ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಭಾರತಕ್ಕೆ ಅಮೆರಿಕ ವಾಣಿಜ್ಯ ನಿಯೋಗ

Last Updated 5 ಫೆಬ್ರುವರಿ 2011, 17:00 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗ್ಯಾರಿ ಲಾಕ್ ನೇತೃತ್ವದಲ್ಲಿ ವಾಣಿಜ್ಯ ನಿಯೋಗವು ಫೆಬ್ರುವರಿ 6ರಂದು ನವದೆಹಲಿಗೆ ಆಗಮಿಸಲಿದೆ.

ಆಮದು-ರಫ್ತು ಬ್ಯಾಂಕಿನ ಮತ್ತು ಅಮೆರಿಕದ ವಾಣಿಜ್ಯ ಅಭಿವೃದ್ಧಿ ಏಜೆನ್ಸಿಯ ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುವ ಈ ನಿಯೋಗವು ಬೆಂಗಳೂರು ಮತ್ತು ಮುಂಬೈಗೆ ಕೂಡ ಭೇಟಿ ನೀಡಲಿದೆ. ಫೆಬ್ರುವರಿ 8 ಮತ್ತು 9ರಂದು ಬೆಂಗಳೂರಿಗೆ ಭೇಟಿ ನೀಡುವ ಈ ನಿಯೋಗವು ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲಿದೆ.

ಅಲ್ಲದೆ ಎಚ್‌ಎಎಲ್‌ಗೆ ಭೇಟಿ ನೀಡಲಿದೆ.ಫೆಬ್ರುವರಿ 9ರಂದು ಲಾಕ್ ಅವರು, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಇಸ್ರೊದ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮುಂಬೈಗೆ ಪಯಣಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT