ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಪೆಟ್ರೋಲ್ ವಿತರಕರ ಮುಷ್ಕರ: ಗೊಂದಲ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಕಮಿಷನ್ ಹೆಚ್ಚಿಸಲು ಒತ್ತಾಯಿಸಿ ಅ.15ರಂದು (ಸೋಮವಾರ) ಪೆಟ್ರೋಲ್ ಬಂಕ್‌ಗಳನ್ನು ನಿಯಮಿತ ಅವಧಿಯಲ್ಲಿ ಮಾತ್ರ ತೆರೆಯಲು (ಸಂಜೆ 6ರವರೆಗೆ ಮಾತ್ರ) `ಭಾರತೀಯ ಪೆಟ್ರೋಲಿಯಂ ವಿತರಕರ ಒಕ್ಕೂಟ~ ನೀಡಿರುವ ಕರೆಗೆ `ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಒಕ್ಕೂಟ~ (ಎಫ್‌ಎಐಪಿಟಿ) ಭಾನುವಾರ ವಿರೋಧ ವ್ಯಕ್ತಪಡಿಸಿದೆ.

ಸೋಮವಾರ ಪೆಟ್ರೋಲ್ ಬಂಕ್‌ಗಳು ಎಂದಿನಿಂತೆ ಕಾರ್ಯನಿರ್ವಹಿಸಲಿವೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಜಯ್ ಬನ್ಸಲ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಕಮಿಷನ್ ದರ ಹೆಚ್ಚಳ ಸಂಬಂಧ ಸೋಮವಾರ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ. ಹೀಗಾಗಿ ಪ್ರತಿಭಟನೆ ಕುರಿತ ನಿರ್ಧಾರವನ್ನು ಆ ನಂತರವಷ್ಟೇ ತೆಗೆದುಕೊಳ್ಳಲಾಗುವುದು~ ಎಂದು ಒಕ್ಕೂಟವು ಸ್ಪಷ್ಟಪಡಿಸಿದೆ.

ಅಪೂರ್ವ ಚಂದ್ರ ಸಮಿತಿಯ ಶಿಫಾರಸಿನಂತೆ ನಿರ್ವಹಣಾ ವೆಚ್ಚ ಆಧರಿಸಿ ಕಮಿಷನ್ ನೀಡಬೇಕೆಂಬುದು ವಿತರಕರ ಒತ್ತಾಯ. ಆರು ತಿಂಗಳಿಗೊಮ್ಮೆ ಕಮಿಷನ್ ದರ ಪರಿಷ್ಕರಿಸಬೇಕೆಂಬುದೂ ಸಮಿತಿಯ ಶಿಫಾರಸುಗಳಲ್ಲಿ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT