ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಎಜುಕೇಷನ್ ಯುಕೆ ಪ್ರದರ್ಶನ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಂಗ್ಲೆಂಡ್‌ನ ಪದವಿ ಪೂರ್ವ, ಸ್ನಾತಕೋತ್ತರ, ಸಂಶೋಧನಾ ಪದವಿ ಹಾಗೂ ಅಲ್ಲಿನ ವಿದ್ಯಾರ್ಥಿ ಜೀವನದ ಬಗ್ಗೆ ಬೆಳಕು ಚೆಲ್ಲುವ ಮುಖ್ಯ ಉದ್ದೇಶದಿಂದ ಬ್ರಿಟೀಷ್ ಕೌನ್ಸಿಲ್  ಸೋಮವಾರ (ಫೆ. 6) ನಗರದ ಎಂ.ಜಿ. ರಸ್ತೆಯಲ್ಲಿರುವ ಹೋಟೆಲ್ ತಾಜ್‌ನ `ವಿವಾಂತ್~ನಲ್ಲಿ `ಎಜುಕೇಷನ್ ಯುಕೆ ಪ್ರದರ್ಶನ-2012~ ಹಮ್ಮಿಕೊಂಡಿದೆ.

ಮಧ್ಯಾಹ್ನ 1ರಿಂದ ಸಂಜೆ 7ರವರೆಗೆ ನಡೆಯುವ ಪ್ರದರ್ಶನದಲ್ಲಿ ಇಂಗ್ಲೆಂಡ್‌ನ 58 ವಿ.ವಿ.ಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿವೆ.  ಈ ವಿದ್ಯಾಸಂಸ್ಥೆಗಳ ಪರಿಣಿತರು ಬಯೋ ಟೆಕ್ನಾಲಜಿ, ಎಂಬಿಎ ಅಥವಾ ಎಂಎಸ್ಸಿ- ಯಾವುದು ಮಿಗಿಲು?, ಎಂಜಿನಿಯರಿಂಗ್ ಕೌಶಲ ಮತ್ತು ಜ್ಞಾನ ಕುರಿತು ಉಪನ್ಯಾಸ ನೀಡಲಿದ್ದಾರೆ. ಆಕಾಂಕ್ಷಿಗಳು ವಿದ್ಯಾರ್ಥಿ ವೇತನಗಳ ಬಗ್ಗೆಯೂ ತಿಳಿದುಕೊಳ್ಳಬಹುದು.

ಮಧ್ಯಾಹ್ನ 2ರಿಂದ 3 ಗಂಟೆವರೆಗೆ ವಿದ್ಯಾರ್ಥಿ ವೀಸಾ, ಮಧ್ಯಾಹ್ನ 3ರಿಂದ 4 ಗಂಟೆವರೆಗೆ ಎಂಬಿಎ ಅಥವಾ ಎಂಎಸ್ಸಿ ಯಾವುದು ಮಿಗಿಲು?, 4ರಿಂದ 5 ಗಂಟೆವರೆಗೆ ಬಯೋಟೆಕ್ನಾಲಜಿ, 5ರಿಂದ 6 ಗಂಟೆವರೆಗೆ `ಎಂಜಿನಿಯರಿಂಗ್: ಒಂದು ಕೌಶಲ ಹಾಗೂ ಜ್ಞಾನದಲ್ಲಿ ಅಪ್‌ಡೇಟ್~ಗಳ ಬಗ್ಗೆ ಸಂಕಿರಣಗಳು ನಡೆಯಲಿವೆ.

ಯುನಿವರ್ಸಿಟಿ ಆಫ್ ಆಬರ‌್ಟೇ ದುಂಡೀ, ಅಬೇರಿಸ್ಟೀತ್ ಯುನಿವರ್ಸಿಟಿ, ಆಂಗ್ಲಿಯ ರಸ್ಕಿನ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ದಿ ಆರ್ಟ್ಸ್ ಲಂಡನ್, ಆಸ್ಟನ್ ಯುನಿವರ್ಸಿಟಿ- ಬರ್ಮಿಂಗ್‌ಹ್ಯಾಮ್, ಬಂಗೋರ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ಬೆಡ್‌ಫೋರ್ಡ್‌ಶೈರ್, ಬಿರ್ಕ್‌ಬೆಕ್ ಯುನಿವರ್ಸಿಟಿ ಆಫ್ ಲಂಡನ್, ಮತ್ತಿತರ ವಿಶ್ವವಿದ್ಯಾಲಯಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.

ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ. ಸೀಮಿತ ಆಸನಗಳ ಸೌಲಭ್ಯವಿದೆ. ಮೊದಲು ಬಂದವರಿಗೆ ಆದ್ಯತೆ. ಆನ್‌ಲೈನ್ ನೋಂದಣಿಗೆ:  ಡಿಡಿಡಿ. ಛಿಛ್ಠ್ಚಠಿಜಿಟ್ಞ್ಠಜ್ಞಿ.ಟ್ಟಜ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT