ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಯೂರೊ ಫುಟ್‌ಬಾಲ್ : ಪೋಲೆಂಡ್, ಗ್ರೀಸ್ ಹಣಾಹಣಿ

Last Updated 7 ಜೂನ್ 2012, 19:30 IST
ಅಕ್ಷರ ಗಾತ್ರ

ವಾರ್ಸಾವ್ (ಐಎಎನ್‌ಎಸ್):  ಪೋಲೆಂಡ್‌ನ ಮಹಾನಗರಿ ವಾರ್ಸಾದಲ್ಲಿ ಸುಮಾರು ಒಂದು ತಿಂಗಳ ಕಾಲ ಯೂರೊ-2012 ಫುಟ್‌ಬಾಲ್ ಚಾಂಪಿಯನ್‌ಷಿಪ್ ರೋಮಾಂಚನ.

ಶುಕ್ರವಾರ ಆತಿಥೇಯ ಪೋಲೆಂಡ್ ಹಾಗೂ 2004ರ ಚಾಂಪಿಯನ್ ಗ್ರೀಸ್ ನಡುವೆ ಮೊದಲ ಹಣಾಹಣಿ. ಹದಿನಾರು ತಂಡಗಳು   ಪೈಪೋಟಿ ನಡೆಸಲಿರುವ ಈ ಟೂರ್ನಿ ಫುಟ್‌ಬಾಲ್ ಪ್ರೇಮಿಗಳ ಆಸಕ್ತಿ ಕೆರಳಿಸಿದೆ.

ಮೊದಲ ಪಂದ್ಯ ಪೋಲೆಂಡ್ ಹಾಗೂ ಗ್ರೀಸ್ ಹೋರಾಟ ನಡೆಸುತ್ತಿದ್ದರೂ, ಭಾರಿ ಕುತೂಹಲ ಕೆರಳಿಸಿರುವುದು ಭಾನುವಾರದ ಪಂದ್ಯ. ಮೂರು ಬಾರಿ ಚಾಂಪಿಯನ್ ಆಗಿರುವ ಜರ್ಮನಿಗೆ 2004ರ ರನ್ನರ್ ಅಪ್ ಪೋರ್ಚುಗಲ್ ಪ್ರಬಲ ಎದುರಾಳಿಯಾಗಿ ನಿಲ್ಲುತ್ತದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ಜರ್ಮನಿ ತಂಡವು `ಬಿ~ ಗುಂಪಿನಲ್ಲಿದೆ. ಈ ಗುಂಪಿನಲ್ಲಿಯೇ ಪ್ರಬಲ ತಂಡಗಳಾದ ಡೆನ್ಮಾರ್ಕ್, ಹಾಲೆಂಡ್ ಹಾಗೂ ಪೋರ್ಚುಗಲ್ ಇರುವುದು. `ಎ~ ಗುಂಪಿನಲ್ಲಿ ಜೆಕ್ ಗಣರಾಜ್ಯ, ಗ್ರೀಸ್, ಪೋಲೆಂಡ್ ಹಾಗೂ ರಷ್ಯಾ ನಡುವೆ ಹೋರಾಟ.

`ಸಿ~ ಗುಂಪಿನಲ್ಲಿ ಕ್ರೊಯೇಷಿಯಾ, ಇಟಲಿ, ರಿಪಬ್ಲಿಕ್ ಆಫ್ ಐರ್ಲೆಂಡ್ ಹಾಗೂ ಸ್ಪೇನ್ ಇದ್ದರೆ, `ಡಿ~ ಗುಂಪಿನಲ್ಲಿ ಇಂಗ್ಲೆಂಡ್, ಫ್ರಾನ್ಸ್, ಸ್ವೀಡನ್ ಮತ್ತು ಉಕ್ರೇನ್ ಆಡಲಿವೆ. ಇಂಗ್ಲೆಂಡ್ ಹಾಗೂ ಫ್ರಾನ್ಸ್ ಅನ್ನು `ಡಿ~ ಗುಂಪಿನಲ್ಲಿ ಬಲಾಢ್ಯ ತಂಡಗಳೆಂದು ಪರಿಗಣಿಸಲಾಗಿದೆ.

ಯೂರೊಪ್ ಹಾಗೂ ವಿಶ್ವ ಚಾಂಪಿಯನ್ ಸ್ಪೇನ್ ತಂಡವು `ಸಿ~ ಗುಂಪಿನಲ್ಲಿ ಎತ್ತರದಲ್ಲಿ ನಿಲ್ಲುತ್ತದೆಂದು ಖಂಡಿತ ನಿರೀಕ್ಷಿಸಬಹುದು. ಇಟಲಿ ಕೂಡ ಉತ್ತಮ ಆಟವನ್ನು ಆಡುತ್ತಿರುವ ಫುಟ್‌ಬಾಲ್ ಪಡೆ. ಆದ್ದರಿಂದ ಅದನ್ನು ಕೂಡ ಲಘುವಾಗಿ ಪರಿಗಣಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT