ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಮ್ಮ ನಗರ ಜಿಪಂ ಅಧ್ಯಕ್ಷೆ

Last Updated 25 ಸೆಪ್ಟೆಂಬರ್ 2013, 19:48 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಅರಗದ್ದೆ ಕ್ಷೇತ್ರದ ಸದಸ್ಯೆ ಎನ್‌. ಇಂದಿರಮ್ಮ ಅವಿರೋಧವಾಗಿ
ಬುಧ­ವಾರ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾಗಿತ್ತು. ಬಿಜೆಪಿಯ ಎಂಟು ಸದಸ್ಯರ ಒಂದು ಗುಂಪು ಹಾಗೂ ಕಾಂಗ್ರೆಸ್‌ನ ನಡುವಿನ ಒಳ ಒಪ್ಪಂದದ ಪ್ರಕಾರ ವಾಣಿಶ್ರೀ ವಿಶ್ವನಾಥ್‌ ಅಧ್ಯಕ್ಷರಾಗಿ ಕಳೆದ ವರ್ಷ ಆಯ್ಕೆಯಾಗಿದ್ದರು. 20 ತಿಂಗಳ ಅಧಿಕಾರಾವಧಿಯಲ್ಲಿ ಮೊದಲ 10 ತಿಂಗಳು ಬಿಜೆಪಿ ಆಡಳಿತ ನಡೆಸಿ ಉಳಿದ ಅವಧಿಯನ್ನು ಕಾಂಗ್ರೆಸ್‌ಗೆ  ಬಿಟ್ಟು­ಕೊಡಬೇಕು ಎಂದು ಒಪ್ಪಂದ ಆಗಿತ್ತು. ಆ ಪ್ರಕಾರ ವಾಣಿಶ್ರೀ ಅವರು  11 ತಿಂಗಳ ಅಧಿಕಾರದ ಸವಿ ಅನುಭವಿಸಿ ಸೆಪ್ಟೆಂಬರ್ 3 ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬುಧವಾರ ನಿಗದಿ ಯಾಗಿತ್ತು. ವಿಭಾಗೀಯ ಆಯುಕ್ತ ಗೌರವ್ ಗುಪ್ತ ಚುನಾವಣಾ ಧಿಕಾರಿ ಯಾಗಿದ್ದರು.ಕಾಂಗ್ರೆಸ್‌ನಲ್ಲಿ ಮೂವರು ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಹೊಂದಿದ್ದರು. ಇವರಲ್ಲಿ ಇಂದಿರಮ್ಮ ಹಾಗೂ ನೆರಳೂರು ಜಿ.ಪಂ. ಕ್ಷೇತ್ರದ ಸದಸ್ಯೆ ಜೆ.ಶಾಂತಮ್ಮ ಅಧ್ಯಕ್ಷ ಸ್ಥಾನಕ್ಕೆ ಹುರಿಯಾಳು ಗಳಾಗಿದ್ದರು. ಮೊದಲ ನಾಲ್ಕು ತಿಂಗಳು ಇಂದಿರಮ್ಮ ಹಾಗೂ ಉಳಿದ ಅವಧಿಗೆ ಶಾಂತಮ್ಮ ಅಧ್ಯಕ್ಷರು ಎಂದು ಕಾಂಗ್ರೆಸ್‌ ಪಕ್ಷದ ಸದಸ್ಯರು ಚುನಾ ವಣೆಗೆ ಮುನ್ನ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದರು.

ಒಟ್ಟು 34 ಸದಸ್ಯ ಬಲದ ಜಿ.ಪಂ. ನಲ್ಲಿ ಬಿಜೆಪಿ 16, ಕಾಂಗ್ರೆಸ್‌ 14, ಹಾಗೂ ಜೆಡಿಎಸ್‌ ನಾಲ್ಕು ಸದಸ್ಯರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT