ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಕುಮಾರ ಶ್ರೀಗಳ 144ನೇ ಜಯಂತ್ಯತ್ಸುವ

Last Updated 7 ಸೆಪ್ಟೆಂಬರ್ 2011, 9:45 IST
ಅಕ್ಷರ ಗಾತ್ರ

ಹಾವೇರಿ: ಹಾನಗಲ್ಲ ಕುಮಾರ ಶಿವ ಯೋಗಿಗಳ 144ನೇ ಜಯಂತ್ಯತ್ಸುವ ಸಮಾರಂಭವನ್ನು ಪ್ರಸಕ್ತ  ವರ್ಷ ಬ್ಯಾಡಗಿ ಪಟ್ಟಣದಲ್ಲಿ ಸೆ.7 ರಿಂದ 26ರ ವರೆಗೆ ಜರುಗಲಿದೆ ಎಂದು ಕುಮಾರೇಶ್ವರ ಜಯಂತಿ ಮಹೋತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ಹುಕ್ಕೇರಿಮಠದ ಸದಾಶಿವ ಶ್ರೀಗಳು ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಜಯಂತ್ಯುತ್ಸವದಂಗವಾಗಿ ದಿಂಗಾ ಲೇಶ್ವರ ಶ್ರೀಗಳಿಂದ ಪ್ರತಿನಿತ್ಯ ಸಂಜೆ 6 ರಿಂದ 7ರವರೆಗೆ ಸಮಾಜ ಹಾಗೂ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ದರ್ಶನ ವಿಷಯ ಕುರಿತು ಪ್ರವಚನ ನಡೆಯಲಿದೆ ಎಂದ ಅವರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಸಮಾರಂಭದ ಸಾನಿಧ್ಯವನ್ನು ಪಂಚಮಸಾಲಿಮಠದ ಜಗದ್ಗುರು ಸಿದ್ಧಲಿಂಗ ಶ್ರೀಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಸುರೇಶ ಗೌಡ್ರ ಪಾಟೀಲ, ಸಂಸದ ಶಿವಕುಮಾರ ಉದಾಸಿ, ಪುರಸಭೆ ಅಧ್ಯಕ್ಷೆ ಪಾರ್ವತೆವ್ವ ಕೊಪ್ಪದ, ಎಫ್.ಎಲ್.ದೊಡ್ಡಗೌಡ್ರ, ಶಂಭಣ್ಣ ಶಿರೂರು ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಸೆ.8 ರಿಂದ 25ರವರೆಗೆ ಪ್ರತಿನಿತ್ಯ ಬೆಳಗ್ಗೆ 6ರಿಂದ 7ರವರೆಗೆ ಬ್ಯಾಡಗಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪಾದಯಾತ್ರೆ ನಡೆಸುವ ಮೂಲಕ ಜನ ಜಾಗೃತಿ ನಡೆಸಲಾಗುವುದು. ಬೆಳಗ್ಗೆ 9ರಿಂದ ಸಂಜೆವರೆಗೆ ಪ್ರತಿನಿತ್ಯ ಒಂದೊಂದು ಗ್ರಾಮವನ್ನು ಆಯ್ದುಕೊಂಡು ಅಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.

ಪಾದಯಾತ್ರೆಯ ಸಂದರ್ಭದಲ್ಲಿ ನಾಡಿನ ಧರ್ಮ, ಸಂಸ್ಕೃತಿ ಹಾಗೂ ಸಾಹಿತ್ಯಿ ಪ್ರಚಾರ ಮಾಡಲಾಗು ವುದು. ಅಲ್ಲದೇ ಜನರಲ್ಲಿ ಸಂಸ್ಕಾರದ ಬೀಜ ವನ್ನು ಬಿತ್ತುವುದು ಪಾದಯಾತ್ರೆಯ ಪ್ರಮುಖ ಉದ್ದೇಶ ಎಂದರು. ಪಾದ ಯಾತ್ರೆಯ ವೇಳೆ ಜೋಳಿಗೆಯೊಂದನ್ನು ಕೊಂಡೊಯ್ಯ ಲಾಗುತ್ತಿದ್ದು, ತಾವು ಸಂಚರಿಸುವ ಪ್ರತಿ ಗ್ರಾಮದ ನಾಗರಿಕರೊಂದಿಗೆ ಚರ್ಚಿಸಿ ನಾಗರಿಕ ರೊಂದಿಗೆ ಗ್ರಾಮಸ್ಥರಲ್ಲಿರುವ  ದುಶ್ಚಟಗಳನ್ನು ತಮಗೆ ಬಿಕ್ಷೆ ಮಾಡುವಂತೆ ವಿನಂತಿಸಿಕೊಳ್ಳಲಾಗುವುದು.

ಅಲ್ಲದೆ ದುಶ್ಚಟ ತೊರೆಯು ವಂತೆ ಪ್ರಮಾಣ ಮಾಡಿಸಲಾಗುವುದು. ಅಲ್ಲದೆ ಅವರಿಗೆ ರುದ್ರಾಕ್ಷೆ ಧಾರಣೆ ಮಾಡಿ ಮನ ಪರಿ ವರ್ತನೆ ಮಾಡಲು ಪ್ರಾಮಾಣಿಕ ವಾಗಿ ಶ್ರಮಿಸಲಾಗುವುದು ಎಂದು ವಿವರಿಸಿದರು.

ಶಿವಯೋಗ ಮಂದಿರದಲ್ಲಿ ಅಧ್ಯಯನ ಮಾಡುತ್ತಿರುವ ಸಾಧಕರೇ ಸಮಿತಿಯಿಂದ ಈ ಜಯಂತ್ಯುತ್ಸವನ್ನು ಆಚರಿಸುತ್ತಿದ್ದಾರೆ. ಆ ಸಮಿತಿಗೆ ತಾವು ಈ ಬಾರಿ ಅಧ್ಯಕ್ಷರಾಗಿದ್ದವೆ ಎಂದ ಅವರು, ಮುಂಚೆ ಅಂದರೆ 140ನೇ ಜಯಂತ್ಯುತ್ಸವದವರೆಗೂ ಶಿವಯೋಗ ಮಂದಿರದಲ್ಲಿ ಆಚರಿಸಲಾಗುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದ ಶ್ರೀಗಳ ತತ್ವಗಳು ಪ್ರಚಾರವಾಗಲೆಂಬ ಉದ್ದೆೀಶ ದಿಂದ ಬೇರೆ ಬೇರೆ ತಾಲ್ಲೂಕುಗಳಲ್ಲಿ ಆಚರಿಸಲು ಉದ್ದೇಶಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಯಂತ್ಯು ತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಎಸ್. ಆರ್.ಪಾಟೀಲ, ಕಾರ್ಯದರ್ಶಿ ರಾಜು ಮೋರಗೇರಿ, ಎಂ.ಟಿ.ಹಾವೇರಿ, ಪಿ.ಡಿ.ಶಿರೂರು, ಜಗದೀಶ ರೋಣದ ಸೇರಿದಂತೆ ಮತ್ತಿತರರು ಉಪಸ್ಥಿತ ರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT