದಕ್ಕೆ ್ಙ 5 ಪಡೆಯಲಾಗುತ್ತಿದೆ. ಆದರೆ, ಈಗ ್ಙ 20 ಅರ್ಜಿಗೆ ್ಙ 12 ಕಮಿಷನ್ ಪಡೆಯಲಾಗುತ್ತಿದೆ. ಹೆಚ್ಚಿನ ಮೊತ್ತದ ಅರ್ಜಿಗೆ ಕಮಿಷನ್ ಏರಿಕೆಯಾಗುತ್ತಾ ಹೋಗುತ್ತದೆ. ಇದರಿಂದ ಬಡವರಿಗೆ, ರೈತರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಕಮಿಷನ್ ಪ್ರಮಾಣವನ್ನು ಕಡಿತಗೊಳಿಸಬೇಕು ಎನ್ನುವುದು ನಾಗರಿಕರ ಆಗ್ರಹ.

ಈ ಅರ್ಜಿಗಳನ್ನು ವಿತರಿಸಲು ಬ್ಯಾಂಕ್‌ನವರು ಹೆಚ್ಚಿನ ಸಿಬ್ಬಂದಿ ನಿಯೋಜಿಸದಿರುವುದು ಸಹ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಕನಿಷ್ಠ ಮೂವರು ಸಿಬ್ಬಂದಿ ಈ ಕಾರ್ಯಕ್ಕೆ ಬೇಕು. ಜತೆಗೆ ಇ-ಸ್ಟ್ಯಾಂಪ್ ಎಲ್ಲ ವಿವರಗಳು ಇಂಗ್ಲಿಷ್‌ನಲ್ಲಿರುವುದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಕಷ್ಟವಾಗುತ್ತಿದೆ. ಆದ್ದರಿಂದ, ಈ ಮೊದಲು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿದ್ದ ವ್ಯವಸ್ಥೆಯನ್ನೇ ಮತ್ತೆ ಜಾರಿಗೊಳಿಸಬೇಕು ಎನ್ನುವುದು ನಾಗರಿಕರ ಒತ್ತಾಯ.

ಅರ್ಜಿಗಳನ್ನು ವಿತರಿಸಲು ಇನ್ನೂ ಎರಡು ಬ್ಯಾಂಕ್‌ಗಳಲ್ಲಿ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಭರಮಸಾಗರದಲ್ಲಿ ಇ-ಸ್ಟ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಇ-ಸ್ಟ್ಯಾಂಪ್ ವಿತರಿಸಲು ಉದ್ದೇಶಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯವಿರುವಷ್ಟು ಇ-ಸ್ಟ್ಯಾಂಪ್‌ಗಳನ್ನು ನಿಗದಿತ ಸಮಯದಲ್ಲಿ ವಿತರಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗುತ್ತಿದೆ ನೋಂದಣಾಧಿಕಾರಿಗಳು ಹೇಳುತ್ತಾರೆ.

ತ್ವರಿತಗತಿಯಲ್ಲಿ ಇ-ಸ್ಟ್ಯಾಂಪ್‌ಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವ ವ್ಯವಸ್ಥೆಯಾಗಬೇಕು. ಈ ಮೂಲಕ ಗ್ರಾಮಾಂತರ ಪ್ರದೇಶದ ಮತ್ತು ಬಡಜನತೆಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ನಾಗರಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT