ಇಂಡಿಯಾಕ್ಯಾನ್ ನಗರದಲ್ಲಿ ತನ್ನ ತೃತೀಯ ವೃತ್ತಿ ತರಬೇತಿ ಕೇಂದ್ರವನ್ನು ಆರಂಭಿಸಿದೆ.
ಇಂಡಿಯಾಕ್ಯಾನ್ ಉದ್ಯೋಗ ಕೌಶಲಗಳ ತರಬೇತಿ ನೀಡುವ ಸಂಸ್ಥೆ. ಯುವಜನರಿಗೆ ಉದ್ಯೋಗಾರ್ಹತೆಗೆ ತಕ್ಕಂತೆ ಕೌಶಲಗಳನ್ನು ಒದಗಿಸುವುದು ಇದರ ಉದ್ದೇಶ. ಇಂಡಿಯಾಕ್ಯಾನ್ ಶಿಕ್ಷಣ ಸಂಸ್ಥೆಯಾದ ಎಜುಕ್ಯಾಂಪ್ ಸಲ್ಯೂಷನ್ಸ್ ಲಿಮಿಟೆಡ್‌ನ ಒಂದು ಸಹಯೋಗಿ ಸಂಸ್ಥೆ. ಇದು ಪಿಯರ್ಸನ್ ಜೊತೆಗೂಡಿ ನಗರದಲ್ಲಿ ಮೂರನೆಯ ವೃತ್ತಿ ತರಬೇತಿ ಕೇಂದ್ರ ಆರಂಭಿಸಿದೆ. ಈ ಕೇಂದ್ರದಲ್ಲಿ ಸಂವಹನ, ಲೆಕ್ಕ, ಮಾರಾಟ, ಚಿಲ್ಲರೆ ಮತ್ತು ಐಟಿ ಹಾಗೂ ಮೂಲಭೂತ ಸೌಲಭ್ಯ ನಿರ್ವಹಣಾ ವಿಷಯಗಳ ಬಗ್ಗೆ ಗಮನ ಹರಿಸಲಾಗುತ್ತದೆ.