ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ: ವಿಜೃಂಭಣೆಯ ಕೋರೆಗಾಂವ ವಿಜಯೋತ್ಸವ

Last Updated 2 ಜನವರಿ 2012, 5:45 IST
ಅಕ್ಷರ ಗಾತ್ರ

ಇಂಡಿ: ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯ ಆವರಣದಲ್ಲಿ ಕೋರೆಗಾಂವ ವಿಜಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತಹಸೀಲ್ದಾರ ಜಿ.ಎಲ್.ಮೇತ್ರಿ ಅವರು ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ದಲಿತ ಸಂಘಟನೆಗಳ ಪದಾಧಿಕಾರಿಗಳ ಸಹಯೋಗದೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚುವುದರ ಮೂಲಕ ವಿಜಯೋತ್ಸವ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ತಹಸೀಲ್ದಾರ ಜಿ. ಎಲ್. ಮೇತ್ರಿ, ಕೋರೇಗಾಂವ ಯುದ್ಧ ಮತ್ತು ಮಹರ್ ಸೈನಿಕರು ಶೌರ್ಯ ಸಾಹಸಿಗರು ಎಂಬುದನ್ನು ಕೋರೆಗಾಂವದಲ್ಲಿ ತೋರಿಸಿಕೊಟ್ಟಿದ್ದಾರೆ. ಈ ಬಗ್ಗೆ ಅನೇಕ ಸಂಶೋಧನೆಗಳನ್ನು ನಡೆಸಿ ಅದರ ಫಲವಾಗಿ ಕೋರೆಗಾಂವದಲ್ಲಿ ಸ್ಮಾರಕವು ಬೆಳಕಿಗೆ ಬಂದಿದೆ. ಪ್ರತಿ ವರ್ಷ ಜ. 1 ರಂದು ಕೋರೆಗಾಂವ ವಿಜಯೋತ್ಸವನ್ನು ಸ್ವತಃ ಡಾ. ಬಿ.ಆರ್.ಅಂಬೇಡ್ಕರ್‌ರ ನಾಯಕತ್ವದಲ್ಲಿ ಆಚರಿಸಲಾಗುತ್ತಿತ್ತು ಎಂದರು.

ಅವರು ವಿಜಯೋತ್ಸವ ಆಚರಿಸುತ್ತಿರುವುದನ್ನು ನೆನಪಿಸಿಕೊಳ್ಳಲು ಇಂಡಿ ತಾಲ್ಲೂಕಿನ ದಲಿತ ಬಾಂಧವರು ಸೇರಿ ತಾಲ್ಲೂಕಿನಲ್ಲಿ ಪ್ರತಿ ವರ್ಷ ಜನವರಿ 1 ರಂದು ಕೋರೆಗಾಂವ ವಿಜಯೋತ್ಸವ ಆಚರಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜೈಭೀಮ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಕಾಳೆ, ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಸರಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ. ಜಿ. ಬನಸೋಡೆ, ಛಲವಾದಿ ಮಹಾ ಸಭಾದ ತಾಲ್ಲೂಕು ಅಧ್ಯಕ್ಷ ಭೀಮಾಶಂಕರ ಮೂರಮನ, ಪ್ರಧಾನ ಕಾರ್ಯದರ್ಶಿ ಶೇಖರ ಶಿವಶರಣ, ಮುಖ್ಯ ಶಿಕ್ಷಕ ಎಂ. ಎಚ್. ಜಾಬೇನವರ, ತಾಲ್ಲೂಕು ಸಾಕ್ಷರ ಭಾರತ ನೋಡಲ್ ಅಧಿಕಾರಿಗಳಾದ ನಿಜಣ್ಣ ಕಾಳೆ, ಸಿದ್ರಾಮ ಮಂಗಳೂರ, ಕೆ. ಎನ್. ನಡುವಿನಮನಿ, ಟಿ. ವೈ. ಗುನ್ನಾಪೂರ, ತಾಲ್ಲೂಕು ದಲಿತ ಉಪ ಮುಖಂಡ ಮುಕುಂದ ಕಾಂಬ್ಳೆ, ರಾಜು ಹಳ್ಳದಮನಿ, ಅರವಿಂದ ವಠಾರ, ಮಹಾಂತೇಶ ಕಾಳೆ, ಮಾಳಪ್ಪ ಅಂಜುಟಗಿ, ಲಕ್ಕಪ್ಪ ಇಂಡಿ, ರಾಜು ಕಾಲೇಬಾಗ, ಸಂತೋಷ ಹಾದಿಮನಿ, ಸದಾಶಿವ ಕಾಲೇಬಾಗ, ಕಲ್ಲಪ್ಪ ಅಂಜುಟಗಿ, ದರಮರಾಜ ಕಾಂಬಳೆ, ನಿಂಬಣ್ಣ ನಾಗರಾಳ, ವಿಠ್ಠಲ ಶಿವಶರಣ, ಸಿ. ಎಂ. ಕಾಂಬ್ಳೆ, ನೀಲಪ್ಪ ಕಾಲೇಬಾಗ ಉಪಸ್ಥಿತರ್ದ್ದಿದರು.
ಕರ್ನಾಟಕ ರಾಜ್ಯ ಸರಕಾರಿ ಎಸ್‌ಸಿ.ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಸಿ. ಜಿ. ಬನಸೋಡೆ ಸ್ವಾಗತಿಸಿದರು. ನಿಜಣ್ಣ ಕಾಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT