ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ 24ರವರೆಗೆ ನವರಾತ್ರಿ ಉತ್ಸವ

Last Updated 16 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ರಾಯಚೂರು: ಇಲ್ಲಿನ ಬ್ರೇಸ್ತವಾರಪೇಟೆಯ ಉಪ್ಪಾರವಾಡಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಮಿತಿಯು 41ನೇ ದಸರಾ ನವರಾತ್ರಿ ಉತ್ಸವ ಅಂಗವಾಗಿ ಇದೇ 16ರಿಂದ 24ರವರೆಗೆ ವಿಶೇಷ ಪೂಜೆ, ಹೋಮ, ರಥೋತ್ಸವ, ಪದ್ಮಾವತಿ-ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

16ರಂದು ಸೂರ್ಯವಾಹನ, 17ರಂದು ಆದಿಶೇಷವಾಹನ, 18ರಂದು ಸಿಂಹವಾಹನ, 19ರಂದು ಗರುಡವಾಹನ, 20ರಂದು ಪವಮಾನ ಹೋಮ ಹಾಗೂ ಅಂಜನೇಯ ವಾಹನ ಉತ್ಸವ ನಡೆಯಲಿದೆ. 21ರಂದು ಕಾಮಧೇನು ಕಲ್ಪವೃಕ್ಷವಾಹನ ಹಾಗೂ ಕಳಸಗಳ ಸಂಗಡ ದೀರ್ಘದಂಡ ನಮಸ್ಕಾರ  ನಡೆಯಲಿದೆ. 22ರಂದು ಚಂದ್ರವಾಹನ ಹಾಗೂ ಉಚ್ಚಾಯ ಸೇವೆ ನೆರವೇರಲಿದೆ. 

23ರಂದು ಗಜವಾಹನ ಮತ್ತು ಅಶ್ವವಾಹನ ಹಾಗೂ ರಥೋತ್ಸವ ನಡೆಯಲಿದೆ. ನಂತರ ದೇವರ ಪುಷ್ಪಮಾಲೆ, ಮುತ್ತಿನ ಹಾರ ಹರಾಜು ನಡೆಸಲಾಗುತ್ತದೆ. 24ರಂದು ಮುಂಜಾನೆ 9ರಿಂದ ಶ್ರೀ ಪದ್ಮಾವತಿ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಅದೇ ದಿನ ಸಂಜೆ 5ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಜೂಕೂರು ವೀರಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಆದಿರಾಜ ಆದೋನಿ ಅವರು ಪ್ರಕಟಣೆಯಲ್ಲಿ    ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT