ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ನಾಳೆ ಅಮ್ಮನ ದರ್ಶನ

Last Updated 23 ಫೆಬ್ರುವರಿ 2011, 11:25 IST
ಅಕ್ಷರ ಗಾತ್ರ

ಪ್ರೇಮ ಕರುಣೆ, ಅನುಕಂಪದ ಸಾಕಾರಮೂರ್ತಿಯಂತಿರುವ ಮಾತಾ ಅಮೃತಾನಂದಮಯಿ ದೇವಿ, ಭಕ್ತರಲ್ಲಿ ಪ್ರೀತಿಯ ‘ಅಮ್ಮ’ ಎಂದೇ ಪರಿಚಿತರು. ಮಾನವನ ಅಂತರಾಳದಲ್ಲಿ ಜಾಗೃತವಾಗಿರುವ ದೈವೀಗುಣಗಳನ್ನು ಅಮೃತಸ್ಪರ್ಶದಿಂದ ಜಾಗೃತಗೊಳಿಸಿ ಮಧುರ ಬಾಂಧವ್ಯದಿಂದ ಜಗತ್ತನ್ನೇ ಬೆಸೆಯಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರ ದಿವ್ಯ ದರ್ಶನ, ಸ್ಪರ್ಶದಿಂದ ದೇಹ, ಮನಸ್ಸು ಶಾಂತವಾಗಿ ಆಧ್ಯಾತ್ಮಿಕವಾಗಿ ಮುಂದುವರಿಯಲು ಸ್ಫೂರ್ತಿ ಸಿಗುತ್ತದೆ. 

 ಬ್ರಹ್ಮಸ್ಥಾನಂ ದೇವಸ್ಥಾನದ ವಾರ್ಷಿಕ ಮಹೋತ್ಸವದಲ್ಲಿ ಪಾಲ್ಗೊಳ್ಳಲು ’ಅಮ್ಮ’ ನಗರಕ್ಕೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಶಾಂತಿಗಾಗಿ ಗುರುವಾರ ಮತ್ತು ಶುಕ್ರವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಲಲಿತಾ ಸಹಸ್ರ ನಾಮಾರ್ಚನೆ, ವಿವಿಧ ವಿಶೇಷ ಪೂಜೆ, ಹೋಮ ಹವನಗಳು ನಡೆಯಲಿವೆ. ಅಮ್ಮನ ಸತ್ಸಂಗ, ಭಜನೆ, ಧ್ಯಾನ ಮತ್ತು ದರ್ಶನ ಲಭ್ಯವಿದೆ.

 ಎರಡೂ ದಿನ ಹೋಮ, ಪೂಜೆ ನಂತರ (ಬೆಳಿಗ್ಗೆ 11ರ ನಂತರ ಹಾಗೂ ಸಂಜೆ 7.30ರ ನಂತರ) ಸ್ವತಃ ಅಮ್ಮ ಭಕ್ತರಿಗೆ ವೈಯಕ್ತಿಕ ದರ್ಶನ ನೀಡಲಿದ್ದಾರೆ.ದರ್ಶನದ ಉಚಿತ ಟೋಕನ್‌ಗಳು ಆಶ್ರಮದ ಆವರಣದಲ್ಲಿ ದೊರೆಯುತ್ತವೆ.
 
ಆಶ್ರಮದ ವಿಳಾಸ: 136, ಮಾತಾ ಅಮೃತಾನಂದಮಯಿ ರಸ್ತೆ, ಜ್ಞಾನಭಾರತಿ 2ನೇ ಹಂತ. ಮಾಹಿತಿಗೆ: 2324 1439, 94805 51070.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT