ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಎಎಪಿ ವಿಶ್ವಾಸಮತ ಯಾಚನೆ

Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿ ವಿಧಾನ­ಸಭೆಯ ಮೊದಲ ಅಧಿವೇಶನ ಬುಧ­ವಾರ ಆರಂಭವಾಯಿತು. ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಆಮ್‌ ಆದ್ಮಿ ಪಕ್ಷ (ಎಎಪಿ) ಗುರು­­ವಾರ ವಿಶ್ವಾಸಮತ ಯಾಚಿಸಲಿದೆ.

ಅಧಿವೇಶನದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮೊದಲು ಪ್ರಮಾಣ ವಚನ ಸ್ವೀಕರಿಸಿ­ದರು. ನಂತರ ಅವರ ಸಚಿವ ಸಂಪು­ಟದ ಸಹೋದ್ಯೋಗಿಗಳಾದ ಮನೀಶ್‌ ಸಿಸೊಡಿಯಾ ಸೇರಿದಂತೆ ಇತರರು ಪ್ರಮಾಣವಚನ ಸ್ವೀಕರಿಸಿದರು. ನೂತನ ಶಾಸಕರಿಗೆ ಹಂಗಾಮಿ ಸಭಾ­ಧ್ಯಕ್ಷ ಕಾಂಗ್ರೆಸ್‌ನ ಮತೀನ್‌ ಅಹ್ಮದ್‌ ಅವರು ಪ್ರಮಾಣ­ವಚನ ಬೋಧಿ­ಸಿ­ದರು. ವಿಧಾನಸಭೆ ಸಭಾಧ್ಯಕ್ಷ ಮತ್ತು ಉಪ ಸಭಾಧ್ಯಕ್ಷ ಸ್ಥಾನಕ್ಕೆ ಜನವರಿ 3ರಂದು ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT