ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ವೈವಿಧ್ಯಮಯ ಕಲೋತ್ಸವ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಷ್ಟ್ರೀಯ, ಅಂತರರಾಷ್ಟ್ರೀಯ ಖ್ಯಾತಿಯ
ಹಿರಿಯ-ಕಿರಿಯ ಕಲಾವಿದರ ಕಲಾ
ಪ್ರದರ್ಶನವನ್ನು ವೀಕ್ಷಿಸುವ ಅವಕಾಶವೊಂದು ನಗರದ ಕಲಾಭಿಮಾನಿಗಳಿಗೆ ಲಭಿಸಿದೆ. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಎನ್‌ಜಿಎಂಎ) ಹಮ್ಮಿಕೊಂಡಿರುವ ‘ಬೆಂಗಳೂರು ಅಂತರರಾಷ್ಟ್ರೀಯ ಕಲಾ ಉತ್ಸವ 2013’ ಇಂದಿನಿಂದ ಆರಂಭವಾಗಲಿದೆ. ಉತ್ಸವದ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99803 27800/ aim.biaf@gmail.com

ಕಾರ್ಯಕ್ರಮಗಳ ವಿವರ
ಸೆ. 20, ಸಂಜೆ 5.30: ಪ್ರೀತಿ ಸುಂದರರಾಜನ್
(ತ್ರಿ ಲೈನ್ಸ್- ಸಮಕಾಲೀನ ನೃತ್ಯ), ಪಂಡಿತ್ ಗೋಪಾಲ್ ಪ್ರಸಾದ್ ದುಬೆ (ಸರೈಕೆಲ ಚೌ ಎಂಬ ಜಾರ್ಖಂಡ್‌ನ ಸಾಂಪ್ರದಾಯಿಕ ನೃತ್ಯ); ತಿಲಕ್ ಫರ್ನಾಂಡೊ ಮತ್ತು ತಂಡ (ಶ್ರೀಲಂಕಾದ ಜನಪದ ನೃತ್ಯ). ಸ್ಥಳ: ಎನ್‌ಜಿಎಂಎ ಸಭಾಂಗಣ, ಮಾಣಿಕ್ಯವೇಲು ಮ್ಯಾನ್ಷನ್, 49, ಅರಮನೆ ರಸ್ತೆ. ಸಂಪರ್ಕಕ್ಕೆ: 2234 2338.

ಸೆ. 22, ಸಂಜೆ 6.30: ತಿಲಕ್ ಫರ್ನಾಂಡೊ ಮತ್ತು ತಂಡ (ಶ್ರೀಲಂಕಾದ ಜನಪದ ನೃತ್ಯ) ಹಾಗೂ  ಕರ್ನಾಟಕದ ಜನಪದ ಹಾಡುಗಳ ಗಾಯನ ಮತ್ತು ನೃತ್ಯ. ಸ್ಥಳ: ಫ್ರೀಡಂ ಪಾರ್ಕ್, ಮಹಾರಾಣಿ ಕಾಲೇಜು ಮುಂಭಾಗ, ಶೇಷಾದ್ರಿ ರಸ್ತೆ. ಸಂಪರ್ಕಕ್ಕೆ: 2272 7008.

ಸೆ.27, ಸಂಜೆ 6: ಲಂಡನ್‌ನ ರಾನಿ-ಮಿಥುಲ್ ಮತ್ತು ತಂಡದಿಂದ ಕಥಕ್, ಬಿ ಬಾಯಿಂಗ್ ಫ್ಯೂಷನ್ ನೃತ್ಯ, ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಇಂಪಲ್ಸ್ ತಂಡದಿಂದ ‘ಟಿಯರ್ ಡ್ರಾಪ್ಸ್ ಆನ್ ಡಸ್ಟ್’ ಸಮಕಾಲೀನ ನೃತ್ಯ ಪ್ರದರ್ಶನ. ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. (2226 7421).

6.30ಕ್ಕೆ ಮೈಸೂರು ಎಂ. ನಾಗರಾಜ್ ಮತ್ತು ಡಾ.ಮಂಜುನಾಥ್ ಅವರಿಂದ ವಯಲಿನ್ ದ್ವಂದ್ವ ವಾದನ. ಸ್ಥಳ: ಕ್ರೌನ್ ಪ್ಲಾಜಾ ಹೋಟೆಲ್‌ನ ಹುಲ್ಲುಹಾಸು, ನಂ. 43, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ.

ಸೆ.28, ಸಂಜೆ 6.30: ಡಾ.ಸಿ. ಎನ್. ಅಶ್ವತ್ಥನಾರಾಯಣ ಪ್ರತಿಷ್ಠಾನದಿಂದ ಮಲ್ಲೇಶ್ವರ ಯುವ ಉತ್ಸವದಲ್ಲಿ ದೃಷ್ಟಿ ಡಾನ್ಸ್ ತಂಡದಿಂದ ನೃತ್ಯ, ಪ್ರವೀಣ್ ಡಿ. ರಾವ್ ತಂಡದಿಂದ ಸಿನಿಮಾ ನೃತ್ಯ-  ಯುವಾಗ್ನಿ. ಸ್ಥಳ: ಮಲ್ಲೇಶ್ವರ ಮೈದಾನ, ಮಲ್ಲೇಶ್ವರ ವೃತ್ತ.

ಸೆ.29, ಬೆಳಿಗ್ಗೆ 10: ಗೋ ಗ್ರೀನ್ ಬೆಂಗಳೂರು ತಂಡದಿಂದ ಗಿಡ ನೆಡುವ ಕಾರ್ಯಕ್ರಮ. ಸ್ಥಳ: ನೆಲಮಂಗಲದ ಸುಕೃಷಿ ಸಾವಯವ ತೋಟ, ಮರಸರಹಳ್ಳಿ, ನೆಲಮಂಗಲ.

ಅ.2, ಬೆಳಿಗ್ಗೆ 10ಕ್ಕೆ: ನವದೆಹಲಿಯ ವೀಣಾ ಪ್ರತಿಷ್ಠಾನದಿಂದ ವೀಣಾ ಉತ್ಸವ, ಗೀತಾ ರಮಾನಂದ್ ಮತ್ತು ರೇವತಿ ಮೂರ್ತಿ ಅವರಿಂದ ವೀಣಾ ದ್ವಂದ್ವ ವಾದನ, ಶಾಂತಿ ರಾವ್

ಮತ್ತು ತಂಡ ಹಾಗೂ ಯೋಗಾವಂದನ ಮತ್ತು ತಂಡ. ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯ ರಸ್ತೆ, ಬಸವನಗುಡಿ.

ಅ.4, ಸಂಜೆ 6.30: ‘ಸಮನ್ವಯ’ದ ವೀಣಾ ಮೂತಿ ವಿಜಯ್, ಶಮಾ ಕೃಷ್ಣ, ಅನುರಾಧಾ ವಿಕ್ರಾಂತ್, ಸೂರ್ಯ ಎನ್. ರಾವ್ ಮತ್ತು ತಂಡದಿಂದ ‘ಗಂಗಾ ಗೌರಿ ವಿಲಾಸಂ’ ನೃತ್ಯ ರೂಪಕ; ದಿ ಧನಂಜಯನ್ಸ್ ಮತ್ತು ಹಿರಿಯ ಕಲಾವಿದರಿಂದ ಭಾವ-ತರಂಗಮ್ ಭರತನಾಟ್ಯ ಪ್ರಸ್ತುತಿ. ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. 2344 5810/
2344 3956.

ಸೆ.5, ಸಂಜೆ 6.30: ಮಾರಿಷಸ್ ಹೈಕಮಿಷನ್ ಸಹಯೋಗದಲ್ಲಿ ಮಾರಿಷಸ್ ನೃತ್ಯ ಕಲಾವಿದರ ತಂಡದಿಂದ ಸಾಂಸ್ಕೃತಿಕ ವೈವಿಧ್ಯ. 7.30ಕ್ಕೆ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾ ಕಲಾವಿದರಿಂದ
‘ದಿ ಇಂಪಾರ್ಟೆನ್ಸ್ ಆಫ್ ಬೀಯಿಂಗ್ ದ್ರೌಪದಿ’ ನಾಟಕ ಪ್ರದರ್ಶನ. ರಚನೆ: ಕೃಷ್ಣನ್ ರಂಗರಾಜು, ನಿರ್ದೇಶನ: ಪ್ರಕಾಶ್ ಬೆಳವಾಡಿ. ಪಾಸ್‌ಗಳಿಗೆ: www.buzzintown.com/

www.bookmyshow.com

ಸ್ಥಳ: ಚೌಡಯ್ಯ ಸ್ಮಾರಕ ಭವನ.

ಸೆ.6, ಸಂಜೆ 6.30: ಡಾ.ಸುಮಾ ಸುಧೀಂದ್ರ ನೇತೃತ್ವದಲ್ಲಿ ನಾದ ತರಂಗಿಣಿ- 50 ವೀಣೆಗಳ ಝೇಂಕಾರ. ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT