ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಕುಮಟಾ ಉತ್ಸವ

Last Updated 14 ಏಪ್ರಿಲ್ 2011, 6:35 IST
ಅಕ್ಷರ ಗಾತ್ರ

 ಕುಮಟಾ:  ಗುರುವಾರ ಇಲ್ಲಿ ನಡೆಯುವ ‘ಕುಮಟಾ ಉತ್ಸವ’ ಅಂಗವಾಗಿ ಜಿಲ್ಲೆಯ ಅಭಿವೃದ್ಧಿ ಸಮಗ್ರ ಚಿಂತನೆ, ಕನಸುಗಳು, ರಾಜಕೀಯ ಹಾಗೂ ಸಾಮಾಜಿಕ ರಂಗ ಕುರಿತು  ಮಧ್ಯಾಹ್ನ 3 ಗಂಟೆಗೆ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯುವ ಚಿಂತನ ಗೋಷ್ಠಿಯನ್ನು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಉದ್ಘಾಟಿಸಲಿದ್ದಾರೆ. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜ್ಯ ಯೋಜನಾ ಆಯೋಗ ಸದಸ್ಯ  ಪ್ರೊ. ಜಿ.ವಿ. ಜೋಶಿ ಆಶಯ ಭಾಷಣ ಮಾಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಜಿ.ಪಂ. ಮಾಜಿ ಅಧ್ಯಕ್ಷ ರಮಾನಂದ ನಾಯಕ, ವಕೀಲರಾದ ರವಿ ಹೆಗಡೆ ಹೂವಿನಮನೆ,  ಕೆ.ಆರ್. ದೇಸಾಯಿ ಆಗಮಿಸಲಿದ್ದಾರೆ.ಏ. 15ರಂದು ಮಧ್ಯಾಹ್ನ 3 ಗಂಟೆಗೆ ‘ಶಿಕ್ಷಣ ಮತ್ತು ವೈಜ್ಞಾನಿಕ ಪ್ರಗತಿ’ ಕುರಿತ ಗೋಷ್ಠಿಯನ್ನು ಶಿರಸಿ ಮಾಡರ್ನ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ವಿ.ಎಸ್. ಸೋಂದೆ ಉದ್ಘಾಟಿಸುವರು. ವಕೀಲ ಎಸ್. ಪಿ. ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.

 ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ಯೋಜನಾ ಆಯೋಗದ ಸದಸ್ಯ ಪ್ರೊ. ಜಿ.ವಿ. ಜೋಶಿ,  ಕೆನರಾ ಕಾಲೇಜು ಸೊಸೈಟಿ ಕಾರ್ಯದರ್ಶಿ ಯಶವಂತ ವಿ. ಶಾನಭಾಗ, ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ. ವಿ.ಡಿ. ಕೆರೂರು, ಉದ್ಯಮಿ ಶಶಿಭೂಷಣ ಹೆಗಡೆ, ಪತ್ರಕರ್ತ ಜಿ.ಯು. ಭಟ್ಟ  ಪಾಲ್ಗೊಳ್ಳಲಿದ್ದಾರೆ. ಏ. 16 ರಂದು ಮಧ್ಯಾಹ್ನ 3 ಗಂಟೆಗೆ  ನಡೆಯುವ ‘ ಉದ್ದಿಮೆ ಹಾಗೂ ಪ್ರವಾಸೋದ್ಯಮ’ ಗೋಷ್ಠಿಯನ್ನು ಉದ್ಯಮಿ ರಘುಚೈತನ್ಯ ಯಶೋಧರ ನಾಯ್ಕ ಉದ್ಘಾಟಿಸಲಿದ್ದಾರೆ. ಯಲ್ಲಾಪುರ ‘ ಸಂಕಲ್ಪ’ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಧ್ಯಾಪಕ ಡಾ. ಶ್ರೀಧರ ಬಳಗಾರ, ಉದ್ಯಮಿ ಎಂ.ಆರ್. ಶೆಟ್ಟಿ, ರೋಟರಿ ಅಧ್ಯಕ್ಷ ಸೂರಜ್ ನಾಯ್ಕ ಹಾಗೂ ಬೆಂಗಳೂರಿನ ಸಮೀರ್ ಮತ್ತು ವಿಜಯ ಮೋಹನ ಪಾಲ್ಗೊಳ್ಳಲಿದ್ದಾರೆ. ಏ. 17 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ‘ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ’ ಗೋಷ್ಠಿಯನ್ನು ಮೀನುಗಾರ ಸಮಾಜದ ಮುಖಂಡ ಪಿ.ಎಂ. ತಾಂಡೇಲ ಉದ್ಘಾಟಿಸಲಿದ್ದಾರೆ. ‘ಕರಾವಳಿ ಮುಂಜಾವು’ ಪತ್ರಿಕೆ ಸಂಪಾದಕ ಗಂಗಾಧರ ಹಿರೇಗುತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ತಜ್ಞ ಸಿವಾನಂದ ಕಳವೆ, ಪ್ರಗತಿಪರ ಕೃಷಿಕ ಪೂರ್ಣಾನಂದ ಭಟ್ಟ, ಜಿಲ್ಲಾ ನಾಡದೋಣಿ-ಸಾಂಪ್ರದಾಯಿಕ ಮೀನುಗಾರಿಕೆ ಸಂಘದ ಅಧ್ಯಕ್ಷ ಸದಾನಂದ ಹರಿಕಂತ್ರ, ಮೀನುಗಾರ ಮುಖಂಡ ಜೈವಿಠ್ಠಲ ಕುಬಾಲ ಪಾಲ್ಗೊಳ್ಳಲಿದ್ದಾರೆ.ಏ. 18ರಂದು ಬೆಳಿಗ್ಗೆ 10 ಗಂಟೆಗೆ ಹಳಿಯಾಳದ ದೇಶಪಾಂಡೆ ರುಡ್‌ಸೆಟ್ ಸಹಯೋಗದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ‘ಉದ್ಯಮಶೀಲತಾ ಅರಿವು ಕಾರ್ಯಕ್ರಮ’ ಗೋಷ್ಠಿಯನ್ನು ಉದ್ಯಮಿ ಪ್ರದೀಪ ಪೈ ಉದ್ಘಾಟಿಸುವರು. ಕೆನರಾ ಕಾಲೇಜು ಸೊಸೈಟಿ ಅಧ್ಯಕ್ಷ ಎನ್.ಬಿ. ಶಾನಭಾಗ ಅಧ್ಯಕ್ಷತೆ ವಹಿಸಲಿದ್ದಾರೆ.

ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಆರ್. ನಾರಾಯಣ ರಾವ್ ಸಮಾರೋಪ ಭಾಷಣ ಮಾಡಲಿದ್ದಾರೆ. ಜಿ.ಪಂ. ಮಾಜಿ ಅಧ್ಯಕ್ಷ ಎಲ್.ವಿ. ಶಾನಭಾಗ, ಮಾಜಿ ಎಂ. ಎಲ್.ಸಿ.  ಆರ್.ಎಸ್. ಭಾಗ್ವತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ ಹಾಗೂ ಚಿಂತಕ ಪುಟ್ಟು ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT