ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ರಾಷ್ಟ್ರೀಯ ಕರಕುಶಲ ಸಂತೆ

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ನಗರದ ಶ್ರೀನಿಧಿ ಪ್ರತಿಷ್ಠಾನದ ಆಶ್ರಯದಲ್ಲಿ ಇಂದಿನಿಂದ (ಡಿ.14ರಿಂದ ಡಿ.30) ರಾಷ್ಟ್ರೀಯ ಕರಕುಶಲ ಸಂತೆ ನಡೆಯಲಿದೆ.
ಬಿಟಿಎಂ ಬಡಾವಣೆಯ ಅದ್ವೈತ ಪೆಟ್ರೋಲ್ ಬಂಕ್ ಬಳಿಯಿರುವ ಅಖೂಬ್ ನಗರ ವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ನಡೆಯುವ ಈ ಸಂತೆಯಲ್ಲಿ ಕಾಶ್ಮೀರ, ಅಸ್ಸಾಂ, ಒಡಿಶಾದ ಸಾಂಪ್ರದಾಯಿಕ ಸೀರೆಗಳು ಹಾಗೂ ಡ್ರೆಸ್ ಮೆಟೀರಿಯಲ್‌ಗಳು, ಕೈಮಗ್ಗದ ಬಟ್ಟೆಗಳು, ದುಪಟ್ಟಾ ಮತ್ತು ಶಾಲುಗಳು, ಆಭರಣಗಳು, ರಾಜಸ್ತಾನದ ಗೊಂಬೆಗಳು, ತಂಜಾವೂರು ಶೈಲಿಯ ತೈಲವರ್ಣಗಳು, ಮರದ ಕೆತ್ತನೆಯ ಪರಿಕರಗಳು, ಹಿತ್ತಾಳೆ ವಿಗ್ರಹಗಳು ಹಾಗೂ ಗೃಹೋಪಯೋಗಿ ವಸ್ತುಗಳು ಲಭ್ಯವಿರುತ್ತವೆ.
ಬರಿಯ ಪ್ರದರ್ಶನ ಮತ್ತು ಮಾರಾಟಕ್ಕಷ್ಟೇ ಈ ಸಂತೆ ಸೀಮಿತವಾಗಿರುವುದಿಲ್ಲ. ಪ್ರತಿದಿನ ಸಂಜೆ 6ರಿಂದ ಮನರಂಜನಾ ಕಾರ್ಯಕ್ರಮಗಳು ಗ್ರಾಹಕರಿಗೆ ವಿಶೇಷ ಆಕರ್ಷಣೆಯಾಗಲಿದೆ.

ಡಿ.14 ರ ಶುಕ್ರವಾರ ಸೇಂಟ್ ಗ್ಲೋರೀಸ್ ಶಾಲೆಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ, 15ರಂದು ಸುಂದರೇಶನ್ ಅವರಿಂದ ಮಹಮ್ಮದ್ ರಫಿ ಹಾಡುಗಳ ಗಾಯನ, 16ರಂದು ಸ್ವರನಾದ ಲಯ ತಂಡದಿಂದ ಲಯವಾದ್ಯ ಕಛೇರಿ, 17ರಂದು ವಿನೋದ್ ಮತ್ತು ತಂಡದಿಂದ ಕರೋಕೆ ಗಾಯನ, 19ರಂದು ಎಇಎಲ್ ಕೋಣನಕುಂಟೆ ಕೇಂದ್ರದ ಕುಮಾರ್ ಅವರಿಂದ ಜಾನಪದ ಗೀತೆ, 20ರಂದು ವಿವಿಧ ಮನರಂಜನೆ, 21ರಂದು ಲಲಿತಾ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತ,

22ರಂದು ಪ್ರದೀಪ್-ಪ್ರವೀಣ್ ಸಹೋದರರಿಂದ ಸುಗಮ ಸಂಗೀತ, 23ರಂದು ಡಾ.ಕುಲಕರ್ಣಿ ಮತ್ತು ಮೇಘನಾ ಅವರಿಂದ ಚಿತ್ರಗೀತೆಗಳು, 24ರಂದು ಮಧು ಮತ್ತು ತಂಡದಿಂದ ಬೆಂಕಿ ನೃತ್ಯ, 25ರಂದು ಗಾಯನ, ನೃತ್ಯ, 26ರಂದು ಸ್ತ್ರೀ ನಾಟ್ಯಂ ತಂಡದಿಂದ ಭರತನಾಟ್ಯ, 27ರಿಂದ ಬಾಬಿ ಮತ್ತು ತಂಡದವರ ಗಾಯನ, 28ರಂದು ಸಾಂಸ್ಕೃತಿಕ ರಸಸಂಜೆ, 29ರಂದು ಹಿಂದಿ ಚಿತ್ರಗೀತೆಗಳು, 30ರಂದು ಚಿತ್ರಗೀತೆಗಳ ಗಾಯನವಿರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT