ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಜಲ-ವನ, ಸಂಪತ್ತು

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆ, ರಾಮನಗರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು ಹಾಗೂ ಕೂಟಗಲ್ ಗ್ರಾಮಸ್ಥರು ಜಂಟಿಯಾಗಿ ಶುಕ್ರವಾರದಿಂದ ಇದೇ 13ರವರೆಗೆ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ `ಜಲ-ವನ ನಮ್ಮ ಸಂಪತ್ತು~ ಆಯೋಜಿಸಿವೆ.

ಶಿಬಿರದ ಉದ್ಘಾಟನೆ ಶುಕ್ರವಾರ ಸಂಜೆ 4 ಗಂಟೆಗೆ ನಡೆಯಲಿದ್ದು, ಕೂಟಗಲ್ ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮ ಉದ್ಘಾಟಿಸುವರು. ಕಾಲೇಜಿನ ಪ್ರಾಚಾರ್ಯ ಸಿರಾಜ್ ಉರ್ ರೆಹಮಾನ್ ಅಧ್ಯಕ್ಷತೆವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಇದೇ 8ರಂದು ಕೂಟಗಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಿ.ದಿವ್ಯಾ ಅವರು `ಆರೋಗ್ಯ ಮತ್ತು ಶುಚಿತ್ವ~ ವಿಷಯ ಕುರಿತು ಉಪನ್ಯಾಸ ನೀಡುವರು. ಇದೇ 9ರಂದು ತೋಟಗಾರಿಕೆ ಅಧಿಕಾರಿ ರಾಮಚಂದ್ರಯ್ಯ ಅವರು `ಪುಷ್ಪೋದ್ಯಮ ಮತ್ತು ವೈಜ್ಞಾನಿಕ ಬೇಸಾಯ~ ಕುರಿತು, ಇದೇ 10ರಂದು ಕೃಷಿ ಅಧಿಕಾರಿ ವೀರೇಗೌಡ ಅವರು `ಸಾವಯವ ಕೃಷಿ ಬೇಸಾಯ~ ಕುರಿತು ಉಪನ್ಯಾಸ ನೀಡುವರು.

ಇದೇ 11ರಂದು ವಕೀಲ ನಾಗರಾಜ್ ಅವರು `ಕಾನೂನು ಅರಿವು~ ವಿಷಯ ಕುರಿತು, ಇದೇ 12ರಂದು ಕೂಟಗಲ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಜಿ.ನಾಗರಾಜ್ ಅವರು `ಗ್ರಾಮ ನೈರ್ಮಲೀಕರಣ~ ಕುರಿತು ಉಪನ್ಯಾಸ ಮಾಡುವರು. ಇದೇ 13ರಂದು ಬೆಳಿಗ್ಗೆ 11 ಗಂಟೆಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ಗ್ರಾ. ಪಂ ಉಪಾಧ್ಯಕ್ಷ ವೈ.ಜೆ.ರಮೇಶ್ ಅವರು ಅಧ್ಯಕ್ಷತೆವಹಿಸುವರು. ಕ್ಷೇತ್ರದ ಜಿ.ಪಂ ಸದಸ್ಯೆ ಮಂಜುಳಾ ಮರಿದೇವರು, ತಾ.ಪಂ ಸದಸ್ಯೆ ಭಾನುಮತಿ ಬೋರೇಗೌಡ ಮೊದಲಾದವರು ಪಾಲ್ಗೊಳ್ಳುವರು.

ಶಿಬಿರದ ಕಾರ್ಯಯೋಜನೆ: ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಇಂಗುಗುಂಡಿ ನಿರ್ಮಾಣ, ಕೆರೆಯಲ್ಲಿ ಹೂಳೆತ್ತುವುದು, ಪರಿಸರ ಸಂರಕ್ಷಣೆ, ಮೂಢನಂಬಿಕೆಗಳ ಬಗ್ಗೆ ಜಾಗೃತಿ, ಸಾವಯವ ಗೊಬ್ಬರ ತಯಾರಿಕೆ, ಕಾನೂನು ಅರಿವು, ಜೋತಿಷ್ಯ ಮತ್ತು ವಿಜ್ಞಾನ ಹಾಗೂ ಜಾನಪದ ಮತ್ತು ಅದರ ಅನನ್ಯತೆ ಕುರಿತು ತಿಳಿಸಿಕೊಡಲಾಗುವುದು ಎಂದು ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT