ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಆಟೊಗೆ ಮೀಟರ್ ಕಡ್ಡಾಯ

Last Updated 15 ಜುಲೈ 2013, 4:45 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಪ್ರಯಾಣಿಕರನ್ನು ಸಾಗಿಸುವ ಬಾಡಿಗೆ ಆಟೊರಿಕ್ಷಾಗಳು ಕಡ್ಡಾಯವಾಗಿ ಮೀಟರ್ ಬಳಸಬೇಕು ಎಂಬ ಆದೇಶವು ಜುಲೈ 15ರಿಂದ ಜಾರಿಯಾಗಲಿದ್ದು, ಮೀಟರ್ ಪ್ರಕಾ ರವೇ ಹಣವನ್ನು ಪ್ರಯಾಣಿಕರಿಂದ ಪಡೆಯಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ಕೆ. ಹೇಮಾದ್ರಿ ಅವರು ಆಟೊ ಚಾಲಕರಿಗೆ ಸೂಚಿಸಿದ್ದಾರೆ.

`ಮೊದಲ 2 ಕಿ.ಮೀ.ಗೆ ಕನಿಷ್ಠ ದರ ವನ್ನು 20 ರೂಪಾಯಿ ಹಾಗೂ ನಂತರದ ಪ್ರತಿ ಕಿ.ಮೀ.ಗೆ 9 ರೂಪಾಯಿ ನಿಗದಿಗೊಳಿಸಲಾಗಿದೆ. ಆಟೊ ಮೀಟರ್ ರೀಡಿಂಗ್ 2.50 (ಕಿ.ಮೀ.) ತೋರಿಸಿದರೆ 24.50 ರೂಪಾಯಿ; 3ಕ್ಕೆ  29 ರೂಪಾಯಿ; 3.50ಕ್ಕೆ 33.50 ರೂಪಾಯಿ; 4ಕ್ಕೆ 38 ರೂಪಾಯಿ; 4.50ಕ್ಕೆ 42.50 ರೂಪಾಯಿ; 5ಕ್ಕೆ 47 ರೂಪಾಯಿ ಆಗಲಿದೆ.

ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆ ಯವರೆಗೆ ಹಾಗೂ ಪಾಲಿಕೆ ವ್ಯಾಪ್ತಿ ಯಿಂದ ಹೊರಗಿನ ಪ್ರದೇಶಗಳಿಗೆ ಮೀಟರ್ ತೋರಿಸುವ ಒಂದೂವರೆ ಪಟ್ಟು ಹೆಚ್ಚಿನ ಹಣವನ್ನು ಮಾತ್ರ ಪ್ರಯಾಣಿಕರು ನೀಡಬೇಕು. ಆಟೊ ಚಾಲಕರು ಮೊದಲ 5 ನಿಮಿಷ ಕಾಯುವುದಕ್ಕೆ ಶುಲ್ಕವಿಲ್ಲ. ಅದರ ಬಳಿಕ ಪ್ರತಿ 15 ನಿಮಿಷಕ್ಕೆ 2.50 ರೂಪಾಯಿ ನಿಗದಿಗೊಳಿಸಲಾಗಿದೆ.

20 ಕೆ.ಜಿ.ಗಿಂತ ಹೆಚ್ಚಿನ ಸರಕು ಇದ್ದರೆ, ಪ್ರತಿ 20ಕೆ.ಜಿ.ಗೆ 2 ರೂಪಾಯಿ ಹೆಚ್ಚುವರಿ ಹಣವನ್ನು ನೀಡಬೇಕು' ಎಂದು ಹೇಮಾದ್ರಿ ತಿಳಿಸಿದ್ದಾರೆ.

`ಪ್ರಯಾಣಿಕರು ಆಟೊ ಹತ್ತುವಾಗ ಮೀಟರ್ ಆರಂಭಿಸಿದ್ದಾರೆಯೇ ಎಂಬು ದನ್ನು ಪರಿಶೀಲಿಸಿಕೊಳ್ಳಬೇಕು. ಮೀಟರ್ ಹಾಕಲು ನಿರಾಕರಿಸುವ ಆಟೊ ಚಾಲಕರ ಬಗ್ಗೆ ಆಟೊ ನಂಬರ್ ಸಮೇತ ಆರ್‌ಟಿಒ ಕಚೇರಿಗೆ ದೂರವಾಣಿ (0831- 2465503) ಅಥವಾ ಪತ್ರದ ಮೂಲಕ ದೂರು ನೀಡಿದರೆ, ಕ್ರಮ ಕೈಗೊಳ್ಳಲಾಗುವುದು' ಎಂದು ಹೇಮಾದ್ರಿ ತಿಳಿಸಿದ್ದಾರೆ.

ಎಲ್‌ಐಸಿ ಕಟ್ಟಡ ಉದ್ಘಾಟನೆ ಇಂದು
ಬೆಳಗಾವಿ: ಇಲ್ಲಿನ ಗೋವಾವೇಸ್‌ನ ಬಸವೇಶ್ವರ ವೃತ್ತದಲ್ಲಿ ನಿರ್ಮಾಣ ಗೊಂಡಿರುವ ಭಾರತೀಯ ಜೀವ ವಿಮಾ ನಿಗಮದ ವಿಭಾಗೀಯ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಜು. 15 ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

ಮುಂಬೈನ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಸುಶೋಭನ್ ಸರ್ಕೇರ್ ಉದ್ಘಾಟಿಸುವರು. ದಕ್ಷಿಣ ಮಧ್ಯ ವಲಯದ ಪ್ರಬಂಧಕ ಎ.ಕೆ. ಶಾಹು, ಸಿ. ಹರಿಹರನ್, ಕರುಣಾ ಕಾಂತೋದಾಸ ಹಾಗೂ ವಲಯ ಕಚೇರಿಯ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT