ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಚರ್ಚ್ ಆಫ್ ಕ್ರೈಸ್ಟ್ನಿಂದ ಕ್ರಿಸ್ಮಸ್

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕ್ರಿಸ್ಮಸ್ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ತಯಾರಿ ಜೋರಾಗಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ನಗರದ ಪ್ರಖ್ಯಾತ ಇಂಡಿಯನ್ ‘ಚರ್ಚ್ ಆಫ್ ಕ್ರೈಸ್ಟ್’ ಕ್ರಿಸ್ಮಸ್ ಉತ್ಸವ (ಕಾರ್ನಿವಲ್) ಆಚರಿಸಲು ಸಿದ್ಧತೆ ಪ್ರಾರಂಭಿಸಿದೆ. ಈ ಕಾರ್ಯಕ್ರಮವು ಡಿಸೆಂಬರ್ ೨೨ರ ಭಾನುವಾರ ಕೂಕ್ ಟೌನ್, ಡಿಕೋಸ್ಟಾ ಲೇ ಔಟ್ ಮಾರಿನಿಕೇತನ ಸ್ಕೂಲ್‌ನಲ್ಲಿ ನಡೆಯಲಿದೆ. 

‘ಇಂಡಿಯನ್ ಚರ್ಚ್ ಆಫ್ ಕ್ರೈಸ್ಟ್ ಕಳೆದ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಈ ಕ್ರಿಸ್ಮಸ್ ಉತ್ಸವಕ್ಕೆ ಜನರ ಉತ್ತಮ ಬೆಂಬಲ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಈ ವರ್ಷವೂ ಉತ್ಸವ ಆಚರಣೆಗೆ ಸಿದ್ಧತೆ ನಡೆಸಿದೆ. ಆಚರಣೆಯ ವೇಳೆ ಹಲವು ವಿನೋದ ಕೂಟಗಳು ನಡೆಯಲಿವೆ. ಛದ್ಮವೇಷ, ನಾಟಕ, ಹಾಡುಗಾರಿಕೆ, ಗಾಸ್ಪೆಲ್ (ಕ್ರಿಸ್ತನು ಉಪದೇಶಿಸಿದ ಶುಭನುಡಿ) ಹಾಡುಗಾರಿಕೆ ಸ್ಪರ್ಧೆ, ನೃತ್ಯ ಹಾಗೂ ಕಾರ್ನಿವಲ್, ಆಟಗಳು ಮತ್ತು ಸ್ವಾದಿಷ್ಟವಾದ ವಿವಿಧ ಬಗೆಯ ಭಕ್ಷ್ಯಗಳ ಮೇಳ ನಡೆಯಲಿದೆ. ಒಟ್ಟಾರೆ ವೈಭವ, ಮೋಜು ಮತ್ತು ಹರ್ಷಗಳಿಗೆ ಯಾವುದೇ ಕೊರತೆ ಇರುವುದಿಲ್ಲ’ ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕರು. ಉತ್ಸವದ ವೇಳೆ ಚರ್ಚ್‌ ಆವರಣದಲ್ಲಿ ಅಂಗಡಿಗಳು ತಲೆ ಎತ್ತಲಿವೆ. ಬಗೆಬಗೆಯ ಗುಡ್ಡೀಸ್‌ಗಳ ಮಾರಾಟ ಇಲ್ಲಿನ ಪ್ರಮುಖ ಆಕರ್ಷಣೆ. ಉತ್ಸವದ ಆಚರಣೆಗಳು ಬೆಳಿಗ್ಗೆ ೯ಕ್ಕೆ ಆರಂಭವಾಗಿ ರಾತ್ರಿ ೮ ಗಂಟೆಗೆ ಮುಗಿಯಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT